ಪುಟ:ತಿಲೋತ್ತಮೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮. - ತಿರಸ್ಕಾರ. ಡದಾದವು. ಆಕೆಯು ಕಣ್ಣು ಒರಿಸಿಕೊಳ್ಳುತ್ತ ಅಲ್ಲಿಂದ ಹೊರಟುಹೋದಳು. ಇದನ್ನು ನೋಡಿ ಉಸ್ಮಾನನ ಮಸ್ತಕಕ್ಕೆ ಸಿಡಿಲು ಬಡೆದಂತಾಯಿತು. ಆತನು ಮೂಢನಂತೆ ಸುಮ್ಮನೆ ನಿಂತುಬಿಟ್ಟನು. ಆತನು ತನ್ನೊಳಗೆ < ಯಾವಾಗಾದರೂ ಅದೇ ಮಾತು; ಅಂತಃಕರಣವನ್ನು ದಗ್ಧ ಮಾಡುವಂಥ ಮಾತುಗಳನ್ನೆ ಯಾವಾಗಾದರೂ ಆಯೇಷೆಯು ಆಡುವದು! ಹಾಯ್ ಹಾಯ್!! ನನ್ನ ಶರೀರವು ದಗ್ಗ ವಾಗಹತ್ತಿತು. ಈ ಪರಿಯಾಗಿ ಬಾಳುವದ ಕ್ಕಿಂತ ಸಾಯುವದುಲೇಸು! ಏನು, ನಾನು ಸಾಯಬೇಕೆ? ನಾನು ಆತ್ಮಹತ್ಯ ವನ್ನು ಮಾಡಿಕೊಳ್ಳಲಾ? ಆತ್ಮಹತ್ಯೆಯೇ! ಛೇ! ಅದು ನನ್ನಂಥ ವೀರನಿಗೆ ಸಲ್ಲದು. ಅದು ಹೆಂಗಸರ ಕೆಲಸವು; ಹೇಡಿಗಳಿಗೆ ಸಲ್ಲತಕ್ಕದ್ದು, ನಾನು ರಣಾಂಗ ಣದಲ್ಲಿ ಶತ್ರುಗಳೊಡನೆ ಹೋರಾಡಿ ದೇಹವಿಡುವೆನು ಎಂದು ನುಡಿದು, ಹತಾಶನಾದ ಉಸ್ಮಾನನು ಖಿನ್ನ ಮುದ್ರೆಯಿಂದ ಹೊರಟುಹೋದನು. ೯ ನೆಯ ಪ್ರಕರಣ- ರಾಜಲಕ್ಷ್ಮಿ ಯು. ಒCiaw ಅನೇಕ ಆಪ್ತಸ್ವಜನರಿಂದಲೂ, ದಾಸ-ದಾಸಿಯರಿಂದಲೂ, ಆಳು ಹೋಳುಗಳಿಂದಲೂ, ಅಸಂಖ್ಯ ಚತುರಂಗಸೇನೆಯಿಂದಲೂ ಕೂಡಿ ಅಂಬ ರಾಧೀಶ್ವರ ಮಾನಸಿಂಗಮಹಾರಾಜನು ಶ್ರೀ ಪುರುಷೋತ್ತಮನ ದರ್ಶನ ಕ್ಕಾಗಿ ಪುರೀ ಕ್ಷೇತ್ರಕ್ಕೆ ಬಂದು ಮುಟ್ಟಿದನು. ಅವರಿಗೆ ಇಳಿದುಕೊಳ್ಳು ವದಕ್ಕಾಗಿ ಸಮುದ್ರತೀರದ ಒಂದು ವಿಸ್ತೀರ್ಣವಾದ ಬಯಲಲ್ಲಿ ಅವರ 'ವಿಶಾಲವಾದ ಡೇರೆಗಳು ಹೊಡಿಸಲ್ಪಟ್ಟಿದ್ದವು. ಆ ಡೇರೆಗಳು ಹಲವು ವಿಧಧ ಬಣ್ಣಗಳಿಂದ ನೋಡಲಿಕ್ಕೆ ಬಹು ಚಂದವಾಗಿದ್ದವು, ಅದರಲ್ಲಿ ಮಾನಸಿಂಗಮಹಾರಾಜರ, ಹಾಗು ಅವರ ಪರಿವಾರದವರ ಸಲುವಾಗಿ ಹೊಡೆ ದಿದ್ದ ಡೇರೆಯಂತು ಬಹು ಮನೋಹರವಾಗಿತ್ತು, ಅದು ಬನಾತಿನ ಅರಿವೆ ಯದಿದ್ದು, ಅದರ ಮೇಲ್ಮಗ್ರಲು ಸುವರ್ಣ ಕಳಸಗಳಿಂದ ಒಪ್ಪುತ್ತಿದ್ದಪ್ಪ