ಪುಟ:ತಿಲೋತ್ತಮೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿರಸ್ಕಾರ. ೮೩ ಆಯೇ ಷೇ, ಹಿಂದಕ್ಕೆ ನೀನು ಕಾರಾಗೃಹದಲ್ಲಿ, C ಜಗತ್ತಿ೦ಗನು ನನ್ನ ಪತಿ ಯೆ೦” ದು ಹೇಳಿದಾಗಿನಿಂದ ನಾನು ಬಹು ಕಷ್ಟದಿಂದ ಕಾಲಹರಣ ಮಾಡುತ್ತಿ ರುವೆನು. ಕ್ಷಮೆಗೋಸ್ಕರ ನೀನು ನನ್ನನ್ನು ಪ್ರಾರ್ಥಿಸಬೇಡ. ನಾನು ಹೇಳುವ ಮಾತುಗಳನ್ನು ಲಕ್ಷಪೂರ್ವಕವಾಗಿ ಕೇಳು, ಆಮೇಲೆ ನನ್ನನ್ನು ತಿರಸ್ಕಾರದ ದೃಷ್ಟಿಯಿಂದ ನೋಡು, ನಾನು ಬದುಕಲಿಕ್ಕೂ-ಸಾಯಲಿಕ್ಕೂ ನಾನು ಸ್ವರ್ಗಸುಖವನ್ನು ಭೋಗಿಸಲಿಕ್ಕೂ-ದುಃಖದಿಂದ ಕೊರಗುವದಕ್ಕೂ ನೀನು ಕಾರಣಳಾಗಿರುತ್ತೀ. ಎಲ್ಲ ನಿನ್ನ ಕೈಯಲ್ಲಿರುತ್ತದೆ. ನಾನು ಕಗ್ಗನಂತೆ ವಿಕಾರವಶನಾಗಿ ನಿನ್ನ ಪ್ರಾಪ್ತಿಯ ಹಾದಿಯನ್ನು ನೋಡುವದಿಲ್ಲ. ಕೇವಲ ವಿಷಯಸುಖಭೋಗವೇ ನನ್ನ ಉದ್ದೇಶವಾಗಿದ್ದರೆ, ಜುಲುಮೆಯಿಂದಾದರೂ ನಿನ್ನ ಲಗ್ನ ಮಾಡಿಕೊಳ್ಳುತ್ತಿದ್ದೆನು. ನನ್ನ ತಂದೆಯಾದ ಕಾತಲುಖಾನರ ವರ ಮನಸ್ಸಿನಲ್ಲಿ ನಮ್ಮಿಬ್ಬರ ವಿವಾಹವಾಗುವದು ಸಂಪೂರ್ಣವಾಗಿತ್ತು, ನಿನ್ನ ತಾಯಂದಿರಾದ ಕಾಶ್ಮೀರಿಬೇಗಮರವರು ಈಗಲೂ ನಿನ್ನೊಡನೆ ನನ್ನ ಲಗ್ನ ವಾಗಬೇಕೆಂದು ಇಚ್ಚಿಸುತ್ತಾರೆ. ಇಷ್ಟು ಅನುಕೂಲವಾಗಿರಲು, ನಿನ್ನ ಪ್ರಾಪ್ತಿ ಗಾಗಿ ನಾನು ಇಷ್ಟು ಕಷ್ಟ ಪಡುವದೇಕೆ? ನನ್ನ ತಂದೆಗೆ ಹಲವು ಜನ ಸುಂದರ ಬೇಗನರು ಇದರಲ್ಲದೆ, ಬೇರೆ ಉಪಪತಿಯರೂ ಬಹು ಜನರು ಇದ್ದರೆಂಬ ದನ್ನು ನೀನು ಬಲ್ಲೆ. ಸದ್ಯಕ್ಕೆ ನನ್ನ ಅಣ್ಣನಾದ ಸುಲೇಮಾನಖಾನನು ನಕ್ಷತ್ರ ಪತಿಯಂತೆ, ಸದಾ ಯುವತಿಯರ ಹಿಂಡಿನ ನಡುವೆ ವಿಲಾಸಭೋಗಿ ಸುತ್ತಿರುವದನ್ನು ನೀನು ಕಣ್ಣಿನಿಂದನೋಡುತ್ತಿರುವೆ. ಹಾಗೆ ಮಾಡಬೇಕೆಂದರೆ ನನಗೆ ಸುಂದರ ಸ್ತ್ರೀಯರ ಕೊರತೆಯಿರುವದೆಯೆ? ಆದರೆ ಕೇವಲ ನಿನ್ನ ಸಲು ವಾಗಿ ಸರ್ವಸ್ವವನ್ನು ಅರ್ಪಿಸಿ, ನಿನ್ನ ಪ್ರಾಪ್ತಿಯ ಹಾದಿಯನ್ನು ನೋಡುತ್ತಿ ರುವ ನಾನು, ಈವರೆಗೆ ಬ್ರಹ್ಮಚರ್ಯದಿಂದಲೇ ಇರುತ್ತೇನೆ. ನಿನ್ನ ಪ್ರಾಪ್ತಿಯು ಆಗದೆಯಿದ್ದ ಪಕ್ಷದಲ್ಲಿ ಬ್ರಹ್ಮಚರ್ಯದಿಂದಲೇ ಕಾಲಹರಣಮಾಡುವೆನು. ಆಯೇ ಥೇ, ವಿಚಾರಮಾಡು. ನನ್ನ ಮಾತುಗಳು ಯಾವ ದೃಷ್ಟಿಯಿಂದಲೂ ಅಯೋಗ್ಯವಾದವುಗಳಲ್ಲ; ನಿನಗೆ ಅಹಿತಕಾರಕವಾದವುಗಳೂ ಅಲ್ಲ. ಉಸ್ಮಾನನ ಈ ಮಾತುಗಳನ್ನು ಕೇಳಿ ಆಯೇಷೆಯು-ಉಸ್ಮಾನ, ನಿಜವಾಗಿ ನನ್ನ ಮೇಲೆ ನಿನ್ನ ಅನಂತ ಉಪಕಾರಗಳಿರುತ್ತವೆ. ಅಣ್ಣಾ ನಿಜವಾಗಿ ನೀನು ಮಾನವಕೋಟಿಯೊಳಗಿನವಲ್ಲ ಮಾನವರ ಕುದ್ರ ವಿಚಾರ