ಪುಟ:ತಿಲೋತ್ತಮೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ನೆಟ್ಟಗಾಗುವವರೆಗೆ ತಾನು ತಂದೆಯ ಬಳಿಗೆ ಹೋಗಬಾರದೆಂದು ಆತನು. ನಿಶ್ಚಯಿಸಿದನು. ತನ್ನ ಅಪರಾಧವನ್ನು ಕ್ಷಮಿಸುವದಕ್ಕಾಗಿ ಆತನು ತಿಲೋ ತಮೆಯನ್ನು ಪರಿಪರಿಯಾಗಿ ಪ್ರಾರ್ಥಿಸಹತ್ತಿದನು. ತನ್ನ ಪತಿಯು ತನ್ನನ್ನು ಹೀಗೆ ಪ್ರೀತಿಸಹತ್ತಿದ್ದೇ ಆಕೆಗೆ ಮಹೌಷಧಿಯಾಗಿತ್ತು. ಆಕೆಯು ದಿನದಿನಕ್ಕೆ ಆರೋಗ್ಯವನ್ನು ಪಡೆಯಹತ್ತಿದಳು. ಅತಿ ಪರಿಚಯದಿಂದ ತಿಲೋತ್ತಮೆಯ ಸದ್ಗುಣಗಳ ಪರಿಚಯವು ಜಗಂಗನಿಗೆ ದಿನದಿನಕ್ಕೆ ಹೆಚ್ಚು ಹೆಚ್ಚು ಆಗಹತ್ತಲು, ಆತನು ಆ ಸುಂದರಿಯನ್ನು ಬಿಟ್ಟು ಕದಲ ದಾದನು. ಹೀಗಾಗುತ್ತೆ ಕೆಲವು ದಿನಗಳಲ್ಲಿ ತಿಲೋತ್ತಮೆಯು ಪೂರ್ಣ ಆರೋಗ್ಯವನ್ನು ಪಡೆಯಲು ಎಲ್ಲರಿಗೂ ಸಂತೋಷವಾಯಿತು. ಜಗ೦ಗನೊಡನೆ ತಿಲೋತ್ತಮೆಯ ವಿವಾಹವನ್ನು ಸಮಾರಂಭ ದಿಂದ ಮಾಡಬೇಕೆಂಬ ಇಚ್ಛೆಯು ವಿಮಲಾದೇವಿಗೂ, ಮಂದಾರಣಗಡದ ಪಜೆಗಳಿಗೂ ಉತ್ಪನ್ನವಾಯಿತು. ಈ ಮಾತನ್ನು ಕುರಿತು ವಿಮಲಾದೇ ವಿಯು ಅಭಿರಾಮಸ್ವಾಮಿಗಳನ್ನು ಕೇಳಲು, ಅವರು_ದೇವೀ, ನಾನು ನಿನಗೆ ಒಮ್ಮೆ ಹೇಳಿದ್ದೇನೆ, ಮೊಗಲರ ಹಾಗು ಪಠಾಣರ ಯುದ್ದವು ಮುಗಿಯುವವರೆಗೆ ತಿಲೋತ್ತಮೆಯ ವಿವಾಹದಿಂದ ಸುಖವಾಗುವಹಾಗಿಲ್ಲ. ಸದ್ಯಕ್ಕೆ ಆಗಿರುವ ಒಡಂಬಡಿಕೆಯು ಯುದ್ಧದ ಸಮಾಪ್ತಿಯ ಲಕ್ಷಣ ವೆಂದು ತಿಳಿಯಬೇಡ. ಮೊನ್ನೆ ಅಕಸ್ಮಿಕವಾಗಿ ಕಾತಲೂಖಾನನು ಮರ ಣಹೊಂದಿದನು. ತಾರುಣ್ಯದಲ್ಲಿರುವ ಆತನ ಇಬ್ಬರು ಮಕ್ಕಳು ಈ ಒಡಂ ಬಡಿಕೆಯನ್ನು ಮುರಿಯದೆ ಬಿಡರು. ಪಠಾಣರು ಸ್ವಾತಂತ್ರ ಪ್ರಿಯರು; ಪಾರತಂತ್ರವು ಅವರಿಗೆ ಮರಣಪ್ರಾಯವು; ಆದ್ದರಿಂದ ಬೇಗನೆ ಮೊಗ ಲರಿಗೂ, ಪಠಾಣರಿಗೂ ಯುದ್ಧವು ಆರಂಭವಾಗುವದು. ಆ ಯುದ್ದವು ಮುಗಿದ ಬಳಿಕ ಲಗ್ನ ಮಹೋತ್ಸವವನ್ನು ಮಾಡುವದು ಯೋಗ್ಯವು ಮೇಲಾಗಿ ಅಗ್ನಸಮಾರಂಭಕ್ಕೆ ಮಾನಸಿ೦ಗರ ಒಪ್ಪಿಗೆಯ ಅವಶ್ಯವಿರುತ್ತದೆ. ಅವರು ಯುದ್ಧದ ನಿರ್ಣಯವಾಗುವವರೆಗೆ ಮಗನ ವಿವಾಹಕ್ಕೆ ಎಂದಿಗೂ ಒಪ್ಪಿಗೆಯನ್ನು ಕೊಡಲಿಕ್ಕಿಲ್ಲ ಆದ್ದರಿಂದ ವಿಮಲಾದೇವೀ, ಸದ್ಯಕ್ಕೆ ವಿವಾ ಹಹಸಕ್ತಿಯನ್ನು ಬಿಡು, ಜಗಂಗನು ತಂದೆಯಬಳಿಗೆ ಹೋಗಿ, ಆತನ ಕನf ಪಾತ್ರನಾಗಿ, ವ೦ದ ಬೇಗನೆ ಒದಗಬೇಕಾಗಿರುವ ಪಠಾಣರ