ಪುಟ:ತಿಲೋತ್ತಮೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ಸಹಜಪ್ರೇಮ. ಹೋಗದಿರುವದು ಆತನಿಗೆ ಯೋಗ್ಯವಾಗಿ ತೋರಲಿಲ್ಲ. ಅತ್ಯ ತಿಲೋತ್ತ, ಮೆಯು ಆತನ ಮನಸ್ಸನ್ನು ಆಕರ್ಷಿಸಹತ್ತಿದಳು. ಪಠಾಣರೊಡನೆ ಒಪ್ಪಂ ದವಾದದ್ದರಿಂದ ಮಂದಾರಣಗಡವು ವೀರೇಂದ್ರ ಸಿಂಹನ ಹೆಂಡತಿಯಾದ ವಿಮಲಾದೇವಿಯ ವಶಕ್ಕೆ ಹೋದದ್ದರಿಂದ, ತಿಲೋತ್ತಮೆಯೊಡನೆ ವಿಮ ಲಾದೇವಿಯು ಈಗ ಮಂದಾರಣಗಡದೊಳಗೇ ಇರುತ್ತಿದ್ದಳು, ಈ ಸಂಗ ತಿಯು ಆಯೇಷೆಯ ಮುಖದಿದ ಜಗತ್ತಿಂಗನಿಗೆ ಗೊತ್ತಾಗಿತ್ತು; ಆದ್ದರಿಂದ ಆತನು ಈಗ ತಾನು ತಂದೆಯಬಳಿಗೆ ಹೋಗಬೇಕೋ, ತಿಲೋತ್ರ ಮೆಯಬಳಿಗೆ ಹೋಗಬೇಕೊ ಎಂದು ಆಲೋಚಿಸಹತ್ತಿದನು. ಹೀಗೆ ಆಲೋಚಿಸುತ್ತ ಆತನು ಮಾರ್ಗವನ್ನು ಕ್ರಮಿಸುತ್ತಿರುವಾಗ, ಅಕಸ್ಮಾ ತ್ಯಾಗಿ ಆತನಿಗೆ ಅಭಿರಾಮಸ್ವಾಮಿಗಳ ದರ್ಶನವಾಯಿತು. ಆಗ ಜಗತ್ತಿಂ ಗನು ಕುದುರೆಯಿಳಿದು ಸ್ವಾಮಿಗಳನ್ನು ಅಭಿನಂದಿಸಿ ಕೈಜೋಡಿಸಿ ನಿಂ ತುಕೊಳ್ಳಲು, ಅಭಿರಾಮಸ್ವಾಮಿಗಳು ಆಶೀರ್ವಚನಪೂರ್ವಕವಾಗಿ ಜಗತ್ಸಂ ಗನ ಯೋಗಕ್ಷೇಮವನ್ನು ವಿಚಾರಿಸಿ, ತಿಲೋತ ಮೆಯು ಮಂದಾರಣಗಡ ದಲ್ಲಿ ಬೇನೆಯಿಂದ ಬಳಲುತ್ತಿರುವಳೆಂದು ಹೇಳಿದರು. ತಂದೆಯ ಕಡೆಗೆ, ಹಾಗು ತಿಲೋತ್ತಮೆಯ ಕಡೆಗೆ ತೂಗಾಡು ' ಆದ ಜಗತ್ನಿಂಗನ ಮನಸ್ಸು ಅಭಿರಾಮಸ್ವಾಮಿಗಳ ಮಾತಿನಿಂದ ತಿಲೋ ತಮೆಯ ಕಡೆಗೆ ವಿಶೇಷವಾಗಿ ಒಲಿಯಿತು. ತಂದೆಯಮುಂದೆ ನಿಂತು ಕೊಳ್ಳಲಿಕ್ಕೆ ಮೊದಲೇ ಹೆದರುತ್ತಿದ್ದ ಆತನು ತಿಲೋತ್ತಮೆಯ ಯೋಗ ಕ್ಷೇಮವನ್ನು ವಿಚಾರಿಸುವ ನೆವದಿಂದ ಮಂದಾರಣಗಡಕ್ಕೆ ತೆರಳಿದನು. ಜಗಕ್ಸಿಂಗನು ಕಾರಾಗೃಹದಲ್ಲಿ ತಿಲೋತ್ತಮೆಯನ್ನು ತಿರಸ್ಕರಿಸಿದಾಗ, ಆ ಕೋಮಲಹೃದಯದ ತರುಣಿಯ ಪರಿತಾಪಗೊಂಡು ಬೇರೆಬಿದ್ದಳು. ಆ ಚಿತ್ರ ಪರಿತಾಪದಿಂದ ಆಕೆಯು ದಿನದಿನಕ್ಕೆ ಕ್ಷೀಣವಾಗತೊಡಗಿದ್ದಳು. ಅಷ್ಟ ರಲ್ಲಿ ಜಗತ್ತಿಂಗನು ಆಕೆಯ ಬಳಿಗೆ ಹೋದನು. ತನ್ನ ಪ್ರಿಯಳ ಕೃಶಾಂಗ ನನ್ನೂ, ಆಕೆಯ ನಿಸ್ತೇಜವಾದ ಮುಖವನ್ನೂ ನೋಡಿ ಜಗತ್ನಿಂಗನ ಎದೆ ಯೊಡೆದು ನೀರಾಯಿತು, ತನ್ನ ಕೃತಜ್ಞತೆಗಾಗಿ ಆತನು ತನ್ನನ್ನು ಬಹಳ ವಾಗಿ ಹಳಿದುಕೊಂಡನು. ಇಂಥ ದುರವಸ್ಥೆ ಯಲ್ಲಿಯ ತಿಲೋತ್ತಮೆಯನ್ನು ಬಿಟ್ಟು ಹೋಗಲಿಕ್ಕೆ ಆತನ ಕಾಲುಗಳು ಏಳದಾದವು, ತಿಲೋತ್ತಮೆಗೆ