ಪುಟ:ತಿಲೋತ್ತಮೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ತಿಲೋತ್ತಮೆ. ಆಯೇಷ-ಮೊ ತೀ, ನೀನು ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ? ಮೋತಿ-ಸರಕಾರ, ಎಲ್ಲಿಗೂ ಹೋಗಿಲ್ಲ, ಇಲ್ಲಿಯೇ ಇದ್ದೇನೆ. ಆಯೇಷೆ-ನನಗೆ ಕನಸು ಬಿದ್ದಿತ್ತು, ನನ್ನನ್ನು ಯಾರೋ ಮುತ್ತಿಗೆ ಹಾಕಿದಂತೆ ಆಗಿತ್ತು, ನನ್ನ ಮೈಗೆ ಏನೋ ತಣ್ಣಗೆ ಹತ್ತುತ್ತಿತ್ತು, ಇಂಥ ಸ್ಥಿತಿಯಲ್ಲಿ ಮೋತೀ, ನೀನೇಕೆ ನನ್ನ ಮೈ ಮೇಲೆ ಕೈಯಿಟ್ಟದ್ದೆ? ಮೋತಿ-ನಾನು ನಿಮ್ಮ ಮೈಮೇಲೆ ಕೈಯಿಟ್ಟಿದಿಲ್ಲ.” “ ಆಯೇಷೆ-ಹಾಗಾದರೆ ಮತ್ತೆ ಯಾರಾದರೂ ಇಲ್ಲಿ ಬಂದಿದರೇನು? ಮೊತಿ-ಹೌದು, ಸಣ್ಣ ನವಾಬಸಾಹೇಬರು ಬಂದಿದ್ದರು. ದಾಸಿಯ ಈ ಮಾತನ್ನು ಕೇಳಿದ ಕೂಡಲೆ ಆಯೇಷೆಯು ಸಿಟ್ಟಿಗೆದ್ದ ನಾಗರಹಾವಿನಂತೆ ತಳಮಳಿಸಹತ್ತಿದಳು. ಆಕೆಯು ದಾಸಿಯನ್ನು ಕುರಿತು ಏನಂದಿ? ನಬಾಬಸಾಹೇಬರು ಬಂದಿದ್ದರೊ? ನಾನು ನಿದ್ದೆ ಹತ್ತಿ ಮಲಗಿ ದೈ ನು; ನನ್ನ ಹೊತ್ತುಕೊಂಡ ವಸ್ತ್ರವು ಅಸ್ತವ್ಯಸ್ತವಾಗಿ ಬಿದ್ದಿ ತು, ಇಂಥ ಸ್ಥಿತಿಯಲ್ಲಿ ಅವರು ನನ್ನ ಕೋಣೆಯಲ್ಲಿ ಯಾಕೆ ಬಂದಿದ್ದರು? ಅವರು ಇಲ್ಲಿ ಬಂದು ಏನು ಮಾಡಿದರು? ಹೇಳು, ಬೇಗನೆ ಹೇಳು, ಈಗ ಅವರು ಎಲ್ಲಿರು ವರು? ಎನ್ನ ಲು, ಮೊತಿಯು ತನ್ನ ಒಡತಿಯ ಈ ಸ್ಥಿತಿಯನ್ನು ನೋಡಿ ಬೆದರಿದಳು, ಅಂಜುತ್ತಲೇ ಆಕೆಯು ಆಯೇಷೆಯನ್ನು ಕುರಿತು-ಸರ ಕಾರ, ಕ್ಷಮಿಸಬೇಕು. ಅವರು ಇಲ್ಲಿಗೆ ಬಂದು ಏನು ಮಾಡಿದರೆಂಬದನ್ನು ನನಗೆ ಹೇಳಲಿಕ್ಕೆ ಪರವಾನಿಗೆಯಿಲ್ಲ. ನಬಾಬಸಾಹೇಬರು ಇಲ್ಲಿಯೇ ತೋಟ ದಲ್ಲಿರುವಂತೆ ನನಗೆ ಕಾಣುತ್ತದೆ, ಅನ್ನಲು, ಆಯೇಸೆಯು ಕೂಡಲೆ ಸಿಟ್ಟ ನಿಂದ ಎದ್ದು ನಿಂತಳು. ಸಿಟ್ಟಿನಿಂದ ಆಕೆಯ ಕೆಂದುಟಗಳು ನಡಗುತ್ತಿದವು. ಆಕೆಯು ಅದೇ ನಿದ್ದೆ ಮಾಡಿ ಎದ್ದದ್ದರಿಂದ ಆಕೆಯ ಕಣ್ಣುಗಳು ಕೆಂಡದಂತಾಗಿ ದ್ದವು! ಆಕೆಯ ಕೋಮಲಾಂಗವು ಕಂಪಿಸುತ್ತಲಿತ್ತು. ಈ ಕುದ್ಧಾವಸ್ಥೆಯಲ್ಲಾ ದರೂ ಆಯೇಷೆಯ ಸೌಂದರ್ಯದಲ್ಲಿ ಕೊರತೆಯುಂಟಾಗಿದ್ದಿಲ್ಲ. ಆಯೇ ಕೆಯು ಮತ್ತೆ ತನ್ನ ದಾಸಿಯನ್ನು ಕುರಿತು-ಮೋತಿ, ಅದನ್ನು ಹೇಳ ಲಿಕ್ಕೆ ನಿನಗೆ ಪರವಾನಿಗೆಯಿಲ್ಲವೊ?? ಏಕಾಂತದಲ್ಲಿ ನಿದ್ದೆ ಹತ್ತಿ ಮಲಗಿದ್ದ ನನ್ನನ್ನು ನೋಡಿ ನಬಾಬಸಾಹೇಬರು ಕುದ್ರ ಮನುಷ್ಯರಂತೆ ವಿಕಾರವಶ ರಾಗಿ ನನ್ನನ್ನು ಮುಟ್ಟಿದರೆ ಏನು? ನಡೆ ಹಾಗಾದರೆ, ಈಗ ಅವರು ಎಲ್ಲಿ ಇದ್ದಾರೆ ನೋಡೋಣ.