ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಪಾಟೀಸವಾಲುಗಳಿಂದಲೂ ವೆ೦ಟರನ ಅಂತರ್ಗತವನ್ನು ತಿಳಿದು ಕೊಳ್ಳುವುದು ಸಾಧ್ಯವೆಂದು ಇವಳು ತಿಳಿದುಕೊಂಡಿದ್ದಳು. ಶೀಘ್ರದಲ್ಲಿಯೇ ಭಗ್ನ ಮನೋರಥ ಳಾಗಲು, ಮೆಂಟರನ ಉತ್ತರಗಳಿ೦ದ ಇವಳ ಸಂದೇಹವು ಬಹಳವಾಗಿ ಹೆಚ್ಚಿತು. ಟೆಲಿಮಾಕಸ್ಸನನ್ನು ತನ್ನ ಮ೦ಕುಬೂದಿಗೆ ಅಧೀನನಾಗುವಂತೆ ಮಾಡಿಕೊಳ್ಳುವುದು ಸುಲಭವೆಂಬದಾಗಿಯ, ಅವನ ಚರಗಳನ್ನು ನೋಡಿದರೆ, ಅಮಾನುಷವಾದ ಶಕ್ತಿಯು ಅವನಲ್ಲಿ ಇರುವುದೆಂದಾಗಿಯ ಅವಳಿಗೆ ತೋರಿತು, ಆದಾಗ್ಯೂ ಮೋಹಪರವಶಳಾದಳ , ಮೆಂಟರನನ್ನು ನಿಗ್ರಹಿಸಿ, ಟೆಲಿಮಾಕಸ್ಸನನ್ನು ವಶಪಡಿಸಿ ಕೊಳ್ಳುವುದು ಸುಲಭವೆಂದು ತಿಳಿದು ಕೊಂಡಳು, ಟೆಲಿಮಾಕಸ್ಸಿಗೂ, ಮೆಂಟರಿಗೂ ಪರಸ್ಪರ ದ್ವೇಷವನ್ನು ಹುಟ್ಟಿಸುವುದು ಸುಲಭವೆಂಬದಾಗಿಯ, ಪುಷ್ಪಬಾಣಗಳಿಂದ ಪರಾಜಿತರಾಗದೆ ಇರತಕ್ಕೆ ಜನರು ಪ್ರಪಂಚದಲ್ಲಿ ಇರುವುದೇ ಇಲ್ಲವೆಂಬದಾ ಗಿಯ, ಮೋಹಪರವಶರಾದ ಸ್ತ್ರೀ ಪುರುಷರು ಲಜ್ಜೆಯನ್ನೂ ಕೂಡ ಬಿಟ್ಟು, ತಂದೆ ತಾಯಿಗಳನ್ನೂ, ಗುರುಹಿರಿಯರನ್ನೂ , ದೇವರನ್ನೂ ತಿರಸ್ಕರಿಸುವರೆಂಬದಾಗಿಯ, ಪ್ರಪಂಚ ಧರ್ಮವು ಹೀಗಿರುವುದರಿಂದ, ಮೋಹೋದ್ದೀಪನವನ್ನು ಮಾಡತಕ್ಕ ತನ್ನ ಮಧುರೋಕ್ತಿಗಳಿ೦ದಲೂ, ಉಪಚಾರಾತಿಶಯಗಳಿಂದಲೂ ಟೆಲಿಮಾಕಸ್ಸನನ್ನು ಸ್ವಾ ಧೀನ ಪಡಿಸಿಕೊಂಡು, ಪ್ರತಿಭಟಿಸಿದರೆ, ಮೆಂಟರನನ್ನು ಟೆಲಿಮಾಕಸ್ಸನು ಸಂಹರಿಸು ವಂತೆ ಮಾಡುವುದೂ ಕೂಡ ಅಸಾಧ್ಯವಲ್ಲವೆಂದು ಕೆಲಿಸ್ಸಳು ಭಾವಿಸಿಕೊಂಡಳು. ಮೆಂಟರನಿಗೆ ಅಮಾನುಷ ಶಕ್ತಿ ಇರುವುದೆಂದು ತಿಳಿದಿದ್ದಾಗ್ಯೂ, ಮೋಹದ ಮಹಿಮೆ ಯಿಂದ ಇವಳಿಗೆ ಈ ವಿಷಯವ ತೋರಲಿಲ್ಲ. ಅಸಾಧ್ಯವನ್ನು ಸಾಧ್ಯವೆಂದು ತಿಳಿ ದುಕೊಂಡಳು. ಸತ್ಪುರುಷರನ್ನು ಜಗದಿ: ಶ್ವರನು ಕಾಪಾಡುವನು. ಅವನ ಮಹಿ ಮೆಯಿಂದ ಮೆಂಟರನಿಗೆ ದಿವ್ಯ ದೃಷ್ಟಿಯು ಉಂಟಾಯಿತು. ಇವಳ ಇಂದ್ರಜಾಲ, ಮಹೇಂದ್ರಜಾಲ ವಿದ್ಯೆಗಳು ಅವನಿಗೆ ಸ್ಪಷ್ಟವಾಗಿ ತಿಳಿಯಿತು. ಅವನು ಟೆಲಿಮಾ ಕಸ್ಸನನ್ನು ಕುರಿತು ಹೇಳಿದ್ದೇನಂದರೆ:- “ ನೀನು ಬಹಳ ಜಾಗರೂಕನಾಗಿರಬೇಕು, ನಾವು ಅತ್ಯ೦ತ ವಿಷಮಾವಸ್ಥೆ ಯಲ್ಲಿರುತ್ತೇವೆ. ಈ ಕಿನ್ನರಿಯರು ಮನುಷ್ಯ ರೂಪವನ್ನು ವಹಿಸಿರುವ ಪಿಶಾಚಿ ಯರು, ಇವರ ಮನೋಹರವಾದ ವಾಕ್ಕುಗಳು ಭಯಂಕರವಾದ ವಿಷಕ್ಕೆ ಸಮಾನ ವಾದವುಗಳು, ಸಾಮಾನ್ಯವಾದ ವಿಷದಿಂದ ದೇಶಕ್ಕೆ ಹಾನಿಯುಂಟು, ಈ ಕಿನ್ನ