ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 AA Ar• \ 12 ರಿಯರ ವಿಷದಿಂದ ದೇಹದ ಜೊತೆಗೆ ಸಂಚಿತವಾದ ಪುಣ್ಯವು ಭಸ್ಮವಾಗುವುದು. ಅಷಯ.ಶಸ್ಸು ಬರುವುದು, ಜಾಗರೂಕನಾಗಿರು, ನಿನ್ನ ಮಾತಾಪಿತೃಗಳ ವಿಷಯ ದಲ್ಲಿ ನಿನಗಿರತಕ್ಕೆ ಕರ್ತವ್ಯವನ್ನು ಸ್ಮರಿಸಿಕೊ ಮೋಹದ ಪಾಶಕ್ಕೆ ಬಿಳಬೇಡ. ಇಂದ್ರಿಯ ಗ್ರಾಮಗಳಿಗೆ ಅಧೀನನಾಗಬೇಡ, ಲೋಕೈಕವೀರರಾದ ಅನೇಕ ಪ್ರಭು ಗಳು ವಿಷ ಕನ್ನಿಕೆಯರ ಪಾಶಕ್ಕೆ ಬಿದ್ದು ನಾಶವಾಗಿರುವರು. ಜಿತೇಂದ್ರಿಯನಾಗಿ ಜಗದೀಶ್ವರನ ಪ್ರಸನ್ನ ತೆಗೆ ಪಾತ್ರನಾಗು. ಈ ರೀತಿಯಲ್ಲಿ ಮೆಂಟರನು ಉಪ ದೇಶ ಮಾಡಿದನು. ಅದಕ್ಕೆ ಟಿಲಿಮಾಕಸ್ಸನು ಹೇಳಿದ್ದೇನಂದರೆ:- “ ಎಲೈ ಪಿತೃನಿರ್ವಿಶೇಷನಾದ ಮೆಂಟರನೇ-ನಿನ್ನ ಹಿತೋಪದೇಶವನ್ನು ಶಿರಸಾ ವಹಿಸುವೆನು, ನನ್ನ ತಂದೆತಾಯಿಗಳಿಗೂ, ನಿನಗೂ ಅಪಯಶಸ್ಸು ಬರುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ, ಹೊನ್ನು, ಹೆಣ್ಣು, ಮಣ್ಣುಗಳಿಗೆ ಆಶೆಪಟ್ಟು, ಅನೇಕ ಚಕ್ರವರ್ತಿಗಳು ಹೇಗೆ ನಾಶವಾದರೋ ಅದನ್ನು ನಿನ್ನ ಮುಖ ದಿಂದಲೇ ನಾನು ಕೇಳಿರುವೆನು, ಈ ಆಶಾಪಾಶದಿಂದ ಬದ್ದರಾಗಿ, ಹೇಗೆ ಚಕ್ರ ವರ್ತಿಗಳ ಮೊದಲ್ಗೊಂಡು ಝಾಡಮಾಲಿಗಳ ವರೆಗೂ ಜನಗಳು ಭಯಂಕರವಾದ ಪತನಕ್ಕೆ ಗುರಿಯಾಗುತ್ತಲಿರುವರೋ ಅದು ಪ್ರತಿ ನಿಮಿಷದಲ್ಲಿಯೂ ನನ್ನ ದೃಷ್ಟಿಗೆ ಬಿಳುತ್ತಲಿದೆ. ರಾತ್ರಿ ನೋಡಿದ ಭಾವಿಯಲ್ಲಿ ನಾನು ಹಗಲು ಬಿಳುತ್ತೇನೆಂದು ತಿಳಿದು ಕೊಳ್ಳಬೇಡ. ಈ ಕಿನ್ನರಿಯರ ವಶೀಕರಣೋಪಾಯಗಳಿಗೆ ಪ್ರತಿಭಟಿಸುವುದು ಕಷ್ಟ ವಾಗಿರಬಹುದು. ಆದರೆ, ಪರಿಣಾಮ ಫಲವನ್ನು ಪರಿಶೀಲಿಸಿ, ತಿಳಿದುಕೊಳ್ಳುವ ಶಕ್ತಿಯು ನಿನ್ನ ಅನುಗ್ರಹದಿಂದ ನನಗೆ ಸ್ವಲ್ಪ ಮಟ್ಟಿಗೆ ಉಂಟಾಗಿರುವುದು, ದೇವರ ದಯೆಯಿಂದಲೂ, ನಿನ್ನ ಅನುಗ್ರಹದಿಂದಲೂ ಇವರ ಪಾಶಕ್ಕೆ ಬಿಳದೇ ಇರುವ ಶಕ್ತಿ ಯನ್ನು ನಾನು ಸಂಪಾದಿಸಿಕೊಳ್ಳುತ್ತೇನೆ. ಈ ವಿಷಯದಲ್ಲಿ ವಿಚಾರಪರನಾಗಬೇಡ. ” ಈ ರೀತಿಯಲ್ಲಿ ಟೆಲಿಮಾಕಸ್ಸನು ಹೇಳಿದ್ದನ್ನು ಕೆಲಿವೋ ಹೊಂಚು ಕೇಳಿ ದಳು. ಸರ್ವ ಪ್ರಯತ್ನದಿಂದಲೂ ಇವನನ್ನು ನಿಗ್ರಹಿಸಬೇಕೆಂದು ನಿಷ್ಕರ್ಷೆ ಮಾಡಿ ಕೊಂಡಳು. ಮನ್ಮಥನನ್ನು ಕುರಿತು ತಪಸ್ಸು ಮಾಡಿದಳು. ಅವನು ಪ್ರಸನ್ನನಾಗಿ ಇಷ್ಟಾರ್ಥವನ್ನು ಕೇಳಿಕೊಳ್ಳಬಹುದೆಂದು ಹೇಳಿದನು. ಆಗ ಕೆಲಿಸ್ಟಳು ಹೇಳಿ ದೈನಂದರೆ;