ಪುಟ:ತಿಲೋತ್ತಮೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೮ ತಿಲೋತ್ತಮೆ. ಆ ಹೊಸ ನಬಾಬರ ಪ್ರಾಂತದೊಳಗಿಂದ ಪ್ರವಾಸಮಾಡುವಾಗಂತು ಆ ತರುಣರು ಮಾನಸಿಂಹನನ್ನು ಕಾಣಲೇ ಇಲ್ಲ; ಮಾನಸಿಂಹನು ಪುರಿಗೆ ಬಂದು ಎರಡು ದಿನಗಳಾದರೂ ಸ್ವಾಭಿಮಾನಿಗಳಾದ ಆ ಇಬ್ಬರು ಬಂಧು ಗಳು ಆತನ ದರ್ಶನಕ್ಕೆ ಬರಲಿಲ್ಲ, ಮತ್ತು ಅವರ ವಜೀರನೂ ದರ್ಶ ನಕ್ಕೆ ಬರಲಿಲ್ಲ. ಮಾನಸಿಂಹನು ಪಾಟಣಾಪ್ರಾಂತದಲ್ಲಿ ಬಂದ ಕೂಡಲೆ ಒಬ್ಬ ಸೇವಕನು ರಾತ್ರ ಆತನ ಬಳಿಗೆ ಬಂದು, ನಬಾಬಬಂಧುಗಳ ಪತ್ರವನ್ನು ಆತನ ಕೈಯಲ್ಲಿ ಕೊಟ್ಟಿದ್ದನು. ಆ ಪತ್ರದಲ್ಲಿ ಅವರು ಮಾನಸಿಂಹನಿಗೆ-- 44ಓಡಿಸ್ತಾದ: ನಬಾಬರು ಮಹಾರಾಜರ ದರ್ಶನಕ್ಕೆ ಬಾರದಿದ್ದಕ್ಕಾಗಿ ಆ ನಬಾ ಬರಿಗೆ ಬಹಳ ಅಸಮಾಧಾನವಾಗಿದೆ; ಆದರೆ ಮಹಾರಾಜರ ಮುಕ್ಕಾಮು ಪುರಿಯಲ್ಲಿ ಭಾಗ ಒಂದು ದಿವಸ ಉಸ್ಮಾನಖಾನರವರು ದರ್ಶನಕ್ಕೆ ಬರಬ ಹುದು. ತಮಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವದಕ್ಕಾಗಿ ಪತ್ರವತಕ್ಕೊಂಡು ಬಂದಿದ್ದ ಸೇವಕನು ತತ್ಪರನಿರುವನು, ಸೇವೆಯನ್ನು ಸ್ವೀಕರಿಸುವದಾಗಬೇಕು,” ಎಂದು ಬರೆದಿದ್ದರು. ಈ ಪತ್ರವನ್ನು ಓದಿ ಮಾನಸಿಂಹನಿಗೆ ಸಮಾಧಾನವಾಗಲಿಲ್ಲ; ಅದ ರಂತೆ, ಆ ಪತ್ರಕ್ಕೆ ಮಾನಸಿಂಹನು ಬರೆದ ಉತ್ತರವನ್ನು ಓದಿ ಉಸ್ಮಾನ ಖಾನನಿಗೂ ಸಮಾಧಾನವಾಗಲಿಲ್ಲ! ವೃದ್ದ ವಜೀ ಗನಾದ ಖ್ಯಾಜಾಣಸಾ ಖಾನನು ಬೇನೆಯಿಂದ ತೀರಹಣ್ಣಾದ್ದರಿಂದ, ಆತನ ಸ್ನಾನದಲ್ಲಿ ಆಜನ ಈಸಾಖಾನನು ವಜೀರನಾಗಿರುವನೆಂಬದನ್ನು ಮಾನಸಿಂಗನು ಕೇಳಿದ್ದನು. ಈ ಸ್ಥಿತಿಯಲ್ಲಿ ಪಠಾಣರೊಡನೆ ಬೇಗನೆ ಯುದ್ಧ ಹೂಡಬೇಕಾಗುವದೆಂದು ಮಾನಸಿಂಹನು ತರ್ಕಿಸಿದನು; ಆದರೂ ಆತನು ಎಳ್ಳಷ್ಟಾದರೂ ಅಸಮಾ. ಧಾನಪಡಲಿಲ್ಲ. ಅತನ ತೀರ್ಥಯಾತ್ರೆಯ ಕಾರ್ಯಗಳು ಯಥಾಸ್ಥಿತವಾಗಿ. ಸಮಾಧಾನದಿಂದ ನಡೆದಿದ್ದವು. ಧರ್ಮಕೃತ್ಯಗಳ ಪ್ರಬಲಪ್ರವಾಹದಲ್ಲಿ ಅತನ. ಚಿತ್ತದ ಮಾಲಿನ್ಯವೆಲ್ಲ ತೊಳೆದುಹೋಗಿ, ಆ ಶುದ್ದ ಚಿತ್ರ ಕ್ಷೇತ್ರದಲ್ಲಿ. ಪ್ರೇಮ, ದಯಾ, ಭಕ್ತಿ, ಶಾಂತಿ ಇವು ನೆಲೆಗೊಂಡಿದ್ದವು. ಎರಡುದಿನ ಶ್ರೀ ಜಗನ್ನಾಥನ ಸೇವಾಸೂತ್ರಗಳು ನಿರ್ಬಾಧವಾಗಿ ನಡೆದವು. ಮೂರನೆಯ ದಿವಸ ರಾತ್ರಿ ಮಾನಸಿಂಹನು ಶ್ರೀ ಜಗನ್ನಾಥನ ಆರತಿಯನ್ನು ಮಾಡಿ. ಕೊಂಡು ಛಾವಣಿಗೆ ಬಂದಬಳಿಕ ಉರ್ಮಿಳಾರಾಣಿಯ ಮಂದಿರಕ್ಕೆ.