ಪುಟ:ತಿಲೋತ್ತಮೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ತಿಲೋತ್ತಮ ಉಂಗುರದೊಳಗಿನ ವಿಷವನ್ನು ಕುಡಿದು ದುಃಖದಿಂದ ಮುಕ್ತಳಾಗಬೇ ಕೆಂದು ಆಕೆಯುಉಂಗುರವನ್ನು ತಕ್ಕೊಂಡಳು. ಅಷ್ಟರಲ್ಲಿ ಪುನಃಆಕೆಯ ಮನ ಸ್ಸಿನಲ್ಲಿ ವಿಚಾರವು ಉತ್ಪನ್ನವಾಗಿ- ಅಲ್ಲಾನು ಹೀಗೆ ಮಾಡುವದಕ್ಕಾ ಗಿಯೇ ನನ್ನ ನ್ನು ಈ ಜಗತ್ತಿನಲ್ಲಿ ಹುಟ್ಟಿಸಿರುವನೊ? ನಾನು ಈ ಜಗ ತಿನಲ್ಲಿ ಹುಟ್ಟಿಬಂದು ಭೋಗಿಸತಕ್ಕ ದುಃಖಗಳನ್ನು ಭೋಗಿಸದಿದ್ದರೆ, ನಾನು ಹೆಂಗಸಾಗಿ ಹುಟ್ಟಿಯಾದರೂ ಫಲವೇನು? ನನ್ನ ಲಗ್ನಕ್ಕೆ ಬಂದ ಆಯೇಷೆಯು ಹೀಗೆ ಪ್ರಾಣತ್ಯಾಗ ಮಾಡಿದಳೆಂದು ತಿಳಿದರೆ ಜಗತ್ತಿಂಗ ಗನಿಗೆ ದುಃಖವಾದೀ ತಲ್ಲ! ನನ್ನ ಪ್ರಿಯನಿಗೆ ದುಃಖವಾಗುವ ಕೆಲಸವನ್ನು ನಾನು ಯಾಕೆ ಮಾಡಬೇಕು? ಎಂದು ಅಂದುಕೊಂಡು, ಇಂಥ ಪ್ರಸಂ ಗವೇ ಪುನಃ ಬರಬೇಡೆಂದು ಆ ಉಂಗುರವನ್ನು ಆಕೆಯು ಕೋಟೆಯ ಕಂದಕದಲ್ಲಿ ಬಿಸಾಟಿದಳು. ೫ನೆಯ ಪ್ರಕರಣ, ಕರ್ಮಫಲ. -ಆGG.. ವಿವಾಹಕಾರ್ಯವಾದ ಬಳಿಕ ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಹೊರ ಟುಹೋದರು, ಆಯೇಷೆಯೂ ಜಗಂಗನ ಒಪ್ಪಿಗೆಯಿಂದ ತನ್ನ ಸ್ಥಳಕ್ಕೆ ತೆರಳಿದಳು. ಇತ್ತ ನವವಧುವಾದ ತಿಲೋತ್ತಮೆಯೊಡನೆ ಜಗತ್ತಿಂಗನು ನಿಲಾ ಸಸುಖವನ್ನು ಭೋಗಿಸಹತ್ತಿದನು. ಸದ್ಗುಣಸಂಪನ್ನಳೂ, ಲೋ ಕೊತ್ತರ ಸುಂದರಿಯೂ, ಸಾಧಿಯೂ ಆದ ತಿಲೋತ್ತಮೆಯ ಸಹವಾಸವು ಆತನಿಗೆ ಸ್ವರ್ಗವಾಸಕ್ಕಿಂತ ಅಧಿಕವಾಯಿತು. ದಾರುಕೇಶ್ವರ ನದಿಯ ದಂಡೆಯಲ್ಲಿ ಸೈನ್ಯದ ಬೀಡು ಬಿಟ್ಟು ಕೊಂಡು ವಾಸಮಾಡಿದ್ದ ರಾಜಾಮಾನಸಿಂಗನು, ಪತಾ ಣರೊಡನೆ ಒಡಂಬಡಿಕೆಯಾಗಿ ಯುದ್ಧವು ಒಮ್ಮೆಲೆ ನಿಂತುಹೋದದ್ದರಿಂದ, ತನ್ನ ಠಾಣ್ಯವನ್ನು ಕಿತ್ತು ಪಾಟಣಾಕ್ಕೆ ಹೋಗಿದ್ದನು. ಹೀಗೆ ತನ್ನ ತಂದೆಯು ದಾರುಕೇಶ್ವರ ತೀರದಿಂದ ಹೊರಟುಹೋಗುವಾಗ ಜಗತ್ತಿಂಗನು ಆತನ ದರ್ಶ ನಕ್ಕೆ ಸಹ ಹೋಗಲಿಲ್ಲ. ಈಗ ಕುಮಾರ ಜಗತ್ತಿಂಗನ ತಲೆಯಮೇಲೆ ಸಾಮ್ರಾ ಜ್ಯದ ಯಾವಭಾರವೂ ಇದ್ದಿಲ್ಲ. ಆತನ ಮನಸ್ಸಿಗೆ ಬಂದಲ್ಲಿ ಇರಲಿಕ್ಕೆ ಆತ