ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ) “ ಎಲೈ ಮೆಂಟರೇ, - ಈ ಹೆಸ್ಪೀರಿಯಾ ದೇಶದ ವಸತಿಗಳಿಗೆ ಸಂಬಂಧಪಟ್ಟವ ರೆಲ್ಲರೂ ಈ ಯುದ್ಧದಲ್ಲಿ ಉಾಸೀನರಾಗಿರ ಬೇಕೆಂದು ನಿಷ್ಕರ್ಷ ಮಾಡಿರುವಂ? ತೋರುತ್ತದೆ, ನನಗೆ ಸಹಾಯ ಮಾಡ ಬೇಕೆಂಬ ಮನೆ ಭಾವವು ಅವರಿಗಿರುವುದು. ಆದರೆ, ನಾನು ಕಬೈರತಕ್ಕೆ ಕೋಟಿ ಗಳು, ಕೊತ್ತಂಗು, ನಾನಾ ವಿಧವಾದ ದುರ್ಗ ಗಳು, ಅರಮನೆ ಮೊದಲಾದ ಪ್ರಾಸಾದಗಳು ಇವುಗಳೆಲ್ಲಾ ಈ ಜನಗಳಿಗೆ ಸಂದೇಶ ವನ್ನುಂಟುಮಾಡಿರುವುವು, ಕ್ರಮಕ್ರಮವಾಗಿ ಅವರ ಸ್ವಾತಂತ್ರ್ಯಕ್ಕೆ ನನ್ನಿಂದ ಬಾಧಕ ಉಂಟಾಗಬಹುದೆಂಬ ಮನೋಭಾವವು ಅವರಿಗೆ ಹುಟ್ಟಿರಬಹುದು, ಈ ಕಾಡುಜನಗಳನ್ನು ಜಯಿಸಿದ ತರುವಾಯ, ಆವರ ವಸತಿಗಳನ್ನು ನಾನು ಆಕ್ರಮಿಸ ಬಹುದೆಂದು ಇವರು ಭಾವಿಸಿರಬಹುದು. ತಟಸರಾದವರೂ ಕೂಡ ಈ ಯುದ್ಧ ದಲ್ಲಿ ನನಗೆ ಪರಾಜಯವಾಗಲೆಂದು ಕೋರುತ್ತಲಿರುವಂತೆ ತೋರುತ್ತದೆ. ಹೀಗೆ ತೋರುವುದಕ್ಕೆ ನನ್ನ ಶ್ರೇಯಸ್ಸಿನ ವಿಷಯದಲ್ಲಿ ಇವಗೆ ಹುಟ್ಟಿರುವ ಮನೋಭಾವವು ಕಾರಣವಾಗಿರಬಹುದು, ಅಥವಾ ನನ್ನಿ೦ದ ಬಾಧಕವಾಗಬಹುದೆಂಬ ಭಯವೂ ಕಾರಣವಾಗಿರಬಹುದು, ಅದು ಹೇಗಾದರೂ ಇರಲಿ, ಇರತಕ್ಕ ಸಂದರ್ಭಗಳನ್ನು ತಿಳಿಸಿರುತ್ತೇನೆ. ಮುಂದೆ ಮಾಡಬೇಕಾದ ಕೆಲಸವು ಪರ್ಯಾಲೋಚಿಸಲ್ಪಡಲಿ, ಈ ಸಂದರ್ಭದಲ್ಲಿ ಹೇಗೆ ನಡೆಯಲ್ಪಡಬೇ ಕೋ ರಾಗೆ ನಡೆ ಯಲ್ಪಡಲಿ.' ಈ ರೀತಿಯಲ್ಲಿ ಇಡುವಿಾನಿಯಸ್ಸನು ಹೇಳಲು, ಮೆಂಟರನು ಅವನಿಗೆ ಹೇಳಿದ್ದೇನಂದರೆ : - “ ನೀನು ಬಹಳ ಸಮಾವಸ್ಥೆಯಲ್ಲಿದೆ. ನಿನ್ನ ಅಧಿಕಾರವು ಅಪ್ರತಿಹತ ವಾದದ್ದೆಂದು ತೋರಿಸಿಕೊಳ್ಳಬೇಕೆ೦ಬವಾಗಿ ನೀನು ಮಾಡಿದ ಪ್ರಯ ತ್ಸವ ನಿನಗೆ ಪ್ರತಿಕೂಲವಾಗಿ ಪರಿಣಮಿಸಿರುವುದು, ದೂರದೃಷ್ಟಿ ಇಲ್ಲದೆ ಹೋದದ್ದರಿಂದ ಉ ಗಾಸೀನರೂ, ಮಿತ್ರರೂ ಕೂಡ ನಿನಗೆ ಶತ್ರುಗಳಾಗಿ ಪರಿಣಮಿಸಿರುವರು. ಇದು ಬಹಳ ಶೋಚನೀಯವಾದದ್ದು, ಒಂದಾವರ್ತಿ ತಪ್ಪನ್ನು ಮಾಡಿ, ಒಂದು ರಾಜ್ಯ ವನ್ನು ಕಳೆದುಕೊಂಡೆ ಪುನಃ ಅದೇ ವಿಧವಾದ ತಪ್ಪನ್ನು ಮಾಡಿ, ಬಹು ಶ್ರಮದಿಂದ ಸಂಪಾದಿಸಿದ ಈ ರಾಜ್ಯವನ್ನು ಕಳೆದುಕೊಳ್ಳುವ ಸ್ಥಿತಿಗೂ ಬಂದಿರುತ್ತೀಯೆ. ಇಡು. ಹಾಗಿರಲಿ, ಈ ಪ್ರಾಂತ್ಯದಲ್ಲಿ ಗ್ರೀಸ್ ದೇಶದಿಂದ ಬಂದು, ಯಾರು ಯಾರು ವಸತಿ ಗಳನ್ನು ಮಾಡಿಕೊಂಡು ಇದ್ದಾರೆ? ಅವರ ಪೂರ್ವಾಪರಗಳೇನು? ಈ ರೀತಿಯಲ್ಲಿ ವೆಂಟರನು ಕೇಳಲು, ಇತುಮಿನಿಯಸ್ಸನು ಹೇಳಿದ್ದೇನಂದರೆ:-