ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ನಮತು?ಪರದೇವತಾ ' ಎ೦ಬರಾಗಿ ಮಹನೀಯರು ಹೇರುವುದನ್ನು ನೀವು ಕೇಳಿ ರುವಿರಿ, ನಮ್ಮ ತಾಯಿಯ ಮಾನರಕ ಸೆಗಳನ್ನು ಮಾಡುವುದು ಸಾಧ್ಯವಾದರೆ ಮಾಡಬೇಕು, ಅಸಾಧ್ಯವಾದರೆ, ಹಾಗೆ ಮಾನರಕ್ಷಣೆಯನ್ನು ಮಾಡುವುದರಲ್ಲಿ ಈ ದೇಹವನ್ನಾ ದರೂ ಬಿಡಬೇಕು, ನನ್ನ ಸ್ಥಿತಿಯು ಹೀಗಿರುವುದು, ನನ್ನಲ್ಲಿ ಕರುಣೆ ಯನ್ನಿಟ್ಟು, ನೀವೆಲ್ಲರೂ ಈ ದ್ವೀಪದ ಪ್ರಭುತ್ವವನ್ನು ಕೊಡುತ್ತೇವೆಂದು ಹೇಳುತ್ತೀರಿ. ಅದನ್ನು ಪರಿಗ್ರಹಿಸುವ ಅದೃಷ್ಟವು ನನಗೆ ಇರುವುದಿಲ್ಲ. ಆದರೆ, ನೀವು ನನ್ನಲ್ಲಿ ಇಟ್ಟಿಗುವ ಪ್ರೀತಿಗೆ ನಾನು ಬಹಳ ಕೃತಜ್ಞನಾಗಿರುತ್ತೇನೆ. ಇದನ್ನ ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಪ್ರಾಣಕ್ಕಿಂತಲೂ ನನ್ನ ಮಾನವು ದೊಡ್ಡದಾದದ್ದರಿಂದ ಮಾನರಕ್ಷಣೆಯ ಪ್ರಯತ್ನ ಇಲ್ಲಿ ನಾನು ಉದ್ದು, ಕನಾದರೆ, ಅದು ನಿಮಗೆ ಅಸಮಾ ಧಾನವನ್ನುಂಟುಮಾಡಲಾರದೆಂದು ನಾನು ನಂಬಿ ಇದೇನೆ. ಈ ದೇಹದಲ್ಲಿ ಪ್ರಾಣ ವಿರುವವರೆಗೂ ನನ್ನ ವಿಷಯದಲ್ಲಿ ನೀವು ಇಟ್ಟಿರತಕ್ಕೆ ಅಭಿಮಾನವನ್ನು ನಾನು ಮರೆ ಯುವುದಿಲ್ಲ. " ಹೀಗೆ ಹೇಳುತ್ತಿರುವಾಗಲೇ ಅಲ್ಲಿ ನೆರೆದಿದ್ದ ಮಹಾ ಜನಗಳೆಲ್ಲರೂ ತಮ್ಮ ಅಸ ಮಾಧಾನವನ್ನ ಸೂಚಿಸುವುದಕ್ಕೆ ಉಪಕ್ರಮ ಮಾಡಿದರು. ಇದು ಪ್ರಥಮತಃ ಪಿಸುಮಾತಿನಂತೆ ಉಪಕ್ರಮವಾಯಿತು ಕ್ರಮ ಕ್ರಮವಾಗಿ ಪ್ರಳಯಕಾಲದ ಅಲೆಗಳ ಧ್ವನಿಯ ಅವಸ್ಥೆಯನ್ನು ಹೊಂದಿತು. ಮ ಹಾ ಜನಗಳು ತಮ್ಮಲ್ಲಿ ತಾವೇ ಮಾತನಾಡಿಕೊಳ್ಳುವುದಕ್ಕೆ ಉಪಕ್ರಮಿಸಿದರು. ಇವನು ಮನುಷ್ಯ ನೇ ಅಧವಾ ದೇವರೇ ಎಂದು ಕೆಲವರು ಕೇಳಿದರು. ಇವನನ್ನು ನಾವು ನೋಡಿ ಇದೇವೆ. ಇವನೇ ಟೆಲಿಮಾಕಸ್ಸನು. ಇವನೇ ಯಲಕಸ್ಸನ ಮಗನು ಎಂದು ಮತ್ತೆ ಕೆಲವರು ಹೇಳಿ ದರು. ಇವನನ್ನು ಬಲಾತ್ಕಾರದಿಂದ ಈ ಪ್ರಭುತ್ವಕ್ಕೆ ಒಪ್ಪಿಸಬೇಕೆಂದು ಮತ್ತೆ ಕೆಲ ವರು ಹೇಳಿದರು. ಹೀಗೆ ಗಲಾಟೆಗೆ ಉಪಕ್ರಮವಾಗಲು, ನಾನು ಹೇಳುವುದನ್ನು ಕೊನೆಗೂ ಕೇಳಬೇಕು ಎಂದು ನಾನು ಪ್ರಾರ್ಥಿಸಿದೆನು. ಕೂಡಲೇ ಗಲಾಟೆಯು ನಿಂತಿತು. ಆ ಮಹಾ ಸಭೆಯಲ್ಲಿ ಲೇಶವೂ ಶಬ್ಬ ಎಲ್ಲದಂತಾಯಿತು. ಎಲೈ ಮಹಾ ಶಯರೇ-ನನ್ನ ಮನೋಗತವನ್ನು ನಾನು ಹೇಳಿ ಪೂರೈಸುವವರೆಗೂ ಸಾವಧಾನ ವಾಗಿ ಕೇಳಿ, ಪ್ರಪಂಚದ ಮತಾ ಒನಗಳಲ್ಲೆಲ್ಲಾ ನೀವು ಕೇವಲ ವಿವೇಕಶಾಲಿ ಗಳು ನಿಮಗೆ ಪ್ರಭುವಾಗತಕ್ಕವನು ನಿಮ್ಮ ದೇಶೀಯನಾಗಿರಬೇಕು, ನಿಮ್ಮ ಭಾಷಾ ಗಿ ೧