ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:23

    • * * * * * * *
  • \ \

ಈ ಮೆಂಟರು ಮನುಷ್ಯನೇ ಅಧವಾ ದೇವರೇ ಎಂದು ಕೇಳಲು, ಅವನು ಮನುಷ್ಯ ನೆಂಬದಾಗಿಯ, ತನ್ನ ಗುರುವೆಂಬದಾಗಿಯೂ ಟೆಲಿಮಾಕಸ್ಸನು ಹೇಳಿದನು. ಅವನ ಮಾತಿನಲ್ಲಿ ಅವಳಿಗೆ ಪ್ರತ್ಯಯವು ಹುಟ್ಟಲಿಲ್ಲ. ಮೆಂಟರನು ಮನುಷ್ಯನಂತೆ ಅವತರಿ ಸಿರುವ ದೇವರೆಂಬ ಜ್ಞಾನವು ಅವಳಿಗೆ ಹುಟ್ಟಿತು, ಹಾಗಿಲ್ಲದಿದ್ದ ಪಕ್ಷದಲ್ಲಿ, ಇಂಥಾ ಭಯಂಕರವಾದ ವಿಪತ್ತಿನಲ್ಲಿ ದೇವತೆಗಳಿಗೆ ಸಹಜವಾದ ಧೈರಸ್ಟ್ರ ಗಳು ಇವನಿಗೆ ಉಂಟಾಗುವುದಕ್ಕೆ ಕಾರಣವಿಲ್ಲವೆಂದು ತಿಳಿದುಕೊಂಡಳು. ಈ ಮಧ್ಯೆ ದೇವತಾ ಸ್ತ್ರೀಯರು ಮೆಂಟರನನ್ನು ಆವರಿಸಿಕೊಂಡು, ಅನೇಕ ಪ್ರಶ್ನೆಗಳನ್ನು ಹಾಕಿ ದರು. ಇಥಿಯೋಪಿಯಾದಿಂದ ಪ್ರಯಾಣ ಮಾಡಿದಾಗ, ಉಂಟಾದ ತಪಶೀಲುಗ ಳನ್ನು ಒಬ್ಬಳು ಕೇಳಿದಳು. ಡೆಮಾಸ್ಕಸ್ ಪಟ್ಟಣದ ವೃತ್ತಾಂತವನ್ನು ಮತ್ತೊ ಬ್ಬಳು ಕೇಳಿದಳು. ಟ್ರಾಯ್ ದೇಶಕ್ಕೆ ಮುತ್ತಿಗೆ ಹಾಕಲ್ಪಡುವುದಕ್ಕೆ ಮುಂಚೆ, ನಿನಗೂ, ಯಲಿಸ ಸ್ಥಿಗೂ ಪರಿಚಯವಿತ್ತೇ ? ಎಂದು ಮತ್ತೊಬ್ಬಳು ಕೇಳಿದಳು. ಈ ಪ್ರಶ್ನೆಗಳಿಗೆಲ್ಲಾ ಕೇವಲ ಆದರದಿಂದ ಮೆಂಟರನು ಉತ್ತರವನ್ನು ಕೊಟ್ಟನು. ಅವನ ಮಾತುಗಳನ್ನು ಕೇಳಿ, ' ಇದು ಸಾಮಾನ್ಯ ಮನುಷ್ಯರ ಮಾತುಗಳಲ್ಲ. ಅವತಾರ ಪುರು ಷರ ಮಾತುಗಳಾಗಿರಹುದು ಎಂದು ಅನೇಕರಿಗೆ ತೋರಿತು. ಅಷ್ಟರಲ್ಲಿಯೇ ಕೆಲಿಪ್ರೊ ಎಂಬ ಕಿನ್ನರಿಯು ಅವನ ಬಳಿಗೆ ಬಂದು, ನಾನಾ ವಿಧವಾದ ಪುಷ್ಪಗಳನ್ನು ಅವನಿಗೆ ಒಪ್ಪಿಸಿ, ಲೋಕಾಭಿರಾಮವಾಗಿ ಅನೇಕ ಪ್ರಶ್ನೆಗಳನ್ನು ಹಾಕಿದಳು, ಈ ಪ್ರಶ್ನೆಗೆ ಇನ್ನ ಕೇಳುವುದರಲ್ಲಿ, ಅವಳು ತೋರಿಸಿ ದ ಮನೋಹರತೆಯು ಸಾಮಾನ್ಯ ಒನಗಳನ್ನು ಮರಳು ಮಾಡುವುದಕ್ಕೆ ಸಾಧಕವಾಗಿತ್ತು. ಮೆಂಟರನು ಜಿತೇಂದ್ರಿಯನು, ಇವಳ ಮರಳು ಮಾತುಗಳಿಗೆ ಅವನು ವಶನಾಗುವ ಸಂಭವವು ತೋರಲಿಲ್ಲ, ಇವಳ ಮಂಕು ಬೂದಿಯು ಅವನನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಶಕ್ತಿಯುಳ್ಳದ್ದಾಗಲಿಲ್ಲ. ಅವಳಲ್ಲಿ ಮಾತೃಭಾವವನ್ನೂ, ಸಹೋದ ಭಾವವನ್ನೂ ಇಟ್ಟು, ಮೆಂಟರನು ಮಾತ ನಾಡುತ್ತಾ ಬಂದನು, ಪಾತಾಳಕ್ಕೂ, ಆಕಾಶಕ್ಕೂ ಹೋಗಿರತಕ್ಕೆ ಭಂಡೆಯು ಪ್ರಚಂಡವಾದ ಪ್ರಳಯಕಾಲದ ಗಾಳಿಗೂ ಕೂಡ ಹೇಗೆ ಚಲಿಸುವುದಿಲ್ಲವೋ ಹಾಗೆ ಇವಳ ವ.ರಳು ಮಾತುಗಳಿಗೆ ಮೆಂಟರನು ನಿಶ್ಚಲನಾಗಿದ್ದನು. ಇವಳು ಆಡತಕ್ಕ ಮಾತುಗಳನ್ನೆಲ್ಲಾ ಉಪೇಕ್ಷೆಯಿಂದ ಇವನು ಕೇಳಿದನು. ತನ್ನ ಪ್ರಶ್ನೆಗಳಿಂದಲೂ