ಪುಟ:ತಿಲೋತ್ತಮೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಯಲ್ಲಿ ಎಲ್ಲಿಯೂ ನಿರಿಗೆಗಳು ಬಿದ್ದಿದ್ದಿಲ್ಲ. ಆಕೆಯ ಅಚ್ಚ ಕರಗಿನ ಉಂಗರು ಗೂದಲುಗಳ ಹೆರಳಿನಿಂದ ಮುಖದ ಸೌಂದರ್ಯವು ದ್ವಿಗುಣಿತವಾಗಿತ್ತು. ಆ ಸ್ವಭಾವಸುಂದರಿಯು ಬಗೆಬಗೆಯ ಅಲಂಕಾರಗಳಿಂದ ಅಲಂಕೃತಳಾಗಿ. ದ್ದಳು. ಆಕೆಯು ಹಾಸ್ಯಮಯಿಯೂ, ಪ್ರಸನ್ನ ವದನೆಯೂ, ಪರಿಹಾಸನಿಪು ಣೆಯೂ ಆಗಿದ್ದಳು. ಹೀಗೆ ಶೋಭಾ-ಸೌಂದರ್ಯಗಳನ್ನು ಸುರಿಸುತ್ತ ಉರ್ಮಿಳಾದೇವಿಯು ಸತಿಯಬಳಿಗೆ ಬಂದಳು. ಆದರೆ ಆಕೆಯು ಒಬ್ಬಳೇ ಬಂದಿದ್ದಿಲ್ಲ. ಇನ್ನೊಬ್ಬ ಲೋಕೋತ್ತರ ಸುಂದರಿಯಾದ ತರುಣಿಯನ್ನು ಸಂಗಡ ಕರಕೊಂಡು ಬಂದಿದ್ದಳು. ಆ ನೂತನ ತರುಣಿಯು ರಾಣಿಯ ಹಿಂದೆ ತಲೆಬಾಗಿಸಿ ನಿಂತುಕೊಂಡಿದ್ದಳು. ಆಕೆಯ ಶಾಂತವಾದ ಮುಖಮು ದ್ರೆಯು ಗಾಂಭೀರ್ಯವನ್ನು ಬೀರುತ್ತಿತ್ತು. ರಾಣಿಯ ಹಿಂದುಗಡೆಯಲ್ಲಿದ್ದ ಈ ನೂತನ ತರುಣಿಯನ್ನು ಮಹಾರಾಜರು ನೋಡಿದ್ದಿಲ್ಲ. ಉರ್ಮಿಳೆಯೊ ಡನೆ ವಿನೋದವಾಡುವ ಇಚ್ಛೆಯಿಂದ ಮಹಾರಾಜರು ರಾಣಿಯನ್ನು ಕುರಿತು-ಈ ಲೋಕೋತ್ತರ ಸುಂದರಮೂರ್ತಿಯನ್ನು ಒಂದು ಕ್ಷಣವಾ ದರೂ ಅಗಲಿಯಿರುವದಾಗದು, ಆ ವಿಯೋಗದುಃಖವನ್ನು ಸಹಿಸುವದ ಕ್ಕಿಂತ ಒಂದು ರಾತ್ರಿ ಉಪವಾಸವಿರುವದು ನೆಟ್ಟಗೆ ಕಾಣುತ್ತದೆ, ಅನ್ನಲು, ಮಹಾರಾಣಿಯು-IC ಊಟ-ಉಡಿಗೆಗಳನ್ನು ಕೂಡ ಮರೆಯುವ ಚಾಳಿಯು ನೆಟ್ಟಗಲ್ಲ. ಏಳಬೇಕು, ಭೋಜನಪಾತ್ರೆಯು ಸಿದ್ದವಾಗಿರುತ್ತದೆ, ಎಂದು ನುಡಿದು ಸ್ವಲ್ಪ ಬದಿಗಾಗಲು, ಆ ನೂತನ ತರುಣಿಯು ಮಹಾರಾಜರ ಕಣ್ಣಿಗೆ ಬಿದ್ದಳು. ಆಗ ಅವರು ರಾಣಿಯನ್ನು ಕುರಿತು ಮಾನಸಿಂಹ-ಈ ಬಾಲಿಕೆಯಾರು? ರಾಣಿ-ಈಕೆಯು ನನ್ನ ಒಬ್ಬ ಚಿಕ್ಕಂದಿನ ಗೆಳತಿಯ ಮಗಳು. ಮಹಾರಾಜರ ಪಾದವಂದನಕ್ಕಾಗಿ ಬಂದಿದ್ದಾಳೆ. ಈ ಮೇರೆಗೆ ಉರ್ಮಿಳಾರಾಣಿಯು ನುಡಿಯುತ್ತಿರಲು, ಆ ನೂತನ ತರುಣಿಯು ಮಹಾರಾಜರ ಚರಣಕ್ಕೆರಗಿ, ಅವರ ಚರಣಧೂಲಿಯನ್ನು ತನ್ನ ಮಸ್ತಕದಲ್ಲಿ ಭಕ್ತಿಯಿಂದ ಧರಿಸಿಕೊಂಡಳು. ಆಕೆಯ ಕಣ್ಣುಗಳು ಅಶ್ರುಪೂರ್ಣವಾಗಿದ್ದವು; ಆದರೆ ಯಾರೂ ಅದನ್ನು ನೋಡಿದ್ದಿಲ್ಲ! ಆ ತರು ಟೆಯ ತಲೆಬಾಗಿಸಿಕೊಂಡು ಮತ್ತೆ ರಾಣಿಯ ಮನೆಗೆ ಹೋಗಿ ನಿಂತುಕೊಂ