ಪುಟ:ತಿಲೋತ್ತಮೆ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಲಕ್ಷ್ಮಿ ಯು. ೮೯. ಹೋದನು. ವಿಲಾಸೋ ಪಭೋಗದಲ್ಲಿ ಮಾನಸಿಂಹನು ಅತ್ಯಂತ ಶ್ರೇಷ್ಠ ನಾಗಿದ್ದನು. ಮೊಗಲಬಾದಶಹರ ಪ್ರಮಸಂಪಾದನೆಯಿಂದ ಆತನ ವಿಲಾಸ ಭೋಗಕ್ಕೆ ಮತ್ತಿಷ್ಟು ಕಳೆಯೇರಿತ್ತು, ಉರ್ಮಿಳಾರಾಣಿಯ ರತ್ನಖಚಿ ತವಾದ ಬ್ರಹನ್ಮಂಟಪವನ್ನು ನೋಡಲಿಕ್ಕೆ ಎರಡು ಕಣ್ಣುಗಳು ಸಾಲು ತಿದ್ದಿಲ್ಲ. ಆ ಮಂಟಪವನ್ನು ಇಟ್ಟಿದ್ದ ಅಂತರ್ಗೃಹವು ಹಲವು ದೀಪ ಜ್ಯೋತಿಗಳಿಂದ ಪ್ರಕಾಶಿತವಾಗಿದ್ದು, ಹಲವು ಪ್ರಕಾರದ ಸುಗಂಧಗಳಿಂದ ಅದು ಪರಿಪೂರ್ಣವಾಗಿತ್ತು. ಮಾನಸಿಂಹನು ಒಳಗೆ ಬಂದ ಕೂಡಲೆ ಒಬ್ಬ ದಾಸಿಯು ಬೀಸಣಿಕೆಯನ್ನು ತಕ್ಕೊಂಡು ಬಂದಳು... ಇನ್ನೊಬ್ಬಳು ಸುವರ್ಣಪಾತ್ರೆಯಲ್ಲಿ ಸುಗಂಧೋದಕವನ್ನು ತಕ್ಕೊಂಡು ಬಂದಳು; ಮತ್ತೊಬ್ಬಳು ತಾಂಬೂಲಪಾತ್ರೆಯನ್ನು ತಕ್ಕೊಂಡುಬಂದಳು. ಮಾನಸಿಂ ಹನು ದಣಿದವನಂತೆ ಶುಭ್ರಶಯ್ಕೆಯಮೇಲೆ ಸ್ವಚ್ಛಂದದಿಂದ ಹುಲಗಿ ಕೊಂಡು ದಾಸಿಯರನ್ನು ಕುರಿತು- C ಉರ್ಮಿಳಾರಾಣಿಯು ಎಲ್ಲಿರುವಳು?” ಎಂದು ಕೇಳಲು, ಒಬ್ಬ ದಾಸಿಯು ವಿನಯದಿಂದ-ಅವರು ಪಾಕಶಾಲೆ ಯಲ್ಲಿ ಮಹಾರಾಜರ ಭೋಜನದ ವ್ಯವಸ್ಥೆಯಲ್ಲಿ ತೊಡಗಿರುವರು, ಈಗ ಬರಬಹುದು, ಎಂದು ಹೇಳಿದಳು. ಆಗ ಮಹಾರಾಜರು-ಈಗ ತಾಂಬೂ ಲವೂ ಬೇಕಾಗಿಲ್ಲ, ನೀರೂ ಬೇಕಾಗಿಲ್ಲ. ಬೀಸಣಿಕೆ ಬೀಸುವ ಒಬ್ಬ ದಾಸಿಯು ಮಾತ್ರ ನಿಂತುಕೊಂಡು ಉಳಿದವರು ಹೋಗಿರಿ, ಎಂದು ಹೇಳಿದರು. ಮಾನಸಿಂಹನ ಅಪ್ಪಣೆಯಂತೆ ಉಳಿದ ದಾಸಿಯರು ಹೊರಟು ಹೋದರು, ಬೀಸಣಿಕೆ ಬೀಸುವದಾಸಿಯು ಗಾಳಿಯ ಹಾಕಹತ್ತಿದಳು. ಸ್ವಲ್ಪ ಹೊತ್ತಿನಲ್ಲಿಯೇ ಉರ್ಮಿಳಾರಾಣಿಯು ಅಲ್ಲಿಗೆ ಬಂದಳು. ಒಮ್ಮೆಲೆ ನೋಡುವವರಿಗೆ ರಾಣಿಯ ವಯಸ್ಸು ಮೂವತ್ತು ವರ್ಷಕ್ಕಿಂತ ಹೆಚ್ಚು ಇದ್ದಂತೆ ತೋರುತ್ತಿದ್ದಿಲ್ಲ. ಆಕೆಯು ಸ್ವಲ್ಪ ಗಿಡ್ಡ ತರದವಳಾಗಿದ್ದಳು; ಆದ್ದ ರಿಂದ ಆಕೆಯು ಪ್ರೌಢವಯಸ್ಸಿನವಳಾಗಿದ್ದರೂ ಪ್ರಾಯಸ್ಥಳಂತೆ ತೋರು ಆದ್ದಳು. ೨೫ವರ್ಷದ ತರುಣಿಯಂತೆ ಆಕೆಯು ತೇಜಸ್ವಿಯಾಗಿದ್ದಳು. ಆಕೆಯ ಮೈ ಬಣ್ಣವು ಚೊಕ್ಕ ಚಿನ್ನ ದಂತೆ ಇತ್ತು, ಹಸ್ತಪಾದಗಳ ತಲಗಳು ರಕ್ತ ವರ್ಣದವಾಗಿದ್ದವು. ಆಕೆಯ ವಿಶಾಲನೇತ್ರಗಳು ತೇಜಃಪುಂಜವಾಗಿದ್ದವು, ಹಣೆ |