ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

152 ಪರ್ಯಾಲೋಚಿಸಿಕೊಂಡು ಮನಸ್ತಾಪಗಳನ್ನು ಪರಿಹರಿಸಿಕೊಳ್ಳುವ ಶಕ್ತಿಯನ್ನು ದೇವರು ನಿಮಗೆ ಕೊಡಲೆಂದು ನಾನು ಪ್ರಾರ್ಥಿಸುತ್ತೇನೆ. ಪ್ರಯಾಣ ಮಾಡುವು ದಕ್ಕೆ ನನಿಗೆ ಅಪ್ಪಣೆಯನ್ನು ಕೊಡಿ'. ಈ ರೀತಿಯಲ್ಲಿ ಮೆಂಟರನು ಹೇಳಲು, ಅವನ ಹಿತೋಪದೇಶಕ್ಕಾಗಿ ಎಲ್ಲರೂ ಏಕವಾಕ್ಯತೆಯಿಂದ ಅವನನ್ನು ವಂದಿಸಿದರು, ಆಗ ನೆಸ್ಟರು ಹೇಳಿದ್ದೆ ನ ದರೆ.. ಎಲೈ ಮೆಂಟು, ನಿನ್ನ ಉಪದೇಶದಂತೆ ನಡೆಯುವುದಕ್ಕೆ ನಾವು ಸಿದ್ಧರಾಗಿರುತ್ತೇವೆ. ನಾವು ಸ್ವಾರ್ಥವರರಲ್ಲ, ದೇಶಕೋಶಗಳನ್ನು ಸಂಪಾದಿಸಬೇಕೆಂದು ನಾವು ಯುದ್ಧಕ್ಕೆ ಬರಲಿಲ್ಲ. ಆತ್ಮರಕ್ಷಣೆಗೋಸ್ಕರ ಈ ಯುದ್ಧವನ್ನು ಉಪಕ್ರಮಿಸಿ ದೆವು. ನೀನು ಹೇಳಿದಂತೆ ಇಡುವಾ ಸಿಯಸ್ಸನ ಮನೋಭಾವವು ನಮಗೆ ಗೊತ್ತಾ ಗಲ್ಲ, ನಮ್ಮ ಮನೊ'ಭಾವವು ಅವನಿಗೆ ಗೊತ್ತಾಗಲ್ಲು, ಈ ಯುದ್ಧ ಉಪಕ್ರಮಕ್ಕೆ ಇದೆ ಮುಖ್ಯ ಕಾರಣ, ಕಂಡವರ ಮಾತುಗಳನ್ನು ಕೇಳದೆ ನಾವು ಒಬ್ಬರೊಡನೆ ಒಬ್ಬರು ಕಲಿತು ಮಾತನಾಡಿಕೊಂಡು ಇದ್ದರೆ ಮನಸ್ಸಾ ಸಕ್ಕೆ ಅವಕಾಶವಾಗುತ್ತಿರ, ಇಂಥಾ ಮನಸ್ತಾಪವು ಮುಂದೆ ಬರದಂತೆ ಮಾಡಿಕೊಳ್ಳುವುದರಲ್ಲಿ ನೀನು ಮಾಡಿರುವ ಹಿತೋಪದೇಶವು ನಮಗೆ ತುಂಬಾ ಸಾಧಕವಾಗು ವುದು, ಸತ್ಯವಂತರಲ್ಲಿ ಉಂಟಾಗತಕ್ಕ .ಮನಸ್ತಾಪಗಳು ಒಬ್ಬರಲ್ಲಿ ಒಬ್ಬರು ಕಲೆತು ಮಾತನಾಡಿದ ಕೂಡಲೇ ವ್ಯವಸ್ಥೆಯಾಗುವುದು, ಅಸತ್ಯವಂತ ರಲ್ಲಿ ಹೀಗೆ ಆಗುವುದಿಲ್ಲ. ಈಗ ನನಗೂ, ಡಾನಿರ್ಯ ಪ್ರಭುವಾದ ಅಡಾ. ಸ್ಟಸ್ನಿಗೂ ಮನಸ್ತಾಪವು ಒಟಾಗಿರುವುದು, ಇವನು ನಾಸ್ತಿಕಶಿಖಾಮಣಿಯಾ ಗಿರುವನು. ಇನಸಿಗೆ ದೇವರಲ್ಲಿ ನಂಬಿಕೆ ಇಲ್ಲ, ಪರಲೋಕದಲ್ಲಿ ನಂಬಿಕೆ ಇಲ್ಲ. ಧರ್ಮದ ನ, ಏಕೆ ಇಲ್ಲ, ಲೋಕವೆಲ್ಲಾ ತನ್ನ ಸೇವೆ ಮಾಡಬೇಕೆಂಬದಾಗಿಯೂ, ತನ್ನ ಸೇವೆಯನ್ನು ಹೊಂದುವುದೇ ಅವರ ಕರ್ತವ್ಯವೆಂಬದಾಗಿಯೂ ಇವನು ತಿಳಿದು ಕೊಂಡು ಇರುವನು, ತನ್ನ ನು ಪಟ್ಟಿಗೆ ತನ್ನ ಪ್ರಜೆಗಳೇ ಕಾರಣವೆಂದು ಇವನು ತಿಳಿದುಕೊಂಡು ಇರುವುದಿಲ್ಲ, ಅವರು ಕಂದಾಯವನ್ನು ಕೋಟು, ರಕ್ಷಿಸದಿದ್ದರೆ ತನ್ನ ಗತಿಯೇನು ಎಂಬದಾಗಿ ಅವನು ಯೋಚಿಸುವುದಿಲ್ಲ ಳೆಲ್ಲ ರೂ ಪುತ್ರನಿವಿ-ಶೇಷವಾಗಿ ರಕ್ಷಿಸಲ್ಪಡುವುದು ತನ್ನ ಕರ್ತವ್ಯವೆಂದು