ಪುಟ:ತಿಲೋತ್ತಮೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ತಿರಸ್ಕಾರ. ಸರ್ಪದ ತುಂಡುಗಳನ್ನು ಮಾಡಹತ್ತಿದನು, ಎಂಥ ಭಯಂಕರ ಕೆಲಸ. ವದು! ಅವನ ಎಂಥ ಸಾಹಸವದು! ಎಂಥ ಪ್ರಸಂಗಾವಧಾನವದು! ಸರ್ಪ ವನ್ನು ತುಂಡರಿಸಲಿಕ್ಕೆ ಖಾನನಿಗೆ ಬಹಳ ಹೊತ್ತು ಬೇಕಾಗಲಿಲ್ಲ. ತನ್ನ. ಕೈಗೆ ಕಠಾರಿಯು ಹತ್ತದಂತ ಸರ್ಪವನ್ನು ತುಂಡರಿಸಬೇಕಾದದ್ದರಿಂದ, ಸರ್ಪದ ಪೂರಾ ತುಂಡುಗಳಾಗದಂತೆ ಆತನು ಬಹು ಜಾಗ್ರತೆಯಿಂದ ಕೆಲಸಮಾಡಬೇಕಾಯಿತು. ಸರ್ಪದ ದೇಹವು ಒಂದು ಮಾಲೆಯಂತೆ ಕಾಣ ಹತ್ತಿತು. ಅದರ ರಕ್ತದಿಂದ ಖಾನನ ವಸ್ತ್ರಗಳು ತೊಯ್ದವು. ಆ ಸರ್ಪ ದೇಹಮಾಲೆಯು ನೆಲದವರೆಗೆ ಜೋತಾಡಹತ್ತಿದರೂ ಖಾನನು ಸರ್ಪದ: ಬಾಯನ್ನು ಬಿಟ್ಟಿದ್ದಿಲ್ಲ. ಬಾಯಬಳಿಯ ಬಹು ದೊಡ್ಡ ಭಾಗವು ತುಂಡ Cಸದೆ ಹಾಗೆಯೇ ಉಳಿದಿತ್ತು, ಆ ಭಾಗವೇ ಬಹು ಭಯಂಕರವಾದ ದ್ವಿ ತ್ತು, ಖಾನನು ಮೊದಲು ತನ್ನ ಎಡಗೈಯೊಳಗಿನ ಕಠಾರಿಯನ್ನು ಚಲ್ಲಿಕೊಟ್ಟನು! ಕೃಷ್ಣಸರ್ಪದ ಮುಖವು ಈಗ ಹೆಸರಿಗೆ ಮಾತ್ರ ದೇಹಕ್ಕೆ ಅಂಟಿಕೊಂಡಹಾಗೆ ಆಗಿತ್ತು; ಆದರೂ ಅದು ಇನ್ನೂ ಖಾನನನ್ನು ಕಡಿ ಯುವದಕ್ಕಾಗಿ ಬಾಯಿ ತೆರೆಯುತ್ತ ಒದ್ದಾಡುತ್ತಲಿತ್ತು. ಆಗ ಖಾನನು ಮುಖವನ್ನು ಗಟ್ಟಿಯಾಗಿ ಹಿಡಿದು, ಬಹು ಎಚ್ಚರದಿಂದ ಅದನ್ನು ದೂರ ಚಲ್ಲಿ ಕೊಟ್ಟು, ತನ್ನ ಮೈಯನ್ನು ತೊಳಕೊಳ್ಳುವದಕ್ಕಾಗಿ ಉದ್ಯಾನದ ಲ್ಲಿದ್ದ ಸರೋವರಕ್ಕೆ ಹೋದನು; ಆದರೂ ಸರ್ಪವು ಅವನಕಡೆಗೆ ಸಿಟ್ಟ ನಿಂದ ನೋಡುತ್ತ ಆತನನ್ನು ಕಚ್ಚುವದಕ್ಕಾಗಿ ಬಾಯಿ ತೆರೆಯುತ್ತಿತ್ತು!! - (o ) - ೮ನೆಯ ಪ್ರಕರಣ-ತಿರಸ್ಕಾರ. ಮುಂದೆ ಆಯೇಷೆಯು ಬೇಗನೆ ಎಚ್ಚತಳು. ಆಗ ದಾಸಿಯು ಸಲಾಮು ಮಾಡಿ ಮುಂದೆ ನಿಂತುಕೊಂಡು, ಆ ನವಾಬಕುವರಿಯ ಅಪ್ಪ ಮೊಯಿಂದ ಆಕೆಯ ಉಡಿಗೆತೊಡಿಗೆಗಳನ್ನು ಸರಿಮಾಡಹತ್ತಿದಳು. ಆಗ ದಾಸಿಯು ತಂದಿದ್ದ ಗುಲಾಬದನೀರಿನಲ್ಲಿ ಕರವಸ್ತ್ರವನ್ನು ತೋಯಿಸಿಕೊಂಡು. ಮುಖವನ್ನು ಒರಿಸಿಕೊಂಡು, ಆಯೇಷೆಯು ಖಾಸಿಯನ್ನು ಕುಂಭ.