ಪುಟ:ತಿಲೋತ್ತಮೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ತಿಲೋತ್ತಮೆ. ಆಯೇಷೆ-ಸುಳ್ಳಾಡಲಿಕ್ಕೂ ನಿಮಗೆ ನಾಚಿಕೆಬರುವದಿಲ್ಲವೇ? ಈಗ ನೀವು ನಬಾಬರಿರುತ್ತೀರಿ; ಯಾವತ್ತು ಮಹಾಲಿನಮೇಲೆ ನಿಮ್ಮ ಅಧಿಕಾರವಿ ರುತ್ತದೆ; ನೀವು ಏನು ಮಾಡಿದರೂ ಜನರು ನಿಮ್ಮ ಕೈಹಿಡಿಯುವಹಾಗಿಲ್ಲ; ಹೀಗಿರುವದೆಂದು ತಿಳಿದು ನೀವು ಅಂತಗ್ರ್ರಹದಲ್ಲಿದ್ದ ಹೆಣ್ಣು ಮಕ್ಕಳಮೇಲೆ ಬಲಾತ್ಕಾರಮಾಡಹತ್ತಿದರೆ, ನಬಾಬಸಾಹೇಬ, ನಿಮ್ಮ ನಬಾಬಗಿರಿಯು ನಾಲ್ಕು ದಿನಗಳಲ್ಲಿ ಮಣ್ಣುಗೂಡಿ ಹೋದೀತೆಂಬದನ್ನು ಚೆನ್ನಾಗಿ ನೆನಪಿನಲ್ಲಿಡಿರಿ. ಉಸ್ಮಾನ-ಆಯೇ ಷೇ, ನೀನು ಹೀಗೆ ನಿಷ್ಟು ರಮಾತುಗಳನ್ನಾಡಿ ನಿಷ್ಕಾರಣವಾಗಿ ನನ್ನ ಮನಸ್ಸನ್ನು ನೋಯಿಸಬೇಡ ನಾನು ಎಷ್ಟು ಮಾ ತ್ರವೂ ಅಡ್ಡ ಹಾದಿಯನ್ನು ತುಳಿದಿರುವದಿಲ್ಲೆಂದು ಇನ್ನೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ, ಆದರೆ ನಾನು ಒಳಗೆ ಯಾಕೆ ಬಂದೆನೆಂಬದನ್ನೂ, ನಾನು ಒಳಗೆ ಬಂದು ಏನು ಮಾಡಿದೆನೆಂಬದನ್ನೂ ನಾನೂ ಹೇಳಲಾರೆನು, ನಿನ್ನ ದಾಸಿ ಯೂ ಹೇಳಭಾರಳು! ಆಯೇಷ-ಏನಂದಿರಿ? ನೀವು ಹೇಳಲಾರಿರಿ? ದಾಸಿಯೂ ಹೇಳಲಾ ರಳೇ? ಅದೇಕೆ? ನೀವು ಒಳಗೆ ಯಾಕೆ ಬಂದಿರೆಂಬದನ್ನೂ, ಒಳಗೆ ಬಂದು ಏನು ಮಾಡಿದಿರೆಂಬದನ್ನೂ ನೀವೇ ಬಾಯಿಬಿಟ್ಟು ಹೇಳಲಿಕ್ಕೆ ಬೇಕು, ಇಲ್ಲದಿ ದ್ದರೆ ಆಯೇಷೆಯು ಜೀವಿಸಲಾರಳು. - ಉಸ್ಮಾನ(ಬಹಳಹೊತ್ತು ವಿಚಾರಿಸಿ)-ಆಯೇಷೆ, ಇದೇನು ನಿನ್ನ ಹಟಮಾರಿತನವು! ನಾನು ಯಾವ ಮಾತನ್ನು ಎಂದೂ ನಿನ್ನ ಮುಂದೆ ಹೇಳ ಬಾರದೆಂದು ಮಾಡಿದ್ದೇನೋ!! ಆ ಮಾತನ್ನು ನಿನ್ನ ಸಮಾಧಾನಕ್ಕಾಗಿ ಈಗ .ಹೇಳಬೇಕಾಯಿತು. ಉಪಾಯವಿಲ್ಲ! ಒಳ್ಳೇದು ನಡೆ ಆಯೇಷೇ, ನನ್ನ ಸಂಗಡ ನಡೆ. ಖಾನನು ಮುಂದಕ್ಕೆ ಸಾಗಹತ್ತಿದನು, ಆಯೇಷೆಯು ಆತನನ್ನು ಅನುಸರಿಸಿ ನಡೆದಳು. ಕೃಷ್ಣ ಸರ್ಪದ ಭಿನ್ನ ವಿಚ್ಛಿನ್ನವಾದ ಶರೀರವು ಬಿದ್ದ ಲ್ಲಿಗೆ ಹೋದಬಳಿಕ ಉಸ್ಮಾನನು ಆಯೇಷೆಯನ್ನು ಕುರಿತು-ಇತ್ತ ನೋಡು, ಆಯೇಷೆ ಇಲ್ಲಿ ಏನು ಬಿದ್ದಿರುತ್ತದೆಂಬುದನ್ನು ನೋಡು, ಎಂದು ಹೇಳಿದನು. ಭಿನ್ನ ವಿಚ್ಛಿನ್ನವಾದ ಆ ಕೃಷ್ಣಸರ್ಪವನ್ನು ನೋಡಿದ ಕೂಡಲೆ ಆಯೆಕಯು ಆಂಜಿ ಹಿಂದಕ್ಕೆ ಸರಿದು-ಅವ್ವಯ್ಯ! ಇದು ಭಯಂಕರವಾದ ಕೃಷ್ಣ ಸರ್ತವು!