ಪುಟ:ತಿಲೋತ್ತಮೆ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಮಫಲ. ೪೧ ನಿಗೆ ಅಧಿಕಾರವಿತ್ತು: ಆದರೆ ಮಂದಾರಣಗಡದಲ್ಲಿ ತಿಲೋತ್ತಮೆಯ ಸಮಾಗ ಮದ ಸುಖದಲ್ಲಿಯೇ ಬಹುತರ ಆತನ ಕಾಲಹರಣವಾಗುತ್ತಿತ್ತು. ಆತನ ಸೈನಿಕರಿಗೆ ಕೆಲಸವೇನುಇಲ್ಲದ್ದರಿಂದ, ಅವರು ದಾರುಕಶ್ವರ ನದಿಯ ತೀರದಲ್ಲಿ ಆಲಸ್ಯದಿಂದ ಕಾಲಹರಣಮಾಡು ತ್ತಿದ್ದರು. ಒಂದುದಿನ ಸಾಯಂಕಾಲದ ಸಮಯವು, ನಾಲ್ಕು ತಾಸು ರಾತ್ರಿಯಾ ಗಿದೆ. ಜಗಕ್ಸಿಂಗನು ಉನ್ನತವಾದ ಸುಂದರ ಅಂತಃಪುರದ ಮುಂಬದಿಯಲ್ಲಿ ಒಬ್ಬನೇ ಅತ್ತಿಂದಿತ್ತ ಇತ್ತಿಂದತ್ತ ಓಡಾಡಹತ್ತಿದ್ದಾನೆ. ಭಯಗ್ರಸ್ತನಾಗಿರು ವಂತೆ ಅತನ ಮುಖಮುದ್ರೆಯಿಂದ ತೋರುತ್ತಲಿದೆ. ಆತನ ಸುತ್ತು ಮುತ್ತ ಲಿದ್ದ ಯಾವ ಸುಂದರ ವಸ್ತುಗಳಿಂದಲೂ ಆತನ ಮನಸ್ಸು ರಮಿಸದಾಗಿದೆ. ವಾಚಕರೇ, ತನ್ನ ತನು-ಮನೋ-ಧನಗಳನ್ನು ಅರ್ಪಿಸಿ, ಪ್ರೇಮಾತಿಶಯ ದಿಂದ ತಿಲೋತ್ತಮೆಯು ಸೇವಾತತ್ಸರಳಾಗಿರುವಾಗ ಜಗತ್ತಿಂಗನ ವೃತ್ತಿಯು ಹೀಗೆ ಯಾಕಾಗಿರಬಹದು? ಆತನಿಗೆ ತಿಲೋತ್ತಮೆಯ ಸಮಾಗಮವಾಗಿ ಇನ್ನೂ ಒಂದು ತಿಂಗಳುಸಹ ಪೂರ್ಣವಾಗಿದ್ದಿಲ್ಲ. ಆತನಿಗೆ ಯಾತರ ಕೊರ ತೆಯೂ ಇದ್ದಿಲ್ಲ. ಹೀಗಿದ್ದು ಆತನು ಈಗ ಅತ್ಯಂತ ಭಯಗ್ರಸ್ತನಾಗಿದ್ದನು. ಹೀಗಿರುವಾಗ ತಿಲೋತ್ತಮೆಯು ಮಂದಗಮನದಿಂದ ಜಗತ್ತಿಂಗನ ಬಳಿಗೆ ಬಂದು ಅತ್ಯಂತ ವಿನಯದಿಂದ ತಿಲೋತ್ತಮೆ-ಬರಲಿಕ್ಕೆ ನನ್ನಿಂದ ತಡವಾಗಲಿಲ್ಲವಷ್ಟೆ? ಜಗತ್ಸಂಗ-ನಿನಗೆ ಬರಲಿಕ್ಕೆ ತಡವಾಗದಿದ್ದರೂ, ನಿನ್ನ ವಿಯೋಗವು ನನಗೆ ದುಸ್ಸಹವಾಗಿರುವದರಿಂದ, ನೀನು ಅಲ್ಪ ಕಾಲ ನನ್ನನ್ನು ಅಗಲಿ ಹೋ ದರೂ ನನಗೆ ಅಸಮಾಧಾನವಾಗುವದು. ತಿಲೋತ್ತಮೆ-ನನ್ನ ಮೇಲಿನ ಪರಮಾನುಗ್ರಹಕ್ಕಾಗಿ ನಾನು ಕೃತ ಜ್ಞಳಾಗಿರುವೆನು. ಜಗತ್ತಿಂಗ-ಸುಶೀಲೆ, ನಿನ್ನ ಕೃತಜ್ಯಗೆ ಪಾತ್ರನಾದ ನಾನು ಧನ್ಯನೇ ಸರಿ, ನಾನು ಬಹು ಪುಣ್ಯಶಾಲಿಯಾದದ್ದರಿಂದಲೇ ನಿನ್ನಂಥ ಅಮೂಲ್ಯ ರತ್ನದ ಲಾಭವು ನನಗಾಗಿರುತ್ತದೆ. ನಳಪ ಯಾದ ದಮಯಂತಿಯಂತೆ ನೀನು ದೇವಾದಿಕರಿಗೂ ದುರ್ಲಭಳಾಗಿರುವಾಗ, ಕುದ್ರಮಾನವನಾದ ನನಗೆ ನೀನು ಲಭಿಸಿದ್ದು ನನ್ನ ಪ್ರಾಚೀನ ಪುಣ್ಯವಲ್ಲದೆ ಮತ್ತೇನು?