ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 } ಇದಲ್ಲದೆ ತಾವು ಪ್ರಾರೂಕರಾಗಿರುವುವೆಂಬದಾಗಿಯೂ, ನಿಗೆ ಉಪಕಾರ ಮಾಡು ವುದಕ್ಕೆ ಪ್ರಯತ್ನ ಮಾಡಿದಾಗ್ಯೂ, ನೀನು ಪ್ರತ್ಯಪಕಾರ ಮಾಡಿರುವಿ ಎ೦ಬದಾ ಗಿ ತಿಳಿದುಕೊಂಡಿರುವರು, ಈ ಭಾವನೆಯಿಂದ ಇವರಿಗೆ ಅಪ್ರತಿಹತವಾದ ಶಕ್ತಿಯು ಉಂಟಾಗಿರುವುದು, ಈ ಸಂದಭ್ರ ದಲ್ಲಿ ನಿನಗೆ ಜಯವಾಗುವುದೇ ? ಯ ಎದ್ದ ಮಾಡುವುದು ಧರ್ಮ ವೇ ? ? ಈ ರೀತಿಯಲ್ಲಿ ಮೆಂಟರನು ಕೇಳಲು, ಇಡುವಿನಿಯಸ್ಸನಿಗೆ ತನ್ನ ಆ ಧರ್ಮ ಪ್ರವರ್ತನವೂ, ತನ್ನ ನೃತ್ಯರ ದೌರಾತ್ಮವೂ ಸ್ಪಷ್ಟವಾಗಿ ಗೊತ್ತಾಯಿತು. ಮೆctತರ ನನ್ನು ಕುರಿತು ಇವನು ಹೇಳಿದ್ದೇನಂದರೆ : - ಎಲೈ ಮೆಂಟರೇ, ನೀನು ಹೇಳಿದೆ ಲ್ಯಾ ನಿಜ, ಈ ಕಾಡುಜನಗಳು ಕೇವಲ ಧರ್ಮಿಷ್ಟರು, ಅವರು ಮಾಡಿದ ಉಪಕಾರಕ್ಕೆ ನಾವು ಪ್ರತಿ ಪಕಾರವನ್ನು ಮಾಡಿರುವೆವು. ಇದಕ್ಕೆ ನಾನು ಹೇಗೋ ಹಾಗೆ ನನ್ನ ನೃತ್ಯರೂ ಕಾರಭೂತರಾಗಿರು ತ್ತಾರೆ. ಈ ಕಾಡುಜನಗಳ ಜೊತೆಗೆ ಗ್ರೀಸ್ ದೇಶೀ ಯರೇ ಮೊದಲಾದ ಅನೇಕರು ಸೇರುವುದಕ್ಕೂ ನಮ್ಮ ದೌರಾತ್ಮವೇ ಮುಖ್ಯ ಕಾರಣ ಈ ವಿಷಮಾವಸ್ಯೆಯುಂಟಾಗುವಂತೆ ನಾವೇ ಮಾಡಿ ಕೊಂಡೆವು ಇದಕ್ಕೆ ನಮ್ಮ ಅಧಿಕಾರವರವೂ, ನಮ್ಮ ಐಶ್ವಯ್ಯ ಮದವೂ, ಇವುಗಳಿಂದುಂಟಾದ ಅಜ್ಞಾನವೂ ಮುಖ್ಯ ಕಾರಣಗಳು, ಜ್ಞಾನವಿಲ್ಲದವರಿಗೆ ಮೋಕ್ಷವಿಲ್ಲವೆಂದು ಹಿರಿಯರು ಹೇಳಿರು ವುದು, ಅದಕ್ಕೆ ಇದು ಒಂದು ದೃಷ್ಟಾಂತವಾಯಿತು. ನಾನು ಬಹಳ ದುರದೃಷ್ಟ ವಂತನು, ನನ್ನ ತಪ್ಪುಗಳನ್ನು ತೋರಿಸಿ, ದುರ್ಮಾರ್ಗಪ್ರವರ್ತಕನಾಗದಂತೆ ಮಾಡತ ಈವರು ನನಗೆ ಯಾರೂ ದೊರೆಯಲಿಲ್ಲ, ಪ್ರಭುಗಳು ಪ್ರಾಯಕವಾಗಿ ಸ್ತೋತ್ರ ಪ್ರಿಯರಾಗಿರುತ್ತಾರೆ, ನಾನೂ ಹಾಗೆಯೇ ಇದ್ದೆನು. ಅದರಿಂದಲೇ ಅಪ್ರಿಯವಾ ದಾಗ್ಯೂ, ಪಥ್ಯವಾಗಿ ಇರತಕ್ಕೆ ಹಿತೋಪದೇಶಗಳನ್ನು ಮಾಡತಕ್ಕವರು ನನಗೆ ದೊರೆ ಯಲಿಲ್ಲ. ಈ ದುರವಸ್ಸಿಗೆ ನಾನೇ ಕಾರಣಭೂತನು. ಈಗ ಯುದ್ಧ ಮಾಡುವುದು ಧರ್ಮವಲ್ಲವೆಂದು ನನಗೆ ತೋರುತ್ತದೆ. ಆದಾಗ್ಯೂ, ಯುದ್ದ ಮಾಡದೆ ಇರುವುದು ಆಸಾಧ್ಯ, ಸಮಾಧಾನವನ್ನ ಸೇಕ್ಷಿಸಿ ಈ ಕಾಡುಜನಗಳು ನನ್ನಲ್ಲಿ ಬಂದರು. ನಾನೂ ಅದಕ್ಕೆ ಒಪ್ಪಿಕೊಂಡಿದ್ದೆನು, ಪ್ರಮಾದದಿಂದ ಅವರಿಗೆ ನನ್ನಲ್ಲಿ ನಂಬಿಕೆ ತಪ್ಪುವಂತಾ ಯಿತು. ಸಾವಕಾಶ ಮಾಡದೆ ನಂಬಿಕೆಯನ್ನು ಪುನಃ ಉಂಟುಮಾಡಿ ಕೊಳ್ಳುವ ಪ್ರಯತ್ನವು ಮಾಡಬೇಕಾಗಿತ್ತು. ಆ ರೀತಿಯಲ್ಲಿ ನಾನು ಮಾಡಲಿಲ್ಲ, ಈಗ