ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 \ * * Av

  • ಟ್ರಾಯ್ ದೇಶವು ನಾಶವಾಗುವುದಕ್ಕೆ ಕಾರಣಭೂ ತನದ ಯಲಿಸ ಸೃನು ನನಗೆ ವಂಚಿಸಿ ಹೊರಟು ಹೋದನ , ನಾನು ಪ್ರಯೋಗಿಸಿದ ಪುಷ್ಪಬಾಣ ಗಳೆಲ್ಲಾ ವಿಫಲವಾದವು. ಆತನು ನನ್ನ ಪಾಶಕ್ಕೆ ಬೀಳಲಿಲ್ಲ. ದೈವಯೋಗದಿಂದ ಅವನ ಮಗನಾದ ಟೆಲಿಮಾಕಸ್ಸನು ಇಲ್ಲಿಗೆ ಬಂದಿರುವನು, ತಂದೆಗಿಂತಲೂ ಅತಿಶಯ ವಾದ ರೂಪಲಾವಣ್ಯಗಳು ಇವನಲ್ಲಿ ಇರುವುವು. ಬುದ್ದಿಯಲ್ಲಿಯ, ವಿವೇಕದ ಲ್ಲಿಯ, ಮನೋಹರವಾಗಿ ಮಾತನಾಡುವದರಲ್ಲಿಯ, ಎಲ್ಲರ ಮನಸ್ಸನ್ನೂ ಆಕರ್ಷಿ ಸುವುದರಲ್ಲಿಯೂ ಇವನು ಯಲಿಸಸ್ಸಿಗಿಂತಲೂ ಅಧಿಕನಾಗಿರುವನು. ಇವನನ್ನು ವಶಪಡಿಸಿಕೊಳ್ಳುವುದಕ್ಕೆ ಸಮ್ಮೋಹನಾಸ್ತ್ರಗಳನ್ನು ಪ್ರಯೋಗಿಸಿರುತ್ತೇನೆ. ಇವನನ್ನು ವಶಮಾಡಿಕೊಳ್ಳುವುದೂ ಸುಲಭ, ಆದರೆ, ಈತನ ಜತೆಯಲ್ಲಿ ಮೆಂಟರನು ಬಂದಿರು ವನು ಇವನು ಸಾಮಾನ್ಯ ಮನುಷ ನಲ್ಲ, ಅಮಾನುಷವಾದ ಸ್ವಭಾವವು ಇವ ನಲ್ಲಿ ಇರುವಂತೆ ತೋರುತ್ತದೆ. ನಮ್ಮ ಅಸ್ತ್ರ ಶಸ್ತ್ರಗಳೆಲ್ಲಾ ಅವನಲ್ಲಿ ವಿಫಲವಾದವು. ಇವ ರಿಬ್ಬರನ್ನೂ ಮೋಹಪರವಶರನ್ನಾಗಿ ಮಾಡುವುದು ಸಾಧ್ಯವಾದರೆ, ಅದನ್ನು ಮಾಡ ಬೇಕು, ಹಾಗೆ ಇಲ್ಲದಿದ್ದರೆ, ಇವರಿಬ್ಬರಿಗೂ ಭೇದಭಾವವನ್ನು ಹುಟ್ಟಿಸಿ, ಮೆಂಟರು ಈತನನ್ನು ಬಿಟ್ಟು, ಈ ದ್ವೀಪದಿಂದ ಹೊರಟು ಹೋಗುವಂತೆ ಮಾಡಬೇಕು, ಈ ಕೆಲಸವು ಪರಾಕ್ರಮದಿಂದ ನಡೆಯುವಂತೆ ತೋರುವುದಿಲ್ಲ, ಉಪಾಯದಿಂದ ಮಾಡು ವುದು ಸಾಧ್ಯವಾಗಬಹುದು. ಟೆಲಮಾಕಸ್ಸನು ನನ್ನಲ್ಲಿ ವಿಶೇಷ ಅನುರಕ್ತನಾಗು ವಂತೆ ಮಾಡು, ಈ ಅನುರಾಗ ಮಹಿಮೆಯಿಂದ ಮೆಂಟರನನ್ನು ತಿರಸ್ಕರಿಸು ವಂತೆಯ ಮಾಡು, ಶಿಷ್ಯನು ಮೂರ್ಖನಾದರೆ, ಹಿತೋಪದೇಶಗಳನ್ನು ಉಲ್ಲಂಘಿ ಸಿದರೆ, ಗುರುವಿಗೆ ಕೋಪ ಏರುವುದು ಸಹಜವಾದದ್ದು. ಮೆಂಟರಿಗೆ ಅಂಥಾ ಕೋಪವು ಬರಲಿ, ಅವನು ಈ ದ್ವೀಪವನ್ನು ಬಿಟ್ಟು ಹೊರಟು ಹೋಗಲಿ, ಅವನು ಹೊರಟು ಹೋದ ಉತ್ತರ ನಿಮಿಷದಲ್ಲಿಯೇ ಟೆಲಿಮಾಕಸ್ಸನು ನಿರ್ಭಯವಾಗಿ ನಮ್ಮೊ ಡನೆ ಆನಂದಸಾಗರದಲ್ಲಿ ಕ್ರೀಡಿಸುತ್ತಾ ಇರುವನು. ಹೀಗೆ ಆಗುವ ವಿಷಯದಲ್ಲಿ ನಿನ್ನ ಸಹಾಯವನ್ನು ಅಪೇಕ್ಷಿಸುತ್ತೇನೆ. ಈ ರೀತಿಯಲ್ಲಿ ಕೆಲಿಪ್ಪಳು ಹೇಳಿದಳು.

ಅದನ್ನು ಕೇಳಿ, ಮನ್ಮಥನು ಅವಳ ಇಷ್ಟ ಸಿದ್ಧಿಗೆ ಬೇಕಾದ ಸಹಾಯವನ್ನು ಮಾಡುವುದಾಗಿ ವಾಗ್ದಾನ ಮಾಡಿದನು. ಈ ಕಿನ್ನರಿಯರಲ್ಲಿ ಮೆಂಟರಿಗೆ ಅನುರಾಗ ಉಂಟಾಗುವಂತೆ ಮಾಡಬೇಕೆಂದು ಪ್ರಯತ್ನ ಮಾಡಿದನು. ಇವನ ಪ್ರಯತ್ನವು