ಪುಟ:ತಿಲೋತ್ತಮೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಲಕ್ಷ್ಮಿ ಯು. ೮೬ ಪ್ರಾಂತಕ್ಕೆ ಸುಭೇದಾರಿಯಮೇಲೆ ಬಾರದೆ, ಅಂಬರನಗರ ದಲ್ಲಿಯೇ ಎಂದಿ ನಂತೆ ಇರುತ್ತಿದ್ದಳು. ಮಹಾರಾಜರು ಪಾಟಣಾದಿಂದ ಪರಭಾರೆ ಪುರು ಜೋ ತುಮ ಕ್ಷೇತ್ರಕ್ಕೆ ಬಂದದ್ದರಿಂದ, ಈ ಯಾತ್ರೆಯಪ್ರಸಂಗದಲ್ಲಿಯೂ ಪಟ,ರಾಣಿಯು ಮಹಾರಾಜರಸಂಗಡ ಇದಿಲ, ಪುರಿಯಲ್ಲಿ ಒಂದುವಾರ ಇಕ ಬೇಕೆಂದು ಮಹಾರಾಜರು ನಿರ್ಧರಿಸಿದರು, ಅದರಲ್ಲಿ ಎರಡು ದಿನಗಳು ಹೋದವು, ಪ್ರತಿದಿನ ಮಹಾರಾಜರು (ಾಣಿಗಳೊಡನೆ ಶ್ರೀ ಪುರುಷೋತ್ರ ಮನ ದರ್ಶನಕ್ಕಾಗಿ ಮಂದಿರಕ್ಕೆ ಹೋಗುವರು, ಅಲ್ಲಿ ಮೂರು ನಾಲ್ಕು ತಾಸುಗಳು ಪೂಜೆ ಪುನಸ್ಕಾರಗಳಲ್ಲಿ ಕ್ರಮಿಸಿಹೋಗುತ್ತಿದ್ದವು, ದಿನಾಲು ಮಹಾರಾಜರು ಕೈಮುಟ್ಟಿ ವಿದ್ಯುಕ್ತ ಜಗನ್ನಾಥನ ಪೂಜೆಯನ್ನು ಮಾಡು ತಿದ್ದರು. ದ್ರವ್ಯದ ಆಶೆಯಿಂದ ದೂರದೂರದಿಂದ ಬಂದಿದ್ದ ರುಡರು ಕುಂಟರು ಮೊದಲಾದ ಭಿಕ್ಷುಕರಿಗೆ ಪ್ರತಿನಿತ್ಯ ಸಾವಿರಾರು ರೂಪಾಯಿ ಗಳ ದಾನಧರ್ಮ ಮಾಡುತ್ಯ ಮಹಾರಾಜರು ಡೇರೆಗೆ ಹೋಗುತ್ತಿದ್ದರು. ಈ ಪಠಾಣರೊಡನೆ ಆದ ಒಡಂಬಡಿಕೆಯಿಂದ ಪುರಿಯ ಅಧಿಕಾರವು ಅಕ ಬರ ಸಾಮ್ರಾಟನ ಕೈಸೇರಿತ್ತು, ಓಡಿಸಾದ ಉಳಿದ ಪ್ರಾಂತಗಳಲ್ಲಿ ಪಠಾ ಣರು ಸ್ವತಂತ್ರದಿಂದ ರಾಜ್ಯಕಾರಭಾರ ಮಾಡುತ್ತಿದ್ದರು, ಪುರಿಯು ಪಠ ಣರ ಕೈವಶವಾಗುವ ಮೊದಲು, ಅಲ್ಲಿ ದೇವವಂಶದ ಕ್ಷತ್ರಿಯರಾಜರು ರಾಜ್ಯವಾಳುತ್ತಿದ್ದರು. ಸದ್ಯಕ್ಕೆ ಆ ವಂಶದ ಹತವೈಭವ ರಾಜನಾದ ರಾಮ ಚಂದ್ರದೇವನೆಂಬವನು ಜೀವದಿಂದಿರುತ್ತಿದ್ದನು. ಪುರಿಯ ಅಧಿಕಾರವು ತನ್ನ ಕೈಸೇರಿದಕೂಡಲೆ ಮಾನಸಿಂಗನು ಆ ಅಧಿಕಾರವನ್ನು ರಾಮಚಂದ್ರದೇವ ನಿಗೆ ಒಪ್ಪಿಸಿದ್ದರಿಂದ, ತೀರ ಮೂಲೆಗುಂಪಾಗಿದ್ದ ರಾಮಚಂದ್ರದೇವನು ಮೆಲ್ಲಮೆಲ್ಲನೆ ಮುಂದಕ್ಕೆ ಬರಹತ್ತಿದ್ದನು. ಸದ್ಯಕ್ಕೆ ರಾಮಚಂದ್ರದೇವನು ಮಾನಸಿಂಹನ ಅದರಾತಿಥ್ಯದಲ್ಲಿ ಅತ್ಯಂತ ತತ್ಪರನಾಗಿದ್ದನು, ಮಾನಸಿ ಹನ ಛಾವಣಿಯೊಳಗಿನ ಯಾವನೊಬ್ಬ ಸಾಮಾನ್ಯ ಮನುಷ್ಯನ ಬೇಡಿ ಕೆಯು ಕೂಡ ತತ್ಕಾಲದಲ್ಲಿ ಆ ರಾಜನಿಂದಪೂರ್ಣವಾಗುತ್ತಿತ್ತು, ಈ ತತ್ಪರತ ಗಾಗಿ ಮಾನಸಿಂಹನು ರಾಮಚಂದ್ರದೇವನ ಮೇಲೆ ಅತ್ಯಂತ ಸಂತುಷ್ಟನಾಗಿ ಧನು; ಆದರೆ ಹೊಸ ನಬಾಬರಾದ ಸುಲೇಮಾನಖಾ, ಹಾಗು ಉಸ್ಮಾನಖಾ ಎಂಬ ತರುಣರ ಔದ್ದತ್ಯಕ್ಕಾಗಿ ಮಾನಸಿಂಹನು ಬಹಳ ಸಿಟ್ಟಾಗಿದ್ದನು.