ಪುಟ:ತಿಲೋತ್ತಮೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿರಸ್ಕಾರ. ೮೧ ಇದರ ಅವಸ್ಥೆಯನ್ನು ಹೀಗೆ ಯಾರು ಮಾಡಿದರು? ನಬಾಬಸಾಹೇಬ, ನಿಮ್ಮ ಉಡಿಗೆತೊಡಿಗೆಗಳು ರಕ್ತ ಮುಣುಗಿರುವದನ್ನು ನೋಡಿದರೆ, ನೀವೇ ಈ ಸರ್ಪ ನನ್ನು ಕೊಂದಿರೆಂಬಂತೆ ಕಾಣುತ್ತದೆ. ಅದು ನೋಡಿರಿ, ಇನ್ನೂ ಅದರ ಜೀವವು ಹೋಗಿರುವದಿಲ್ಲ. ನಿಮ್ಮನ್ನು ನೋಡಿ ಸಿಟ್ಟಿನಿಂದ ಅದು ಹೇಗೆ ಬಾಯಿ ತೆರೆಯುತ್ತದೆ! ಅನ್ನಲು ಖಾನನು-ಆಯೇ ಷೇ, ಇದ್ದ ಸಂಗತಿಯನ್ನು ಹೇಳು ತೇನೆ ಕೇಳು. ನಿನ್ನ ಪ್ರಕೃತಿಯು ನೆಟ್ಟಗಿಲ್ಲೆಂದು ನಿನ್ನ ತಾಯಿಯು ನನ್ನ ಮುಂದೆ ಹೇಳಲು, ನನಗೆ ಬಹಳ ಅಸಮಾಧಾನವಾಗಿ, ಕೂಡಲೆ ನಾನು ನಿನ್ನನ್ನು ಕಾಣುವದಕ್ಕಾಗಿ ನಿನ್ನ ಕೋಣೆಗೆ ಬಂದೆನು; ಆದರೆ ನೀನು ನಿದ್ದೆ ಹತ್ತಿ ಮಲಗಿದ್ದೆ, ಕೂಡಲೆ ನಾನು ಹೊರಗೆ ನಿಂತು ಆಲೋಚಿಸಹತ್ತಿದೆನು, ನಿನ್ನನ್ನು ಎಚ್ಚರಗೊಳಿಸಲಿಕ್ಕೆ ಸಂಕೋಚವಾಗತೊಡಗಿತು. ಕೆಲವು ಸಂಗತಿಗಳಲ್ಲಿ ನಿನ್ನ ಅಭಿಪ್ರಾಯವನ್ನು ಕೇಳಿಕೊಳ್ಳಬೇಕಾಗಿತ್ತು, ಹೀಗೆ ನಾನು ಹೊರಗೆ ನಿಂತು ಆಲೋಚಿಸುತ್ತ ನಿನ್ನ ಕಡೆಗೆ ನೋಡುತ್ತಿರಲು, ನಿನ್ನ ಎದೆಯಮೇಲೆ ಏನೋ ಕರಗೆ ಬಿದ್ದಿರುವಂತೆ ನನಗೆ ಕಂಡಿತು. ನನಗೆ ಮೊದಲು ಅದು ಹಾವಿನಂತೆ ತೊರಲೇ ಇಲ್ಲ. ನಿಮ್ಮ ಕೇಶಗಳ ದೊಂದು ಸೆಳಕು ಬಿದ್ದಿರಬಹುದೆಂದು ತರ್ಕಿಸಿದೆನು; ಆದರೆ ಅಷ್ಟರಲ್ಲಿ ಆ ಕರಿಯ ಪದಾರ್ಥವು ಸರಿದಾಡಿದಂತೆ ತೊರಲು, ಅದೇನಿರುತ್ತದೆ, ಚನ್ನಾಗಿ ಪರೀಕ್ಷಿಸಿ ಬಾ ಎಂದು ನಿಮ್ಮ ಈ ದಾಸಿಯನ್ನು ಒಳಗೆ ಕಳಿಸಿದೆನು. ಆಕೆಯು ಹೊರಗೆ ಬಂದು ಅದು ಕೃಷ್ಣ ಸರ್ಪ ವೆಂದು ಹೇಳಲು, ನಾನು ಉಪಾಯವಿಲ್ಲದೆ ಕೋಣೆಯೊಳಗೆ ಹೋಗಬೇಕ. ಯಿತು. ನೀನು ಸ್ವಲ್ಪ ಅಲ್ಲಾಡಿದರೆ ಸರ್ಪವು ನಿಶ್ಚಯವಾಗಿ ಕಚ್ಚುವಂತೆ ತೋರಿತು. ಕೂಡಲೆ ನಾನು ಒಳಗೆ ಹೋಗಿ ನಿನ್ನ ಅಂಗಸ್ಪರ್ಶಮಾಡದೆ ಸರ್ಪದ ಬಾಲವನ್ನು ಹಿಡಿದು ಅದನ್ನು ಹೊರಗೆ ಬಿಸುಟ, ಕಡೆಗೆ ಅದನ್ನು ಈ ಸ್ಥಿತಿ ಯಲ್ಲಿ ಗೊತ್ತಿಗೆ ಹಚ್ಚಿದೆನು. ಆಯೇ ಷೇ, ಇದರಲ್ಲಿ ನನ್ನ ದುರಾಲೋಚನೆ ಯಾಗಲಿ, ದುರ್ವವಹಾರವಾಗಲಿ ಏನಿರುತ್ತದೆ ಹೇಳು ನೋಡೋಣ! ನೀನು ನನ್ನ ಮೇಲೆ ಹೊರಿಸಿದ ಅಪವಾದಗಳು ತೀರ ಸುಳ್ಳು ಇರುತ್ತವೆ. ಅಂಥ ನೀಚ ತನಕ್ಕೆ ನಾನು ಎಂದಿಗೂ ಹೋಗಲಾರೆನು. ಈಗ ಆಯೇಷೆಯ ಕಣ್ಣುಗಳು ನಿಚ್ಚಳವಾಗಿ ತೆರೆದವು, ಆ ಸರಳ ಹ ದಯದ ಬಾಲೆಯು ಆಕಾಶದ ಕಡೆಗೆ ಮುಖವೆತ್ತಿ ದೇವರನ್ನು