ಪುಟ:ತಿಲೋತ್ತಮೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹಜಪ್ರೇಮ. ೩೯ ಯುದ್ಧದಲ್ಲಿ ಪರಾಕ್ರಮವನ್ನು ತೋರಿಸಿ, ತನ್ನ ಲಗ್ನಕ್ಕೆ ತನ್ನ ತಂದೆಯ ಒಪ್ಪಿಗೆಯನ್ನು ಪಡೆಯಲಿ, ಎಂದು ಹೇಳಿದರು; ಆದರೆ, ಭವಿತವ್ಯವನ್ನು ತಪ್ಪಿಸುವವರು ಯಾರು? ವಿಮಲಾದೇವಿಯ ಆಗ್ರಹದಿಂದ ತಿಲೋತ್ರ ಮೆಯ ವಿವಾಹಸಮಾರಂಭವು ಪೂರ್ಣವಾಯಿತು. ವಿವಾಹಕ್ಕೆ ಆಯ್ಕೆ ಸೆಯೂ ಬಂದಿದ್ದಳು. ತಿಲೋತ್ತಮೆಯೊಡನೆ ಆದ ಜಗ ತ್ರಿ೦ಗನ ವಿವಾಹವನ್ನು ನೋಡಿ ಆಯೇಷೆಯು ಕೌತುಕಪಟ್ಟಳು. ಜಗತ್ತಿಂಗನು ಆಯೇಷೆಯನ್ನು ಕೃತಜ್ಞ ತೆಯಿಂದ ಬಹಳವಾಗಿ ನನ್ನಿ ಸಿದನು, ತಿಲೋತ್ತಮಾ-ಆಯೇಷೆಯರಲ್ಲಿ ಪರಸ್ಪರ ಅಕೃತ್ರಿಮ ಸ್ನೇಹವು ಹೆಚ್ಚಿತು, ಜಗತ್ತಿಂಗನು ತನ್ನ ಪಾಣಿ ಗ್ರಹಣ ಮಾಡಿದಂತೆ ಆಯೆ ಸೇಯ ಪಾಣಿಗ್ರಹಣವನ್ನೂ ಮಾಡಬೇಕೆಂದು ತಿಲೋತ್ತಮೆಯ ಮನಸ್ಸಿನಲ್ಲಿ ಸಂಪೂರ್ಣವಾಗಿ ಇತ್ತು, ಆದರೆ ಜಗೆ ೬ಂಗನು ಅದಕ್ಕೆ ಒಪ್ಪಲಿಲ್ಲ. ಒಂದುದಿನ ಮಧ್ಯರಾತಿ ಯ ಸಮಯವು ಆಯೇ ಷೇಯು ತನ್ನ ಶಯನಗೃಹದಲ್ಲಿ ಒಬ್ಬಳೇ ಮಲಗಿಕೊಂಡಿದ್ದಳು. ಆಗ ಆಕೆಯ ಮನಸ್ಸಿನಲ್ಲಿ ಬಗೆಬಗೆಯ ವಿಚಾರಗಳು ಉತ್ಪನ್ನವಾದ್ದ ರಿಂದ, ಆಕೆಗೆ ನಿದ್ದೆಯು ಬರಲೊಲ್ಲದು, ತನ್ನ ಸ್ಥಿತಿಯನ್ನು ಸ್ಮರಿಸಿ ಆಕೆಗೆ ಬಹಳ ಪಶ್ಚಾತ್ತಾಪವಾಯಿತು. ಆಕೆಯು ಮನಸ್ಸಿನಲ್ಲಿ--ನನ್ನನ್ನು ಜಗನ್ಸಿಂಗನು ಲಗ್ನ ಮಾಡಿಕೊಳ್ಳುವಹಾಗಿಲ್ಲ, ನಾನು ಜಗತ್ಸಂಗನ ಹೊರತು ಅನ್ಯರನ್ನು ಲಗ್ನವಾಗುವಹಾಗಿಲ್ಲ. ನಾನು ಲಗ್ನ ಮಾಡಿಕೊಳ್ಳದೆ ಬ್ರಹ್ಮ ಚರ್ಯದಿಂದ ಇದ್ದೇನೆಂದರೆ, ಉಸ್ಮಾನನು ನನ್ನನ್ನು ಬಹಳವಾಗಿಪ್ರೀತಿಸುತ್ತ, ನನ್ನ ಪ್ರಾಪ್ತಿಗಾಗಿ ತಾಪಪಡಹತ್ತಿದ್ದಾನೆ, ಆತನಿಗೆ ತಾಪಕೊಡುತ್ತ ಆತನ ಬಳಿ ಯಲ್ಲಿ ಇರುವದಾದರೂ ಹೇಗೆ? ಉಸ್ತಾನನು ನನ್ನ ಹೊರತು ಬೇರೆ ಯವರನ್ನು ಲಗ್ನವಾಗಲಿಕ್ಕಿಲ್ಲೆಂದು ನಿಶ್ಚಯಿಸಿರುವನು, ಹಾಯ ಹಾಯ ದೈವದ ವಿಚಿತ್ರಗತಿಯೇ!! ನಾನು ಜಗಕ್ಸಿಂಗನನ್ನು ಪ್ರೀತಿಸುತ್ತಿರುವಾಕೆ ಜಗತ್ಸಂಗನು ನನ್ನನ್ನು ಪ್ರೀತಿಸಲೊಲ್ಲನು; ಅತ್ತ ಉಸ್ಮಾನನು ನನ್ನನ್ನು ಪ್ರೀತಿಸುತ್ತಿರುವಾಗ ನಾನು ಉಸ್ಮಾನನನ್ನು ಪ್ರೀತಿಸಲೊಲ್ಲೆನು. ಇಂಥಇಕ್ಕ ಟ್ಟಿನ ಪ್ರಸಂಗದಲ್ಲಿ ಜೀವದಿಂದಿರುವದಕ್ಕಿಂತ, ವಿಷಪಾನದಿಂದ ದೆ ಹತ್ಯಾಗೆ ಮಾಡುವದು ನೆಟ್ಟಗೆ, ಎಂದು ಯೋಚಿಸಿ, ತನ್ನ ಬೆರಳೊಳಗಿಟ್ಟು ಕೊಂಡಿದ್ದ