ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ' -- , , , www h••• • •••\ N ೧- v/s - ೧ ಸಮಧಾನವನ್ನು ಮಾಡಿ ಕೊಳ್ಳುವುದು ಸಾಧ್ಯವಲ್ಲ, ನಂಬಿ ಕೆಗೆ ನಾನು ಅರ್ಹನಲ್ಲ ವೆಂದು ಅವರು ತಿಳಿದುಕೊಂಡು ಇದಾರೆ. ಈ ಸು ವೆಶ ರಲ್ಲಿ ವಾ ತ ತಕ್ಕದ್ದೇನು ಇದೆ? ನಾನು ಯುದ್ಧ ಮಾಡದಿದ್ದರೆ ಮೋಸಗಾರತನದ ಜೊತೆಗೆ ಹೇಡಿತನವನ್ನೂ ಕೂಡ ಆರೋಪಿ ಸುವರು, ಈ ಸಂದರ್ಭದಲ್ಲಿ ಹೇಗೆ ನಡೆಯಬೇಕೋ ಅದು ನನಗೆ ತೋರುವುದಿಲ್ಲ. ದೈವಯೋಗದಿಂಡ ನೀನು ಇಲ್ಲಿಗೆ ಬಂದಿರುತ್ತೀಯೆ. ಇದನ್ನು ನೋಡಿದರೆ ನಾನು ಯೋಗ್ಯನಾಗುವುದಕ್ಕೆ ಇನ ಒಂದು ಅ ಕ9 ಶವನ್ನು ಕೊಡ ಬೇಕೆಂದು ದೇವರಿಗೆ ಸಂಕಲ್ಪವಿರಬಹುದೆಂದು ನನಗೆ ತೋರುತ್ತದೆ. ಮೈನಾಸನ ಮೊಮ್ಮಗನು ದುರಾತ್ಮನೆಂದು ದಿಗಂತ ವಿಶ್ರಾಂತವಾಗಬಾರದೆಂಬ ಭಾವನೆಯು ದೇವ ರಿಗೆ ಇರಬಹುದೆಂದು ತೋರುತ್ತದೆ. ನಮ್ಮ ಭಾಗದ ದೇವರಾಗಿ ನೀನು ಬಂದಿರು ದೆ, ಈ ಸಂದರ್ಭದಲ್ಲಿ ಹೇಗೆ ನಡೆಯಬೇಕೋ ಅದನ್ನು ನಿಷ್ಕಷಿ೯ಸು, ನಿನ್ನಾ ಚೆಯೇ ಜಗದೀಶ್ವರನ ಆಜ್ಞೆ ಯಾಗಿದ್ದರೆ ಹೇಗೋ ಹಾಗೆ ನಾನು ನಡೆಯುತ್ತೇನೆ.” ಅದಕ್ಕೆ ವೆಂಟರು ಹೇಳಿದ್ದೇನಂದರೆ :- ಈ ಹೆರಿಯಾ ದೇಶದಲ್ಲಿ ಗ್ರೀಸ್ ದೇಶದವರು ಅನೇಕರು ವಸತಿಗಳನ್ನು ಮಾಡಿ ಕೊಂಡಿದಾರೆ ಅವರೆಲ್ಲರೂ ನಿನ್ನನ್ನು ಬಲ್ಲರು, ನಿಮ್ಮ ತಾತನಾದ ಮೈನಾಸನು ಈ ದೇಶಕ್ಕೆ ಮಾಡಿರತಕ್ಕ. ಉಪಕಾರವನ್ನು ಇವರು ಮರೆತ ಇಲ್ಲ, ಪ್ರಾಯರ್ ದೇಶದ ಮುತ್ತಿಗೆಯಲ್ಲಿ ನೀನು ಮಾಡಿದ ಸಾಹಸಕಾರ್ಯಗಳನ್ನು ಅವರು ಮರೆತು ಇಲ್ಲ. ಗ್ರೀಸ' ದೇಶ ಕ್ಕೆ ನೀನು ಬಹಳ ಸಹಾಯ ಮಾಡಿರುವೆ. ಹೀಗಿದ್ದಾಗ್ಯೂ, ಅವರ ಸಹಾಯವನ್ನು ನೀನು ನಡೆಯದೇ ಇರುವುದಕ್ಕೆ ಕಾರಣವೇನು ? ಇವರಲ್ಲನೇಕರು ನಿನಗೆ ವಿರೋಧವಾಗಿ ಸೇರು ವುದಕ್ಕೆ ಕಾರಣವೇನು ? ನಿನ್ನ ಪ್ರತಿಕಕ್ಷಿಗಳಾದ ಕಾಡುಜನಗಳು ಧರ್ಮಿಷ್ಟರಂಬ ದಾಗಿಯೂ, ನೀನು ನಿರಂಕುಶ ಪ್ರವರ್ತಕನಾಗಿಯ, ಅಧರ್ಮಿಷ್ಟನಾಗಿಯೂ ಇರುವಿ ಎಂದು ಅವರು ತಿಳಿದುಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣವಲ್ಲವೇ ? ಅ೦ಥಾ ಸಂಶಯವನ್ನು ಹೋಗಲಾಡಿಸುವುದು ನಿನಗೆ ಕರ್ತವ್ಯವಲ್ಲವೇ ? ನೀನು ಸತ್ಯಸಂಧ ನೆಂದು ಗೊತ್ತಾದ ಕೂಡಲೇ, ಈ ಕಾಡುಜನಗಳೂ, ಇವರ ಸಹಾಯಾರ್ಥವಾಗಿ ನಿನಗೆ ಪ್ರತಿಕಕ್ಷಿಗಳಾಗಿ ಬಂದಿರತಕ್ಕ ಗ್ರೀಕರೇ ಮೊದಲಾದವರೂ ನಿನ್ನಲ್ಲಿ ಸುಪ್ರೀತರಾಗು ವುದು ಅಸಂಭವವೇ ? ಈ ವಿಷಯವನ್ನು ಪರ್ಯಾಲೋಚಿಸು' ಎಂದು ಮೆಂಟರನು ಹೇಳಲು ಇಡುಮಿನಿಯಸ್ಸನು ಶೃತಪಡಿಸಿದ್ದೇನಂದರೆ: ...