ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

121 • \+ ಗ್ರೀಸ್ ಜನಗಳ ಸಹಾಯವು ಅವರಿಗೆ ದೊರೆಯುತ್ತಿತ್ತೇ? ಗ್ರೀಸ್ ದೇಶದವರು ಮಾತ್ರವೇ ಅಲ್ಲದೆ, ಇತರರನೇಕರು ಅವರ ಕಡೆ ಸೇರಿರುವರೆಂದು ನೀನು ಹೇಳುತ್ತೀಯೆ. ಇದು ಅವರ ಸೌಜನ್ಯವನ್ನು ತೋರಿಸುತ್ತದೆ. ಅವರ ಮೇಲ್ಪ೦ಗ್ರಿಯನ್ನು ನೀವೂ ಅನುಸರಿಸಿದ್ದರೆ ಚೆನ್ನಾಗಿತ್ತು. ದ್ವೇಷಿಗಳನ್ನು ಪ್ರೀತಿಸಿದರೆ ಅವರೂ ಕೂಡ ಮಿತ್ರ ರಾಗುವರು. ಇದು ನಿಮಗೆ ಗೊತ್ತಾಗಲಿಲ್ಲ. ಚಿಂತೆಯಿಲ್ಲ, ಮಿತ್ರರನ್ನು ಪ್ರೀತಿ ಸುವುದು ಕರ್ತವ್ಯವಲ್ಲವೇ ? ನೀವು ಬಂದ ಕೂಡಲೆ ತಮ್ಮ ದೇಶದಲ್ಲಿ ಉತ್ಕೃಷ್ಟವಾದ ಭಾಗವನ್ನು ನಿಮಗೆ ಬಿಟ್ಟು, ಕಾಡು-ಮೇಡು ಪ್ರದೇಶಗಳನ್ನು ಅವರು ವಹಿಸುವು ದಾಗಿ ಹೇಳಿದರು. ಅದಕ್ಕೆ ಒಪ್ಪದೆ, ಅವರನ್ನು ಅಲ್ಲಿಂದಲೂ ಓಡಿಸಬೇಕೆಂದು ನೀವು ಪ್ರಯತ್ನ ಮಾಡಿದಿರಿ, ನಾಗರಿಕರಾದ ನಿಮಗಿಂತಲೂ ಈ ಕಾಡುಜನಗಳು ಉತ್ತಮರೆಂದು ನಿಮ್ಮ ನಡತೆಯಿಂದಲೇ ಗೊತ್ತಾಯಿತು, ನ್ಯಾಯವಾಗಿ ಅವರು ನಾಗರಿಕರು, ನೀವು ಕಾಡುಜನಗಳು, ಅವರು ವಿನೀತರು, ನೀವು ಧೂರ್ತರು. ಅವರು ಸಭ್ಯರು, ನೀವು ದುರ್ಮಾರ್ಗಪ್ರವರ್ತಕರು. ನಮ್ಮ ಕರ್ಮಗಳ ಫಲ ವನ್ನು ನಾನೇ ಅನುಭವಿಸಬೇಕು. ಇಷ್ಟು ಜನಗಳು ವಿರೋಧಿಗಳಾಗುವುದಕ್ಕೆ ನೀವೇ ಕಾರಣಭೂತರಲ್ಲವೇ ? ಬಲವಾದ ದುರ್ಗಗಳನ್ನೂ, ಗಗನಕ ೦ಬಿಗಳಾದ ಪ್ರಾಸಾದ ಗಳನ್ನೂ ಕಟ್ಟಿಸುತ್ತಲಿದ್ದೀಯೆ. ನಿನ್ನ ನೆರೆಹೊರೆಯವರನ್ನೆಲ್ಲಾ ಮೂಲೋತ್ಪಾಟನ ಮಾಡಬೇಕೆಂದು ಪ್ರಯತ್ನ ಮಾಡುತ್ತಲಿದ್ದೀಯೆ. ಈ ದುರ್ಗಗಳು ನಿನ್ನನ್ನು ರಕ್ಷಿಸಬಲ್ಲವೇ ? ನಿನ್ನ ಪರಾಜಯಕ್ಕೆ ಇವುಗಳು ಕಾರಣ ವಲ್ಲವೇ ? ಯಾವ ರಾಜ್ಯಕ್ಕೆ ನ್ಯಾಯವೂ, ಪ್ರಾಮಾಣಿಕತೆಯೂ, ಸತ್ರ ವೂ, ಧರ್ಮವೂ, ಸಮ ಸ್ತರೂ ಸುಖವಾಗಿರಲಿ ಎಂಬ ಅಭಿನಿವೇಶವೂ, ಎಲ್ಲರೂ ಬದುಕಲಿ, ನಾವೂ ಬದು ಕೋಣವೆಂಬ ಸಂಕಲ್ಪವೂ ಅಸ್ತಿಭಾರಗಳಾಗಿರುವುವೋ ಆ ದೇಶವನ್ನು ಅಲ್ಲಾಡಿಸುವುದಕ್ಕೆ ಯಾರೂ ಸಮರ್ಥರಾಗುವುದಿಲ್ಲ, ಅತ್ಯಂತ ಬಲವುಳ್ಳ ಕೋಟೆ ಗಳು ನೆಲಸಮ ಮಾಡಲ್ಪಡಬಹುದು, ಮಹಾ ಪರಾಕ್ರಮಶಾಲಿಗಳುಳ್ಳ ಸೈನ್ಯಗಳು ಸೋಲಿಸಲ್ಪಡಬಹುದು, ಅತ್ಯಂತ ಬಲಿಷ್ಠರಾದವರೂ ಕೂಡ ದೈವಬಲವನ್ನು ತಪ್ಪಿ ಸಿಕೊಂಡರೆ ದುರ್ಬಲರಾಗುವರು, ಅಸಹಾಯಶೂರನಾದ ಶ್ರೀರಾಮನಿಂದ ಅಪ್ರತಿ ಹತವಾದ ಸಂಸತ್ತುಗಳನ್ನು ಹೊಂದಿದ್ದ ರಾವಣನು ಕೊಲ್ಲಲ್ಪಡಲಿಲ್ಲವೇ ? ಪ್ರಪಂಚದ 16