ಪುಟ:ತಿಲೋತ್ತಮೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ತಿಲೋತ್ತಮೆ. ಅಂಜುಂಜು ಉಸ್ಮಾನನನ್ನು ಕುರಿತು-ಜಹಾಪನಾಹ, ತಮ್ಮ ಧೈರ್ಯದ ಪರಮಾವಧಿಯಾಯಿತು; ಆದರೆ ಇನ್ನು ಮುಂದೆ ಏನು ಮಾಡಬೇಕು? ಈ ಹಾವು ನಿನ್ನ ಕೈಯನ್ನು ಹೇಗೆ ಬಿಡಬೇಕು? ಯಾರನ್ನಾದರೂ ಕರೆಯಲೇನು? ಕೈಯನ್ನು ಬಿಡಿಸಿಕೊಳ್ಳಲಿಕ್ಕೆ ನಿಮ್ಮ -ಗಂತು ಬರುವಹಾಗಿಲ್ಲ; ಯಾಕಂದರೆ ನಿಮ್ಮ ಬಲಗೈಯನ್ನೇ ಅದು ಬಿಗಿ ಯಾಗಿ ಸುತ್ತಿಕೊಂಡು ಬಿಟ್ಟಿರುತ್ತದೆ ಎಂದು ನುಡಿಯಲು, ಉಸಾ ನನು-ಮೋ ತೀ, ಬೆದರಬೇಡ, ಎಡಗೈಯಿಂದ ನಾನು ಹಾವಿನಸುತ್ತು ಗಳನ್ನು ಬಿಡಿಸಿಕೊಂಡನು; ಆದರೆ ಈ ದುಷ್ಟಸರ್ಪದ ಸಂಪೂರ್ಣ ನಾಶವು ಬೇಗನೆ ಆಗ ಬೇಕಾಗಿದೆ, ಆದ್ದರಿಂದ ನೀನು ಒಳಗೆ ಹೋಗಿ ಒಂದು ಕಠಾರಿಯನ್ನು ತಕ್ಕೊಂಡುಬಾ, ಇದನ್ನು ಚೂರು ಚೂರು ಮಾಡುತ್ತೇನೆ. ನನಗೇನಾಗುತ್ತದೆ? ನೀನು ಯಾರನ್ನೂ ಕರೆಯುವ ಗೊಡವಿಗೆ ಹೋಗ ಬೇಡ, ಕರೆದರೆ ಬೇಗನಸಾಹೇಬರ ಹೊರತು ಉಳಿದವರು ಅಂತಗ್ನ ೯ ಹದಲ್ಲಿ ಬರುತ್ತಾರಾದರೂ ಹೇಗೆ? ಬೇಗನಸಾಹೇಬರು ಬಂದರೆ ಅವರೂ ಗಾಬರಿಯಾಗಿ ನಿಂತುಕೊಂಡಾರು; ಆದ್ದರಿಂದ ತಡಮಾಡದೆ ನೀನು ಕಠಾ ರಿಯನ್ನು ತಕ್ಕೊಂಡುಬಾ, ಎಂದು ಹೇಳಿದನು. ಕಠಾರಿಯನ್ನು ತರುವದಕ್ಕಾಗಿ ದಾಸಿಯು ಹೊರಟು ಹೋದಳು. ಸರ್ಪದ ಬಿಗತದಿಂದ ಉಸ್ಮಾನನ ಕೈಯು ಬಹಳ ಸೇದಹತ್ತಿತು; ಆದರೂ ಅವನು ಅದರಬಾಯನ್ನು ಬಿಡಲಿಲ್ಲ. ದಾಸಿಯು ಕಠಾರಿಯನ್ನು ತಕ್ಕೊಂಡು ಬರಲು, ಖಾನನು ಆಕೆಯನ್ನು ಕುರಿತು--ನೀನು ಇನ್ನು ಬಳಿಯಲ್ಲಿ ನಿಂತುಕೊಳ್ಳಬೇಡ, ಮತ್ತೆ ಅಂಜಿಕೊಂಡೀ, ಕೋಣೆಯೊಳಗೆ ಹೋಗಿ ನಬಾಬಕುವರಿಯ ಬಳಿಯಲ್ಲಿ ಕುಳಿತುಕೊ, ಆಕೆಗೆ ಎಚ್ಚರವಾಗ ಗೊಡ ಬೇಡ, ಒಂದು ಪಕ್ಷದಲ್ಲಿ ಆಕೆಗೆ ಎಚ್ಚರವಾದರೂ ಇಲ್ಲಿ ಹೊರಗೆ ನಡೆದಿರು ವದನ್ನು ಮಾತ್ರ ಆಕೆಗೆ ತಿಳಿಯಗೊಡಬೇಡ, ಎಂದು ಹೇಳಲು, ಜಿ ಸರಕಾರ” ಎಂದು ದಾಸಿಯು ಅಲ್ಲಿಂದ ಹೊರಟು ಹೋದಳು; ಆದರೆ ಖಾನನು ಕಠಾರಿಯಿಂದ ಹಾವನ್ನು ಹೇಗೆ ಸೀಳುವನೆಂಬದನ್ನು ನೋಡುವ ಕುತೂಹಲದಿಂದ ಆಕೆಯು ಅಲ್ಲಿಯೇ ಬಾಗಿಲ ಮರೆಯಲ್ಲಿ ನಿಂತುಕೊಂಡು ನೋಡಹತ್ತಿದಳು, ಖಾನನು ಎಡಗೈಯಲ್ಲಿ ಕಠಾರಿಯನ್ನು ತಕ್ಕೊಂಡು