ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

151 •A # 1 # * # + = 54

- ಆ++ * * * * * * - * * * * * * * * * * * * » ಸೌಹಾರ್ದದಿಂದಲೂ, ಪ್ರೀತಿಯಿಂದ ಬದುಕಬೇಕೆಂಬುವುದೆ? ಅವನ ಉದ್ದೇಶ ಈ ಉದ್ದೇಶಕ್ಕೆ ವಿರೋಧವಾಗಿ ನಾವು ನಡೆದರೆ ನಾವು ಕೃತಘ್ನ ರಾಗುವೆವು, ಅದು! ದೊಡ್ಡ ಪಾಸ, ಆ ಪಾಸಕ್ಕೆ ತಕ್ಕ ಶಿಕ್ಷೆಯು ತಪ್ಪುವುದಿಲ್ಲ. ಈ ಪಾಪಕ್ಕೆಲ್ಲಾ ಮುಖ್ಯಕಾರಣವು ಸ್ವಾರ್ಥಪರತೆಯಾಗಿರುವುದು, ಯಾರಿಗೂ ಬಾಧಕವಾಗದಂತೆ ನಾವು ಸ್ವಾರ್ಥಪರರಾಗಬಹುದು, ಎಲ್ಲರಿಗೂ ಉಪಕಾರವಾಗುವಂತೆ ಕೆಲಸ ಮಾಡಿ, ಅದರಿಂದ ಉಂಟಾಗುವ ಫಲದಲ್ಲಿ ನಾವು ಭಾಗಿಗಳಾಗಬಹುದು. ಹೀಗೆ ಮಾಡುವುದರಿಂದ ದೇವರು ನಮ್ಮ ಪ್ರಯತ್ನವನ್ನು ಮೆಚ್ಚು ವನು. ಮನುಷ್ಯನು ನಮ್ಮ ಪ್ರಯತ್ನವನ್ನು ಮೆಚ್ಚುವನು. ನಮ್ಮ ಮನಸ್ಸಾಕ್ಷಿಯು ನಮ್ಮ ಪ್ರಯ ವನ್ನು ಮೆಚ್ಚುವುದು, ಸರ್ವಸಮ್ಮತವಾಗಿ ನಮಗೆ ಬರತಕ್ಕ ಲಾಭಕ್ಕೆ ಯಾನ ಭಯವೂ ಇರುವುದಿಲ್ಲ. ಸರ್ವರ ಅಸಮ್ಮತಿಯಿಂದ ಬರತಕ್ಕ ಲಾಭಕ್ಕೆ ಭಯ ವುಂಟು, ಈ ವಿಷಯವನ್ನು ಪ್ರಭುಗಳೂ ಮಂತ್ರಿಗಳೂ ಜವಾಬ್ದಾರಿಯುಳ್ಳ ಅಧಿ ಕಾರಿಗಳೂ ಚೆನ್ನಾಗಿ ಪರಾಲೋಚಿಸಬೇಕು, ಧರ್ಮವನ್ನು ಬಿಟ್ಟು ನಡೆಯಬಾ ರದು. ಪ್ರಭುಗಳಿಗೆ ಸತ್ಯವೇ ವಜ್ರ ಕವಚವು, ಸಹನವೂ, ಭೂತದಯೆಯ ವಜ್ರಾ ಯುಧಗಳು, ಮೃವಾಸ್ತುತಿಯೆ ವಿಷ, ಸ್ತುತಿಪಾತಕರ ಮಾತಿಗೆ ಬೆರಗಾಗುವು ದರಿಂದ ಅಧಿಕಾರಿಗಳು ಕೆಟ್ಟು ಹೋಗುವರು. ಕೋಪತಾಪಗಳು ಅನರ್ಥಕ್ಕೆ ಹೇತು ವಾದವುಗಳು. ಅರ್ಥಹಾನಿ, ಪ್ರಾಣಹಾನಿಗಳಿಗೆ ಇವು ಮುಖ್ಯ ಕಾರಣ, ದುರಾ ತ್ಮರಾದ ಪುವಾರದೇವತೆಗಳ ಮಾತುಗಳನ್ನು ಕೇಳಿ ಯುದ್ಧಕ್ಕೆ ಉಪಕ್ರಮ ಮಾಡಬಾರದು. ಜನಗಳ ಪ್ರಾಣವನ್ನು ತೆಗೆಯುವುದು ಸುಲಭ, ಅವರನ್ನು ಬದುಕಿಸುವುದು ಕಷ್ಟ, ಕೋಪದಿಂದ ಉಂಟಾದ ಅನೇಕ ಅನರ್ಥಗಳನ್ನು ಶಾಂತಿ ಯಿಂದ ತಿದ್ದುವುದು ಅಸಾಧ್ಯ, ಈ ವಿಷಯವನ್ನು ನೀವೆಲ್ಲರೂ ಪರ್ಯಾಲೋ ಹಿಸಬೇಕು. ಸರಿಣಾಮಫಲವನ್ನು ಪರ್ಯಾಲೋಚಿಸದೆ ಕೆಲಸ ಮಾಡಬಾರದು. ಇಡುವಿಾನಿಯಸ್ಥನು ಈ ಭಾಗದಲ್ಲಿ ಸ್ವಲ್ಪ ಅಜಾಗರೂಕನಾದದ್ದರಿಂದ ಅನೇಕ ಅನ ರ್ಥಗಳು ಸಂಭವಿಸುವ ಸ್ಥಿತಿಯು ಬಂದಿತ್ತು. ದೇವರ ಅನುಗ್ರಹದಿಂದಲೂ, ನಿಮ್ಮ ಸಾಧುಸ್ವಭಾವದಿಂದಲೂ ಇದು ತಪ್ಪಿತು. ಇದಕ್ಕಾಗಿ ನಾನು ತುಂಬಾ ಸಂತೋ ಪಿಸುತ್ತೇನೆ. ನಿಮ್ಮ ಗಳಿಗೆಲ್ಲರಿಗೂ ಮಂಗಳವಾಗಲೆಂದು ನಾನು ಕೋರುತ್ತೇನೆ. ಮುಂದೆ ಏನು ಮನಸ್ತಾಪಗಳು ಒಂದಾಗ್ಯೂ ಜವಾಬ್ದಾರರಾದ ನೀವೆಲ್ಲರೂ ಸೇರಿ