ಪುಟ:ತಿಲೋತ್ತಮೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ತಿಲೋತ್ತಮೆ. ನೋಂದಾವು, ಅನ್ನ ಲು, ಆ ತರುಣಿಯ ಮಧರಸ್ವರದಿಂದ- ಮಹಾರಾಜ ರನ್ನು ಸೇವಿಸುವದು ನನ್ನ ಕರ್ತವ್ಯವೆಂದು ನಾನು ತಿಳಿದಿರುವೆನು, ಎಂದು ನುಡಿದಳು. ಅಷ್ಟರಲ್ಲಿ ಉರ್ಮಿಳಾರಾಣಿಯು ಆಲ್ಲಿಗೆ ಬಂದಳು. ತರು ಣಿಯ ಉತ್ತರದಿಂದ ಮಹಾರಾಜರು ಸಂತುಷ್ಟರಾಗಿದ್ದರು. ಅವರು ರಾಣಿಗೆCಈುಡುಗೆಯ ಹೆಸರೇನು?” ಎಂದು ಕೇಳಲು, ರಾಣಿಯು-ಈಕೆಯಹೆಸರು CL ರಾಜಲಕ್ಷ್ಮಿ ಯು ” ಎಂದು ಹೇಳಿದಳು, ಅದನ್ನು ಕೇಳಿ ಮಹಾರಾಜರು ಹೆಸರು ಬಹಳ ಚೆನ್ನಾಗಿ ಒಪ್ಪುತ್ತದೆ. ನಿಜವಾಗಿಯೇ ಈ ಹುಡುಗೆಯು ರಾಜಲಕ್ಷ್ಮಿಯು ಇರುತ್ತಾಳೆ. ಈ ಲಕ್ಷ್ಮಿಯು ಪ್ರವೇಶ ಮಾಡಿದ ಮನೆಯ ವನು ನಿಜವಾಗಿ ರಾಜನೇ ಆಗಿರಬೇಕೆಂಬದರಲ್ಲಿ ಸಂಶಯವಿಲ್ಲ. - ಈ ಮೇರೆಗೆ ಮಾನಸಿಂಹನು ನುಡಿಯುತ್ತಿರಲು, ರಾಣಿಯು« ಮಹಾರಾಜರು ಇನ್ನು ಭೋಜನಕ್ಕೆ ಏಳಬೇಕು, ರಾತ್ರಿಯು ಬಹಳವಾ ಯಿತು, ಎಂದು ಆಗ್ರಹ ಮಾಡಿದಳು. ಆಗ ಮಾನಸಿಂಹನು, ರಾಣಿಯ ಕೈಯನ್ನು ಹಿಡಿದು ಭೋಜನಗೃಹಕ್ಕೆ ನಡೆದನು. ಅಷ್ಟರಲ್ಲಿ ರಾಜಲ ಕೈ ಯು ಉರ್ಮಿಳಾರಾಣಿಯ ಒಪ್ಪಿಗೆಯಿಂದ ಭೋಜನಶಾಲೆಗೆ ಹೋಗಿ, ಮಹಾರಾಜರ ಭೋಜನದ ಯಾವತ್ತು ವ್ಯವಸ್ಥೆ ಯನ್ನು ಅತ್ಯುತ್ತಮ ರೀತಿ ಯಿಂದ ಮಾಡಿದ್ದಳು. ಆಕೆಯ ಜಾಗ್ರತೆಯನ್ನೂ, ಸುವ್ಯವಸ್ಥೆಯನ್ನೂ ನೋಡಿ ಮಹಾರಾಜರು ಪರಮಸಂತುಷ್ಟರಾದರು. ಅಂದಿನಿಂದ ರಾಜಲ ಕ್ಷಿಯು ಮಹಾರಾಜರ ಸೇವಾ-ಚಾಕರಿಯನ್ನು ಮಾಡಹತ್ತಿದಳು. ಮಹಾ ರಾಜರಿಗಾದರೂ ಆಕೆಯ ಹಂಬಲವು ಬೇಗನೆ ಹತ್ತಿತು. ಮನೆಗೆ ಬಂದ ಕೂಡಲೆ ಮೊದಲು CC ರಾಜಲಕ್ಷ್ಮಿ ಯು ಎಲ್ಲಿರುವಳು?” ಎಂದು ಅವರು ಕೇಳ ಹತ್ತಿದರು, ಆಕೆಯ ಕೃತಿಗಳು ಅವರಿಗೆ ಸೇರುತ್ತಿದ್ದವು. ಆಕೆಯ ಪ್ರೇಮಲ ಸ್ವಭಾವಕ್ಕಾಗಿ ಅವರು ಯಾವಾಗಲೂ ಸಂತುಷ್ಟರಾಗಿರುತ್ತಿದ್ದರು. ಅವರು ತಮ್ಮ ಪ್ರತಿ ಒಂದು ಕೆಲಸವನ್ನು ರಾಜಲಕ್ಷ್ಮಿಗೆ ಹೇಳುತ್ತಿದ್ದರು. ರಾಜಲ ಕೈಯ ಕೈಮುಟ್ಟದ ಕೆಲಸಗಳು ಮಹಾರಾಜರಿಗೆ ಸೇರದಾದವು. ಪ್ರತಿ. ಒಂದು ಕೆಲಸವನ್ನು ರಾಜಲಕ್ಷ್ಮಿಯು ಮನಮುಟ್ಟಿ ಮಾಡುತ್ತಿದ್ದದ್ದರಿಂದ ಗುಬ್ಬರಾದ ಮಹಾರಾಜರು ಈ ವಿ೯ ಲಾರಾಣಿಯ ಬಳಿಯಲ್ಲಿ ಆಕೆ