ಪುಟ:ತಿಲೋತ್ತಮೆ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿರಸ್ಕಾರ. ೬, ಮೋತಿಯು ಉದ್ಯಾನದಲ್ಲಿ ಅತ್ತಿತ್ತ ನೋಡುತ್ತಿರಲು, ಉಸ್ಮಾನನು ಪುಷ್ಕರಣಿಯಲ್ಲಿ ಕೈಕಾಲುಗಳನ್ನು ತೊಳಕೊಂಡು, ಒಂದು ವೃಕ್ಷದ ಬುಡ ದಲ್ಲಿ ಕುಳಿತುಕೊಂಡಿದ್ದನು. ಅದನ್ನು ನೋಡಿ ದಾಸಿಯು ಆಯೇಷೆಗೆಅದೋ ನೋಡಿರಿ, ನಬಾಬಸಾಹೇಬರು ಪುಷ್ಕರಣಿಯ ದಂಡೆಯಲ್ಲಿ ಕುಳಿತು ಕೊಂಡಿರುತ್ತಾರೆ, ಎಂದು ಬೆರಳುಮಾಡಿ ತೋರಿಸಲು, ಆಯೇಷೆಯು ಆತು ರದಿಂದ ಅತ್ತ ಕಡೆಗೆ ಹೊರಟಳು. ಆಕೆಯ ನೂಪುರದ ಮಂಜುಲಧ್ವನಿಯು ಉಸ್ಮಾನನ ಕಿವಿಗೆ ಬೀಳಲು, ಆಯೇಷೆಯು ಇನ್ನೂ ದೂರವಿದ್ದರೂ ಆಕೆಯ ಸನ್ಮಾನಕ್ಕಾಗಿ ಉಸ್ಮಾನನು ಎದ್ದು ನಿಂತುಕೊಂಡನು, ಕೋಧಸಂತಪ್ತಳಾದ ಆಯೇಷೆಯು ಖಾನನ ಬಳಿಗೆ ಬಂದು ಕೂಡಲೆ ಆತನನ್ನು ಕುರಿತು-ನಬಾ ಬಸಾಹೇಬ, ನಿಮ್ಮ ಮನಸ್ಸಿನ ಬಯಕೆಯನ್ನು ಪೂರ್ಣಮಾಡಿಕೊಂಡಿರಾ? ನಾನು ನಿದ್ದೆ ಹತ್ತಿ ಮಲಗಿರುವಾಗ ನನ್ನ ಮೈಮೇಲಿನ ವಸ್ತ್ರಗಳು ಅಸ್ತವ್ಯಸ್ತ ವಾಗಿರಲು, ನೀವು ನನ್ನ ಕೋಣೆಯಲ್ಲಿ ಬಂದಿರಾ? ಇಲ್ಲಿಯವರೆಗೆ ನಾನು ನಿಮ್ಮನ್ನು ಬಹು ದೊಡ್ಡ ಮನುಷ್ಯರೆಂತಲೂ, ಸಂಭಾವಿತರೆಂತಲೂ ತಿಳಿದಿ ದೈ ನು; ಆದರೆ ಇಂದು ನಿಮ್ಮ ಸ್ವರೂಪನ್ನು ಹೊರಗೆಡವಿ, ನಿಮ್ಮ ಕಿ'ರ್ತಿಗೆ ಕಲಂಕವನ್ನುಂಟುಮಾಡಿಕೊಂಡಿರಿ, ಎಂದು ನುಡಿಯುತ್ತಿರುವಾಗ ಆಯೇ ನೆಯ ಉಗಮುದ್ರೆಯನ್ನು ಖಾನನು ನೋಡದಾದನು. ಆತನು ಕೆಳಗೆ ಮೋಗೆಮಾಡಿಕೊಂಡು ಶಾಂತಮುದ್ರೆಯಿಂದ ಆಯೇಷೆಯನ್ನು ಕುರಿತು ನಬಾಬಕುವರೀ, ನಾನಾಗಿ ನಿನ್ನ ಕೋಣೆಯಲ್ಲಿ ಬರಲಿಲ್ಲ. ಅಂಥ ಅನಿರ್ವಾಹ ಪ್ರಸಂಗವೇ ಒದಗಿದ್ದರಿಂದ ನಾನು ನಿನ್ನ ಕೋಣೆಯಲ್ಲಿ ಬರಬೇಕಾಯಿತು. ಆಯೇಷೆ-ಅದೆಂಥ ಅನಿರ್ವಾಹಪ್ರಸಂಗವೋ ನಾನರಿಯೆ! ನೀವಾಗಿ ಕೋಣೆಯೊಳಗೆ ಬಂದಿರಲಿ, ಎರಡನೆಯವರ ಮಾತಿನಮೇಲಿಂದ ಬಂದಿ ರಲಿ; ಆದರೆ ಒಬ್ಬಳೇ ಹೆಂಗಸು ನಿದ್ದೆ ಹತ್ತಿ ಮಲಗಿರುವಾಗ ಕೋಣೆಯೊಳಗೆ ಬರುವದುಎಲ್ಲಿಯ ರೀತಿಯು? ಖಾನಸಾಹೇಬ, ನೀವು ಕೋಣೆಯಲ್ಲಿ ಬಂದಿ ರಷ್ಟೇ ಅಲ್ಲ, ನನ್ನ ಮೈಯನ್ನು ಮುಟ್ಟದಿರಿ! ಉಸ್ಮಾನ-ಆಯೇಷ, ನಿಜವಾದ ಸಂಗತಿಯನ್ನು ತಿಳಕೊಳ್ಳದೆ ನೀನೇಕೆ ನನಗೆ ಇಲ್ಲದ ಆರೋಪ ಹೊರಿಸುತ್ತಿ? ಉಸ್ಮಾನನು ಅಡ್ಡ ಹಾದಿ ಯನ್ನು ಎಂದಿಗೂ ತುಳಿಯನು; ಸುಮ್ಮನೆ ಯಾಕೆ ಸಿಟ್ಟಾಗುತ್ತಿ? : ..