ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೮೮ 1, .. \\, " , ಭೂ ತನು ತಪ್ಪಾಯಿತೆಂದು ತಿಳಿದ ಮೇಲೂ ಕೂಡ ಅದನ್ನು ತಿದ್ದು ಕ್ಕೊಳು ದಕ್ಕೆ ನಾನು ಪ್ರಯತ್ನ ಮಾಡಲಿಲ್ಲ, ನಂಬಿಕೆಗೆ ಪಾತ್ರನಲ್ಲ ವೆಂದು ಇವರೆಲ್ಲ ಬಾಧಿಸುವುದಕ್ಕೆ ನಾನೆ: ಅವಕಾಶವನ್ನು ಕೊಟ್ಟೆನು, ಈ ಕರ್ಮಕ್ಕೆ ಅನುರೂ ವಾದ ಶಿಕ್ಷೆಗೆ ನಾನು ಪಾತ್ರನಾಗಿದ್ದೆನು, ನನ್ನ ಹಿರಿಯರು ಮಾಡಿದ ಪುಣ್ಯವು ನನ್ನ ನಿರಪರಾಧಿತ್ವವೂ ನನ್ನನ್ನು ರಕ್ಷಿಸಿರಬಹುದೆಂದು ನನಗೆ ತೋರುತ್ತದೆ. ಅದು! ಹೇಗದರೂ ಇರಲಿ, ದೈವಯೋಗದಿಂದ ನೀವಿಬ್ಬರೂ ಅಪ್ರಾರ್ಥಿತರಾಗಿ ಬಂದು! ನಮ್ಮ ಪರಸ್ಪರ ದ್ವೇಷದಿಂದ ಆಗತಕ್ಕ ಅನರ್ಥವನ್ನು ತಪ್ಪಿಸಿ ಇರುತ್ತೀರಿ. ನನ್ನ ರನೆ ಮೊದಲಾದವರ ಜೊತೆಯಲ್ಲಿ ನಾನು ನಿಮಗೆ ಬಹಳ ಕೃತಜ್ಞನಾಗಿ ಇರುತ್ತೇನೆ. ನನ್ನ ಸೈನ್ಯ, ನನ್ನ ಸಂಪತ್ತು ಸರ್ವವನ್ನೂ ನಿನಗೆ ಒಪ್ಪಿಸಿ ಇರುತ್ತೇನೆ. ನಾನು ನಿಮ್ಮ ಸೇವಕನಾಗಿ ಬರುತ್ತೇನೆ, ಒಂದು ವೇಳೆ ಯಲಿನಸ್ಸನು ಬರದೆ ಇದ್ದಾಗ್ಯೂ ಸೆನಿಲೋ ಪಳ ಮಾನಭಂಗಕ್ಕೋಸ್ಕರ ಇಥಾಕಾ ದ್ವೀಪವನ್ನು ಆವರಿಸಿಕೊಂಡು ಇರತಕ್ಕೆ ಪ್ರಭುಗಳು ಎಷ್ಟು ಬಲವಾಗಿ ಇದ್ದಾಗ್ಯೂ, ಅವರನ್ನು ನಿಗ್ರಹಿಸುವುದಕ್ಕೆ ನಾನು ಖುದ್ದಾಗಿ ಬರುತ್ತೇನೆ. ಸತ್ಯವೂ ಧರ್ಮವೂ ನಮ್ಮ ಪಕ್ಷವಾಗಿರುವುದು. ಸದರಿ ಪ್ರಭುಗಳು ದುರಾತ್ಮರಾಗಿಯೂ, ಅಸತ್ಯವಂತರಾಗಿಯ, ಪಾಪಿಗಳಾಗಿಯೂ ಇರುವರು. ಅವರ ಪಾಪವು ಅವರನ್ನು ಕೊಲ್ಲುವುದು, ನಮ್ಮ ಪುಣ್ಯವು ನಮ್ಮನ್ನು ರಕ್ಷಿಸುವುದು, ಇಥಾಕಾ ಪಟ್ಟಣಕ್ಕೆ ಹೊರಡುವುದಕ್ಕೆ ಸಿದ್ಧರಾಗಿ, ನಿಮ್ಮ ಜೊತೆಯಲ್ಲಿ ನಮ್ಮ ಸೈನ್ಯಗಳೆಲ್ಲಾ ಹೊರಡುವವು.” ಈರೀತಿಯಲ್ಲಿ ಇಡುಮಾ ನಿಯಸ್ಸನು ಹೇಳಿದ ಕೂಡಲೆ ಇವರೆಲ್ಲರನ್ನೂ ಕುರಿತು ಮೆಂಟರು ಅಪ್ಪಣೆ ಕೊಡಿ ಸಿದ್ದೆ ನಂದರೆ--ಎಲೈ, ಪ್ರಭುಗಳೇ, ಎಲೈ ಮುಖಂಡರಾದ ಅಧಿಕಾರಿಗಳೇ, ಎಲೆ ಮಹಾಜನಗಳೆ: ನೀವು ಅನೇಕ ಜನಾಂಗಗಳಿಗೆ ಸೇರಿರುತ್ತಿರಿ, ಅನೇಕ ಸೇನಾನಾ ಯಕರ ಅಧಿನದಲ್ಲಿ ಇರುತ್ತಿರಿ. ಆದಾಗ್ಯೂ ದೈವಯೋಗದಿಂದ ನೀವೆಲ್ಲ ರೂ ಒಗ್ಗಟ್ಟಾಗಿ ನಡೆದುಕೊಳ್ಳುವ ಸಂಭವವು ಬಂದಿರುವುದು, ಇದಕ್ಕಾಗಿ ನಾನು ಸಂತೋಷಿಸುತ್ತೇನೆ. . ಸಕಲ ಸೃಷ್ಟಿಸ್ಥಿತಿಪ್ರಳಯಗಳಿಗೂ ಕಾರಣಭೂತನಾದ ಜಗದೀಶ್ವರನು ಈ ಪ್ರಪಂಚದಲ್ಲಿ ಇರತಕ್ಕೆ ಸಕಲ ಪ್ರಾಣಿವರ್ಗಕ್ಕೆ ಯಜಮಾನನಾ ಗಿರುವನು. ನಾವು ಎಲ್ಲ ರೂ ಅವನ ಕುಟುಂಬಕ್ಕೆ ಸೇರಿದವರು. ಅವನು ತಂದೆ. ನಾವು ಮಕ್ಕಳು, ನಾನೆಲ್ಲ ರೂ ಸಹೋದರರು, - ನಾವು ಪರಸ್ಪರ