ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ಚರಿತ್ರೆಯಲ್ಲಿ ಇಂತಹ ದೃಷ್ಟಾಂತಗಳು ಇರುವುದಿಲ್ಲ? ಮೈನಾಸನ ಮೊಮ್ಮಗ ನಾಗಿ, ನಿನಗೆ ಈ ವಿಷಯಗಳು ತಿಳಿಯದೆ ಹೋದದ್ದಕ್ಕೋಸ್ಕರ ನಾನು ತುಂಬಾ ವಿಷಾ ದಿಸುತ್ತೇನೆ, ಈ ದುರ್ಗ ಗಳಿಂದ ಪ್ರಯೋಜನವಿಲ್ಲ. ನಿನ್ನ ನೆರೆಹೊರೆಯ ವ.ಪಾ ಜನಗಳ ಪ್ರೀತಿಯು ಈ ದುರ್ಗಗಳಿಗಿಂತಲೂ ಬಲವಾದವುಗಳು, ಅವರ ನಂಬಿಕೆಯು ನಿನಗೆ ವಜ್ರಕವಚಕ್ಕೆ ಸಮಾನವಾದದ್ದು, ಇಂಥಾ ವಿಶ್ವಾಸವನ್ನೂ, ನಂಬಿಕೆಯನ್ನೂ ಪಡೆಯುವುದಕ್ಕೆ ನೀನು ಪ್ರಯತ್ನ ಮಾಡಲಿಲ್ಲ, ಪ್ರಭುಗಳು ಅಧಿಕಾರಮದದಿಂದ ಉನ್ಮತ್ತರಾಗಿ ನಡೆದುಕೊಂಡರೆ ಮಂತ್ರಿಗಳೇ ಮೊದಲಾದವರು ಈ ನ್ಯೂನತೆಯನ್ನು ಪರಿಹಾರ ಮಾಡಬೇಕು, ದೂರದೃಷ್ಟಿಯುಳ್ಳ ಮಂತ್ರಿಗಳೂ ಕೂಡ ನಿನಗೆ ದೊರೆ ಯಲಿಲ್ಲವೆಂದು ಗೊತ್ತಾಗುತ್ತವೆ. ಧರ್ವುದಿಂದ ನಡೆಯತಕ್ಕವರಿಗೆ ಲೋಕವೆಲ್ಲಾ ಸಹಾಯ ಮಾಡುವರು, ಅಧರ್ಮದಿಂದ ನಡೆಯತಕ್ಕ ವರನ್ನು ಪುತ್ರ, ಮಿತ್ರ, ಕಳ ತ್ಯಾದಿಗಳೆಲ್ಲರೂ ಬಡುವರು, ಈ ವಿಷಯದಲ್ಲಿ ನಿಮ್ಮ ತಾತನು ಹೇಳಿರತಕ್ಕೆ ಧರ್ಮ ಗಳು ನಿನ್ನ ಪರ್ಯಾಲೋಚನೆಗೆ ಬಂದಂತೆ ತೋರುವುದಿಲ್ಲ, ನಿನ್ನ ನೆರೆಯವರು ನಿನ್ನಲ್ಲಿ ಅನುರಕ್ತರಾಗುವಂತೆ ಮಾಡಿ ಕೊಳ್ಳುವುದು ನಿನಗೆ ಪ್ರಥಮ ಕರ್ತವ್ಯವಾಗಿತ್ತು. ಈ ದೇಶವನ್ನು ಕಟ್ಟುವುದಕ್ಕೆ ನೀನು ಮಾಡಿದ ಬರ್ಚನ್ನ, ಸಿಹನನ್ನೂ ನಿನ್ನ ನೆರೆ ಹೊರೆಯವರ ಪ್ರೀತಿಯನ್ನು ಸಂಪಾದಿಸುವುದಕ್ಕೆ ನೀನು ವಿನಿಯೋಗಿಸಿದ್ದರೆ, ನಿನ್ನನ್ನು ಮೂಲೋತ್ಪಾಟನ ಮಾಡಬೇಕೆಂದು ಇಷ್ಟು ಜನಾಂಗಗಳು ಒಗ್ಗಟ್ಟಾಗಿ ಬರ. ದ್ದರೇ ? ನೀನು ದೊಡ್ಡ ತಪ್ಪನ್ನು ಮಾಡಿದೆ. ಅದರ ಫಲವನ್ನು ತಪ್ಪಿಸಿಕೊಳ್ಳಲು ಬಹಳ ಕಷ್ಟವಾಗಿ ಇದೆ, ಕಷ್ಟವಾದ ಮಾತ್ರದಲ್ಲಿಯೆ ಅಸಾಧ್ಯವೆಂದು ತಿಳಿದುಕೊ ಳ್ಳಬಾರದು. ಈಗ ಯುದ್ಧವು ಸನ್ನಿ ತವಾಗಿರುವುದು, ನಿನ್ನನ್ನು ವ.ಲೋತ್ಸಾ - ಟನ ಮಾಡಬೇಕೆಂದು ಅನೇಕ ಜನಾಂಗದವರು ಸೇರಿಕೊಂಡು ಬಂದಿರುವರು. ನಿನ್ನ ಸೈನ್ಯವು ಕಡಮೆಯಾಗಿರುವುದು, ನಿನ್ನ ಪ್ರತಿಕಕ್ಷಿಗಳ ಸೈನ್ಯವು ಹೆಚ್ಚಾಗಿರುವುದು. ಇದು ವಿಶೇಷ ಗಣನೀಯವಾದದ್ದಲ್ಲ, ಧರ್ಮವನ್ನು ನೀನು ಪರಿತ್ಯಾಗ ಮಾಡಿರುಎ. ದೇವರ ಸಹಾಯವು ನಿನಗಿರುವುದಿಲ್ಲ, ತಪ್ಪನ್ನು ಮಾಡಿದೆನೆಂಬ ಭಾವನೆಯು ನಿನಗೂ, ನಿನ್ನ ಜನಗಳಿಗೂ ಇರುವುದು, ನಿನ್ನ ಶತ್ರುಗಳು ತಾವು ಧರ್ಮಿಷ್ಟರೆಂಬದಾಗಿಯು, ನೀನು ಅಧರ್ಮಿಷ್ಟನೆಂಬದಾಗಿಯೂ ತಿಳಿದುಕೊಂಡಿರುವರು, ತಮಗೆ ದೈವಬಲ ಎರುವುದ೦ಬದಾಗಿಯೂ, ನಿನಗೆ ಆ ಬ"ಎವೆಂಬದಾಗಿಯೂ ತಿಳಿದುಕೊಂಡಿರುವರು.