ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9? ಹೊರತು, ತನಗೆ ಹೇಗೆ ಶಾಂತಿಯು ಉಂಟಾಗುವುದಿಲ್ಲವೋ ಅದನ್ನೆಲ್ಲಾ ನೆಮ್ರನಳು ಜ೧೩ಟರನಲ್ಲಿ ವಿಶ್ವಾಸನೆಯನ್ನು ಮಾಡಿ, ಟೆಲಿ ಯಾಕಸ್ಸನನ್ನು ಸಂಹರಿಸುವ ವರ ವನ್ನು ತನಗೆ ಕೊಡಬೇಕೆಂದು ಕೇಳಿಕೊಂಡು, ಜಪಿಟತನ, ಅ 31, ಹೇಳ ತಕ್ಕ ದ್ದನ್ನು ಮಂದಹಾಸಪೂರೈಕವಾಗಿ ಕೇಳಿ, ಹೇಳಿದ್ದೇನಂದರೆ : - “ ನಿನಗೆ ಬೇಕಾದ ಮರಗಳನ್ನು ನಾನು ಕೊಡುತ್ತೇನೆ, ಯಾವ ವರಗಳು ಫಲಿಸಬೇಕಾದರೂ, ಆ ವರದ ಫಲವನ್ನು ಹೊಂದತಕ್ಕ ವರ ಉದ್ದೇಶವು ಸಾಧುವಾಗಿ ರಬೇಕು, ಅವರು ಮನವಾಕ್ಕರ್ಮಗಳಲ್ಲಿ ಪರಿಶುದ್ಧರಾಗಿರಬೇಕು, ಹಾಗೆ ಇಲ್ಲದಿದ್ದರೆ, ಆ ವರಗಳು ಫಲಿಸುವುದಿಲ್ಲ. ಈ ಅರ್ಥವನ್ನು ಮಿನರ್ವಳು ತಿಳಿದು ಕೊಂಡಿರುವಳು. ಅದು ನಿನ್ನ ಅನುಭವಕ್ಕೆ ಬಂದಿಲ್ಲ, ಟೆಲಿಮಾಕಸ್ಸನು ಎಷ್ಟು ವಿಪತ್ತುಗಳು ಬಂದಾಗ್ಯೂ, ಅವುಗಳಿಂದ ಅವನು ಹತನಾಗುವುದಿಲ್ಲವೆಂದು ನೀನು ಹೇಳುತ್ತೀಯೆ. ಅದಕ್ಕೆ ಅವನ ಸೌಜನ್ಯವೇ ಮುಖ್ಯ ಕಾರಣ, ಸನ್ಮಾರ್ಗಪ್ರವ ರ್ತಕರನ್ನು ಮೂಲೋತ್ಪಾಟನ ಮಾಡುವುದು ನನಗೂ ಅಸಾಧ್ಯ. ಇದಕ್ಕಾಗಿ ನೀನು ವ್ಯಸನಪಟ್ಟು ಪ್ರಯೋಜನವಿಲ್ಲ. ಅವನು ಧರ್ಮವನ್ನು ಬಿಟ್ಟು ನಡೆದರೆ, ಅವನನ್ನು ನಿಗ್ರಹಿಸುವುದು ಸುಲಭ, ಹಾಗೆ ಇಲ್ಲದಿದ್ದರೆ, ನೀನು ಅವನಿಗೆ ಯಾವ ಅಪಕಾರ ವನ್ನು ಮಾಡುವುದಕ್ಕೆ ಪ್ರಯತ್ನ ಮಾಡಿದರೂ, ಅದು ಉಪಕಾರವಾಗಿ ಪರಿಣಮಿಸು ವುದು, ನಾವೆಲ್ಲರೂ ಕರ್ಮಕ್ಕೆ ಅಧೀನರು, ಅದನ್ನು ಮೀರುವುದಕ್ಕೆ ಯಾರಿಗೂ ಶಕ್ತಿ ಇರುವುದಿಲ್ಲ” ಎಂದು ಜೂಪಿಟರನು ಹೇಳಲು, ಭಗ್ನ ಮನೋರಥಳಾಗಿ ನನ್ನೂ ನಳು ಹೊರಟು ಹೋದಳು. ಅನಂತರ ಮಿನರ್ವಳು ಜೂಪಿಟರನ ಸನ್ನಿಧಿಗೆ ಬಂದಳು. ಜೂಪಿಟರನು ಆಕ ಯನ್ನು ಸತ್ಕರಿಸಿ, ನೆಪ್ಪನಳು ಭಗ್ನ ಮನೋರಥಳಾಗಿರುವ ವೃತ್ತಾಂತವನ್ನು ತಿಳಿಸಿ ದನು ಅದನ್ನು ಕೇಳಿ, ಮಿನರ್ವಳು ಹೇಳಿದ್ದೇನಂದರೆ : “ ಸಕಲ ಸೃಷ್ಟಿ, ಸ್ಥಿತಿ, ಪ್ರಳಯಗಳಿಗೂ ನೀನು ಕಾರಣಭೂತನಾಗಿರು ಶ್ರೀಯೆ, ನಿನ್ನ ಸಂಕಲ್ಪದಂತೆ ಸಕಲ ಕಾಶ್ಯಗಳೂ ನಡೆಯುವುವು ನೀನು ನಿರ್ಲಿ ಪ್ರನಾಗಿರುತ್ತೀಯೆ. ಎಲ್ಲರೂ ಅವರವರ ಕರ್ಮಗಳಿಗನುಸಾರವಾಗಿ ಶುಭಾಶುಭಗ ಳನ್ನು ಅನುಭವಿಸುವಂತೆ ಮಾಡಿರುತ್ತೀಯೆ. ನಿನಗೆ ನಾನೂ, ನೆಮ್ಮನಳೂ ಎಲ್ಲರೂ ಒಂದೇ ನಿನ್ನ ಧರ ವನ್ನು ತಿಳಿದುಕೊಳ್ಳದೆ, ನಾವು ಅತಿಕ್ರಮಿಸಿ ನಡೆದರೆ, ನಮಗೂ