ಪುಟ:ತಿಲೋತ್ತಮೆ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ತಿಲೋತ್ತಮೆ. ಗಳಿಂದ ನಿನ್ನ ಮನಸ್ಸು ಬಹುದೂರ ಹೋಗಿರುತ್ತದೆ. ಇದನು ನಾನು ಇಂದಿನವರೆಗೆ ತಿಳಿದಿದ್ದಿಲ್ಲ: ಎಂದು ನುಡಿಯುತ್ತಿರಲು, ಉಸ್ಮಾನನು ನಡುವೆ ಬಾಯಿಹಾಕಿ-ಆಯೇ ಷೇ, ಸ್ವಲ್ಪ ನಿಲ್ಲು; ನಡುವೆ ಏನಾದರೂ ತಟ್ಟನೆ ಉತ್ತ ರಕೊಟ್ಟು ಬಿಡಬೇಡ, ನಾನಾಡುವ ಮಾತುಗಳನ್ನು ಮೊದಲು ಚೆನ್ನಾಗಿ ಕೇಳಿಕೊ, ನನ್ನ ಮಾತಿನ ಭಾವವನ್ನು ಲೆಕ್ಕಿಸದೆ CC ಅಣ್ಣಾ ಅಣ್ಣಾ ” ಎಂದು ಕರೆಯುವದನ್ನು ನೋಡಿ ನನಗೆ ಬಹಳ ಅಸಮಾಧಾನವಾಗುತ್ತದೆ. ಎಲೆ ಕಲ್ಯಾಣಿಯೇ, ನೀನು ನನ್ನ ಪ್ರಾಣದ ಪ್ರಾಣವಾಗಿರುತ್ತೀ, ನಾನು ಹೀಗೆ ನಿನ್ನ ಕಾಲಲ್ಲಿ ಕ್ಷೀಣವಾಗುತ್ತ ಒಂದು ದಿನ ಬಿದ್ದು ಹೋಗುವದು ನಿನಗೆ ಯೋ ಗ್ಯವಾಗಿ ತೋರುತ್ತದೆಯೋ? ನಿನ್ನ ಅಪ್ರಾಪ್ತಿಯಿಂದ ಉತ್ಪನ್ನವಾ .ಗುವ ಭಯಂಕರವಾದ ವಿರಹಾನೆಲದಲ್ಲಿ ನಾನು ದಕ್ಷವಾಗುತ್ತಿರುವದು ನಿನಗೆ ಸಮ್ಮತವಾಗಿರುತ್ತದೆಯೋ? ಎಲೈ ಹೃದಯೇಶ್ವರಿಯೇ, ನನ್ನ ಪ್ರೇಮಕ್ಕೆ ಪ್ರತಿಫಲವಾಗಿ ನಿನ್ನ ಪ್ರೇಮವು ನನಗೆ ದೊರೆಯುವದಿಲ್ಲವೆ? ನಿನ್ನ ಸಲುವಾಗಿ ಹೃದಯವನ್ನು ನಿವಾಳಿಸಿಒಗೆಯುವ ನನಗೆ, ನಿನ್ನ ಹೃದಯದಲ್ಲಿ ಸ್ಥಾನವು ಸಿಗುವ ದಿಲ್ಲವೆ? ನೀನು ಇಷ್ಟು ನಿಷ್ಣುಗಳಾಗಿರುವೆಯಾ? ಎಂದು ನುಡಿಯುತ್ತಿರುವ ಉಸ್ಮಾನನ ಕೈಯನ್ನು ಆಯೇಷೆಯು ಅತ್ಯಂತ ಆದರದಿಂದ ಹಿಡಕೊಂಡುಅಣ್ಣಾ ಉಸ್ಮಾನಾ, ನಿನ್ನ ಹಾಗೆ ಪ್ರೇಮಮಾಡುವವರನ್ನು ಈ ಜಗತ್ತಿನಲ್ಲಿ ಕಾಣುವದು ದುರ್ಲಭವೇ ಸರಿ, ಯಾವ ಸ್ತ್ರೀಯನ್ನು ಇಚ್ಛಸಿ ನೀನು ಪ್ರೇಮ -ಮಾಡುತ್ತಿರುವೆಯೋ ಆಕೆಯು ನಿಜವಾಗಿ ಧನ್ಯಳು! ಉಸ್ಮಾನ, ನೀನು ಮನುಷ್ಯನಲ್ಲ, ದೇವರು! ಆದರೆ ಉಸ್ಮಾನ, ನಾನೊಬ್ಬ ಕುದ್ರ ಯು ನನ್ನ ಮೇಲೆ ನೀನು ಪ್ರೇಮಮಾಡಿದ್ದು ಅನ್ಯಾಯವಾಯಿತು, ನಿನ್ನ ದೃಢ ವಾದ ಪ್ರೇಮಕ್ಕೆ ನಾನು ಅಪಾತ್ರಳಿರುತ್ತೇನೆ. ಉಸ್ಮಾನ, ನನ್ನ ಹೃದಯ ವನ್ನು ನಿನಗೆ ಕೊಡುವ ಶಕ್ತಿಯು ನನ್ನಲ್ಲಿ ಇರುತ್ತಿದ್ದರೆ, ನಾನು ಅವಶ್ಯವಾಗಿ ಕೊಡುತ್ತಿದ್ದೆನು; ನನ್ನ ದೇಹವನ್ನು ನಿನ್ನಾಧೀನವಾಗಿ ಮಾಡಿ | ಬಿಡುತ್ತಿದ್ದೆನು; ಆದರೆ ಹಾಯ್ ಹಾಯ್! ಉಸ್ಮಾನ, ನಾನು ಸತ್ತಿದ್ದರೆ ಬಹಳ ನೆಟ್ಟಗಾಗುತ್ತಿತ್ತು! ಅಣ್ಣಾ, ನೀನು ಹಾವಿನ ದವಡೆಯೊಳಗಿಂದ ನನ್ನನ್ನು ಯಾಕೆ ಉಳಿಸಿದೆ? ನಾನಸತ್ತು ಹೋಗಿದ್ದರೆ ಇದಕ್ಕೂ ಎಷ್ಟು ನೆಟ್ಟಗಾಗುತ್ತಿಲ್ಲ! ಎಂದು ನಡಿಯುತ್ತಿರುವಾಗ, ಆಯೇಷೆಯ ಮುಖದಿಂದ ಮಾತುಗಳು ಹೊರ