ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14) \ \ ವನು. ಇದಕ್ಕೆ ಸೂರ್ಯಚಂದ್ರರೇ ಮೊದಲಾದ ಗ್ರಹಗಳು ಹೇಗೋ ಹಾಗೆ ಪಂಚ ಭೂತಗಳ ಸಾಕ್ಷಿಯಾಗಿರುವುವು, ಅವಾಂಗ್ಯಾನಸಗೋಚರನಾದ ಜಗದೀಶ್ವ ರನು ಸಾಕ್ಷಿಯಾಗಿರುವನು. ಈ ಕ' ಲಿನ ನಿಧಿಗಳನ್ನು ಯಾರು ಉಲ್ಲಂಘಿಸುವರೋ ಅವು ಜ ಶ್ರರ ಶಿಕ್ಷೆಗೆ ಪಾತ್ರರಾಗುವರು. ಈ ಕೌನ ಒಡಂಬಡಿಕೆಗಳನ್ನು ಉಲ್ಲ೦ತೆ ತಕ್ಕ ವರ ಪರಮ ನೀಚತು. ದೇವತೆಗಳ ಸಿಗ್ರಹಕ್ಕೆ ಹೇಗೋ ಹಾಗೆ ಸತ್ಪುರುಷರ ನಿಗ್ರಹಕ್ಕೂ ಅವರು ಪಾತ್ರರಾಗುವರು. ಅವರ ಪಾಪಫಲವನ್ನು ಅವರು ಅನುಭವಿಸಬೇಕಾಗುವುದು, ಅವುಗೆ ಇಹಪರಗಳೆರಡ ತಪ್ಪುವುವು, ಬದು ಕಿರುವಾಗ್ಗೆ ಅವರು ತಿರಸ್ಕಾರಕ್ಕೆ ಗುರಿಯಾಗುವರು, ಸತ್ತ ಮೇಲೆ ಅವರು ಮನು ಸ್ಥರಿಂದ, ರೇವತೆಗಳಿ೦ದ ತಿರಸ್ಕರಿಸಲ್ಪಡುವರು, ಅವರಿಗೆ ಧರ್ಮವಾದ ಉತ್ತರಕ್ರಿಯೆಗಳು ಮಾಡಲ್ಪಡುವುದಿಲ್ಲ, ಅವರ ಶವಗಳು ನಾಯಿನುಗಳ ಮೊದ ಲಾದ ದುಷ್ಟ ವಗಗಳಿಗೂ, ಹದ್ದುಗಳೇ ಮೊದಲಾದ ದಷ್ಟ ಪಕ್ಷಿಗಳಿಗೂ ಆಹಾರ ವಾಗುವುವು. ಅವರ ಆತ್ಮವು ನಿರಂತರವಾಗಿ ನರಕಯಾತನೆಯನ್ನ ನುಭವಿಸುವುದು. ಯುದ್ಧವು ಪರಮ ನೀಚವಾದ ಕೆಲಸ ದುರಾತ್ಮರ ಪರಸ್ಪರ ದ್ವೇಷಕ್ಕೆ ನಿರಪರಾಧಿ ಗಳು ಬಲಿಯಾಗಬೇಕಾಗುತ್ತದೆ ವೃದ್ರರಾದ ಅನೇಕರಿಗೆ ಇದರಿಂದ ಪುತ್ರಶೋಕ ಉಂಟಾಗುವುದು. ಸಾಧೀಗಳಾದ ಅನೇಕರಿಗೆ ಪತಿವಿಯೋಗವುಂಟಾಗುವುದು, ನಿರ ಪರಾಧಿ ಗಳಾದ ಅನೇಕ ಮಕ್ಕಳು ಅನಾಥರಾಗುವರು, ಕೃಷಿ, ಕೈಗಾರಿಕೆ, ವ್ಯಾಪಾರ ಮೊದಲಾದವುಗಳು ಹೀನಸ್ಥಿತಿಗೆ ಬರುವುವು. ಭೋಗ್ಯ ವಸ್ತುಗಳನ್ನು ನಿರ್ಮಾಣ ಮಾಡತಕ್ಕವರು ರಳರಾಗುವರು. ಅವುಗಳ ಬೆಲೆಯು ಹೆಚ್ಚು ವುವು, ಬಡವರು ಜೀವನಕ್ಕಿಲ್ಲದೆ ಕಷ್ಟ ಪಡುವ ಸ್ಥಿತಿಯು ಬರುವುದು, ನಿವಾರಣೀಯವಾದ ರೋಗಗ ಳಿಗೆ ಬಹು ಜನಗಳು ಗುರಿಯಾಗುವರು, ಅಕಾಲಮರಣಕ್ಕೆ ಬಹುಜನಗಳು ಗುರಿ ಯಾಗುವರು, ಧರ್ಮಕ್ಕೆ ಲೋಪವು ಬರುವುದು, ಅಧರ್ಮವು ಪ್ರಬಲವಾಗುವುದು, ಸಜ್ಜನರು ಕಷ್ಟಕ್ಕೆ ಗುರಿಯಾಗುವರು, ದುರ್ಜನರು ಹೆಚ್ಚು ವರು. ಅನೇಕ ಮುಖ ವಾದ ಅನರ್ಥಗಳಿಗೆ ಯುದ್ಧವು ಕಾರಣವಾಗುವುದು. ಇ೦ಧಾ ಅನರ್ಘ ಗಳನ್ನು ತಪ್ಪಿಸಬೇಕೆಂದು ನಾವು ಧರ್ಮವಾದ ಕೆಲಸವನ್ನು ಏರ್ಪಡಿಸಿರುತ್ತೇವೆ. ಈ ಕೌಲಿ ನಂತೆ ನಡೆದರೆ ದೇವರೂ, ಸಜ್ಜನರೂ ಸುಪ್ರೀತರಾಗುತ್ತಾರೆ. ಸರ್ವರೂ ಕೋಪ ತಾಪ ಗಳನ್ನು ಬಿಟ್ಟು ಶಾಂತಚಿತ್ತರಾಗಿ ಈ ಕೌಲನ ವಿಧಿಗಳಿಗೆ ಒಪ್ಪಿಕೊಂಡು, ಎಲ್ಲರೂ ಸರ ಟಿ t. 11)