ಪುಟ:ತಿಲೋತ್ತಮೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧. ರಾಜಲಕ್ಷ್ಮಿ ಯು. ಡಳು. ಆಗ ಮಾನಸಿಂಹನು ಮಾನಸಿಂಹ-ಈ ಬಾಲಿಕೆಯು ಲಕ್ಷ್ಮಿ ದೇವಿಯಂತೆ ಸೌಂದರ್ಯ ಶಾಲಿನಿಯಾಗಿರುವಳು. ಈಕೆ ನಿನಗೆಲ್ಲಿ ಭೆಟ್ಟಿಯಾದಳು? ರಾಣಿ -ಈಕೆಯು ತನ್ನ ತಾಯಿಯ ಸಂಗಡ ಜಗನ್ನಾಥನ ದರ್ಶನ ಕ್ಕಾಗಿ ಬಂದಿರುವಳು, ಈಕೆಯ ತಾಯಿಯು ಊರಿಗೆ ಹೋದಳು; ಆದರೆ ಈಕೆಯನ್ನು ಅನಕಾ ನಾಲ್ಕು ದಿನ ಇರೆಂದು ನಾನು ಇಟ್ಟುಕೊಂಡಿರುವೆನು. ಕೆಲವು ದಿವಸ ಈಕೆಯನ್ನು ನನ್ನ ಬಳಿಯಲ್ಲಿ ಇಟ್ಟು ಕೊಳ್ಳಬೇಕೆಂದು ಮಾಡಿದ್ದೇನೆ. ಮಾನಸಿಂಹ-ಒಳ್ಳೇದು, ಅವಶ್ಯವಾಗಿ ಇಟ್ಟುಕೋ, ಹುಡುಗೆಯು ಒಳ್ಳೆ ಸುಶೀಲೆಯಿರುವಳು, ಈಕೆಯ ಯಾವತ್ತು ಲಕ್ಷಣಗಳು ಭಾಗ್ಯಶಾಲಿ ತ್ವವನ್ನು ವ್ಯಕ್ತಮಾಡುತ್ತವೆ. ಸ್ವಭಾವವೂ ಬಹು ಕೋಮಲವಾಗಿರುತ್ತದೆ. ಈಕೆಯ ಲಗ್ನವಾಗಿರುವದೇನು? ರಾಣಿ -ಹೌದು, ಈಕೆಯ ಲಗ್ನವಾಗಿರುವದು, ಈಕೆಯ ಲಗ್ನದ ಸಂಬಂಧದಿಂದ ಮಹಾರಾಜರ ಬಳಿಯಲ್ಲಿ ನ್ಯಾಯವನ್ನು ಬೇಡಿಕೊಳ್ಳಬೇಕಾ ಗಿದೆ; ಆದರೆ ಇಂದು ಬೇಡ, ಮತ್ತೆ ಎಂದಾದರೂ ಒಂದು ದಿನ ಬೇಡಿಕೆ ಳೋಣವಂತೆ. ಮಾನಸಿಂಹ-ನಿನ್ನ ಇಚ್ಛೆಯಂತೆ ಆಗಲಿ; ಆದರೆ ಈಕೆಯಯೋಗಕ್ಷೇ ಮದವ್ಯವಸ್ಥೆ ಯು ಚೆನ್ನಾಗಿ ಆಗಿರುವದಷ್ಟೆ? ರಾಣಿ-ಮಹಾರಾಜ, ಎಲ್ಲ ವ್ಯವಸ್ಥೆ ಯು ಸರಿಯಾಗಿ ಆಗಿರುವದು. ಹೀಗೆ ರಾಣಿಯು ನುಡಿಯುತ್ತಿರಲು, ಮಾನಸಿಂಹನು ಹಾಸಿಗೆಯ ಮೇಲೆ ಹೊರಳಿ-ಅಹಹಾ! ಈ ದಿನ ಎಷ್ಟುಶಕೆ ಕುಚ್ಚುತ್ತದೆ, ಅನ್ನಲು, ಉರ್ಮಿಳಾರಾಣಿಯು ಬೀಸಣಿಕೆಯನ್ನು ತರಲಿಕ್ಕೆ ಒಳಗೆ ಹೋದಳು; ಆದರೆ, ಅಲ್ಲಿಯೆ ಬಿದ್ದಿದ್ದಬೀಸಣಿಕೆಯನ್ನು ಆಕೆಯು ನೋಡಿದ್ದಿಲ್ಲ. ಆ ನೂತನ ತರುಣಿಯು ತಟ್ಟನೆ ಆ ಬಿಸಣಿಕೆಯನ್ನು ತಕ್ಕೊಂಡು ಮಹಾರಾಜರಿಗೆ ಗಾಳಿಯಹಾಕಹತ್ತಿದಳು. ಆಗ ಮಹಾರಾಜರು-ತಂಗೀ, ಬೇಡವ್ಯಾ ನೀನು ಗಾಳಿಯ ಬೀಸಬೇಡ, ಈಗ ದಾಸಿಯು ಬರುವಳು, ನಿನ್ನ ಕೈಗಳು