ಪುಟ:ತಿಲೋತ್ತಮೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ತಿಲೋತ್ತಮೆ. Cಂದ ಅದುಬಹು ಶೋಭಾಯಮಾನವಾಗಿತ್ತು. ದಾಸ-ದಾಸಿಯರ ಸಲುವಾ. ಗಿಯೂ, ಆಳುಹೂಳುಗಳ ಸಲುವಾಗಿಯೂ, ಪಹಿಲವಾನರು-ಬಿಲ್ಲಾಳು ಗಳು ಮೊದಲಾದವರಸಲುವಾಗಿಯ ಬೇರೆ ಬೇರೆ ರಾಹುಟಿಗಳು ಹೊಡೆ. ಯಲ್ಪಟ್ಟಿದ್ದವು, ಆನೆ-ಕುದುರೆ-ಒಂಟೆಗಳ ಸಲುವಾಗಿಯೂ ಚಾಟು ಮಾಡ ಲ್ಪಟ್ಟಿತ್ತು. ಭಾಂಡಾರವನ್ನು ಒಂದು ವಿಸ್ತ್ರತವಾದ ತಂಬುವಿನಲ್ಲಿ ಸಂಚಯಿಸಿದ್ದು, ಬೇರೆ ಬೇರೆ ಪಾಕಶಾಲೆಗಳು ನಿರ್ಮಿಸಲ್ಪಟ್ಟಿದ್ದವು, ಈ ಮೇರೆಗೆ ಅರ್ಧಹರದಾರಿಯವರೆಗೆ ಮಹಾರಾಜರ ಪರಿವಾರದ ವಸತಿಯಾ ಗಿತ್ತು, ನೋಡುವವರಿಗೆ ಅದೊಂದು ಸುಂದರವಾದ ಪಟ್ಟಣದಂತೆ ಕಾಣು ತಿತ್ತು. ಮಹಾರಾಜರ ಸಂಗಡ ಮುವರೇ ರಾಣಿಗಳು ಬಂದಿದ್ದರು. ಅವರಲ್ಲಿ ಜೋಧಪುರದ ಮನೆತನದ ಉರ್ಮಿಲಾದೇವಿಯು ಇದ್ದಳು. ಉರ್ಮಿ ಶಾದೇವಿಯು ಪಟ್ಟದರಾಣಿಯಾಗದಿದ್ದರೂ, ಮಾನಸಿಂಹರವರ ಅತ್ಯಂತ ವಾದ ಪ್ರೀತಿಗೆ ಪಾತ್ರಳಾಗಿದ್ದಳು, ಬಾದಶಹನ ಕೆಲಸಕ್ಕಾಗಿ ಮಾನಸಿಂಹ ರವರು ದೂರ ದೂರ ಪ್ರವಾಸಗಳನ್ನು ಮಾಡಬೇಕಾಗುತ್ತಿತ್ತು, ಇಂಥ ಪ್ರಸಂಗದಲ್ಲಿ ಯಾವತ್ತು ರಾಣಿಯರನ್ನು ಕರಕೊಂಡು ಹೋಗುವದು ಬಹುತರ ಆಶಕ್ಯವಾಗುತ್ತಿತ್ತು; ಆದ್ದರಿಂದ ಮಹಾರಾಜರು ಎಲ್ಲ ರಾಣಿ ಯರನ್ನು ಸಂಗಡ ಕರಕೊಂಡು ಹೋಗುತ್ತಿದ್ದಿಲ್ಲ: ಆದರೆ ಉರ್ಮಿಲಾ ರಾಣಿಯು ಮಾತ್ರ ಯಾವಾಗಲೂ ಮಹಾರಾಜರ ಸಂಗಡ ಇರುತ್ತಿದ್ದಳು. ರಣಾಂಗಣದಲ್ಲಿರುವಾಗಷ್ಟು ಕಾಲಮಾತ) ಉರ್ಮಿಲಾರಾಣಿಯು ಮಹಾ ರಾಜರನ್ನು ಅಗಲಿ ಇರುತ್ತಿದ್ದಳು. ಉಳಿದ ವೇಳೆಯಲ್ಲಿ ಮಹಾರಾಜರನ್ನು ಉರ್ಮಿಲಾರಾಣಿಯು ನೆರಳಿನಂತೆ ಅನುಸರಿಸಿ ಇರತಕ್ಕವಳು. ಯಾವತ್ತು ರಾಣಿಯರಲ್ಲಿ ಜಗತ್ಸಂಗನ ತಾಯಿಯ ಯೋಗ್ಯತೆಯೂ, ಅಧಿಕಾರವೂ ಹೆಚ್ಚಿನವಾಗಿದ್ದವು, ಆಕೆಯ ಆಧಿಕಾರ- ಯೋಗ್ಯತೆಗಳು ಅಷ್ಟು ದೊಡ್ಡ ವಿದ್ದ ರೂ, ತಾನು ಪಟ್ಯರಾಣಿಯಾಗಿದ್ದ ರೂ ತಾನು ಯಾವಾ ಗಲೂ ಮಹಾರಾಜರ ಸಂಗಡಯಿರುವದು ಆಕೆಗೆ ಸೇರುತ್ತಿದ್ದಿಲ್ಲ. ಮಹಾ. ರಾಜರಾದರೂ ಆ ಪಟ್ಟಮಹಿಷಿಯಿಂದ ಪ್ರಣಯಕ್ಕಿಂತ ಮಾನಮರ್ಯಾದೆ ಗಳನ್ನು ವಿಶೇಷವಾಗಿ ಅಪೇಕ್ಷಿಸುತ್ತಿದ್ದರು. ಯಾಕಂದರೆ ಅಕೆಯ ಯೋಗ್ಯ ತಯು ಉಚ್ಚತರದ್ದಾಗಿತ್ತು, ಆಕೆಯು ಮಹಾರಾಜರ ಸಂಗಡ ಬಂಗಾಲ,