ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3 ಸಫಲವಾಗಲಿಲ್ಲ, ಜೂಪಿಟರನ ಬಳಿಗೆ ಹೋಗಿ, ತಾನು ಸಲಿಚ್ಛಳಿಗೆ ಮಾಡಿದ ವಾಗ್ದಾನವನ್ನೂ, ತಾನು ಕೊಟ್ಟ ವರಕ್ಕೆ ವೆಂಟರನು ಎಷ್ಟು ಕಾರಿಯಾದದ್ದನ್ನೂ ಅವನಿಗೆ ವಿಜ್ಞಾಪಿಸಿ, ಮೆಂಟರನನ್ನು ನಿಗ್ರಹಿಸುವುದರಲ್ಲಿ ಅವನ ಸಹಾಯವನ್ನು ಅಪೇ ಕ್ಷಿಸಿದನು. ಮನ್ಮಥನಿಗೆ ಜೂಪಿಟರ್ ಹೇಳಿದ್ದೇನಂದರೆ... “ ಮೆಂಟರನನ್ನು ನಿಗ್ರಹಿಸುವುದಕ್ಕೆ ನನಗೂ ಸಾಮಧಣ್ಯ ಎಲ್ಲ, ನಿನಗೆ ಸಾಮ ರ್ಧ ವೆಲ್ಲಿಯದು ? ಇವನಲ್ಲಿ ಸತ್ವಗುಣವು ಮೂರ್ತಿವಿಸಿರುವುದು, ಈ ಗುಣಾ ತಿಶಯವೇ ಅವನಿಗೆ ವಜ್ರಕವಚವಾಗಿರುವುದು, ಅವನ ಮೇಲೆ ನಿನ್ನ ಬಾಣಗಳು ಕೆ೦ದುವುದಿಲ್ಲ, ಕೇವಲ ಧರ್ಮಿಷ್ಟರ ಮೇಲೆ ಹಾಕಲ್ಪಟ್ಟ ಶಸ್ತ್ರಾಸ್ತ್ರಗಳು ಪಿ೦ತಿ ರುಗಿ ನಮಗೇ ಬಾಧಕವನ್ನುಂಟುಮಾಡುವುವು, ಸತ್ವಗುಣಪ್ರಧಾನನಾದ ವಶಿಷ್ಠನ ಮೇಲೆ ಹಾಕಲ್ಪಟ್ಟ ಬಾಣಗಳೆಲ್ಲಾ ಆತನ ಬ್ರಹ್ಮದಂಡದಿಂದ ನುಂಗಟ್ಟದ್ದನ್ನು ನೀನು ಕೇಳಿಲ್ಲವೇ ? ಮೆಂಟರನ ಮೇಲೆ ಬಾಣಪ್ರಯೋಗವನ್ನು ಮಾಡಬೇಡ. ಅವನು ಕೋಪಮಾಡಿಕೊಂಡರೆ, ಅವನ ಕೋಪಾಗ್ನಿ ಯು ನಿನ್ನನ್ನು ದಹಿಸಿಬಿಡುವುದು. ನಿನ್ನ ಪಿತಾಮಹಿನಾದ ಮನ್ಮ ಧನು ಪುಷ್ಟ ಬಾಣವನ್ನು ಹಾಕಿ, ಈಶ್ವರನಿಗೆ ತಪೋಭಂಗ ಮಾಡಲು, ಅವನ ಜ್ಞಾನದೃಷ್ಟಿಯಿಂದ ತನ್ನ ಮನೆಶ್ಚಾಂಚಲ್ಯದ ಕಾರಣವನ್ನು ತಿಳಿ ದುಕೊಂಡು, ಕೋಪದಿಂದ ಫಾಲನೇತ್ರವನ್ನು ಬಿಡಲು, ಅವನು ಭಗೀಭೂತನಾದದ್ದು ನಿನಗೆ ತಿಳಿಯದೇ ? ಮೆಂಟರನು ಜಿತೇಂದ್ರಿಯನು ಅವನಲ್ಲಿ ತಮೋಗಣವಿರುವು ದಿಲ್ಲ, ರಜೋಗುಣವೂ ಇರುವುದಿಲ್ಲ, ಕೇವಲ ಸತ್ವಗುಣಪ್ರಧಾನನಾಗಿರುವನು. ಅವನು ಧರ್ಮಕ್ಕೆ ಅಧೀನನಾಗುವನು. ಅಧರ್ಮಕ್ಕೆ ಸ್ವಾಧೀನನಾಗುವುದಿಲ್ಲ. ಪೂರ್ವಾಪರಗಳನ್ನು ಯೋಚಿಸದೆ, ಕೆಲಿಪ್ಪಳಿಗೆ ವರವನ್ನು ಏತಕ್ಕೆ ಕೊಟ್ಟೆ ? ನಿನ್ನ ವಾಗ್ದಾನವು ನಡೆಯುವಂತೆ ತೋರುವುದಿಲ್ಲ, ಪಾಪಿಷ್ಟರನ್ನು ಜಯಿಸುವುದು ಸುಲಭ. ಪುಣ್ಯವೂ, ಪಾಪವೂ ಎರಡೂ ಯಾರಲ್ಲಿ ಮಿಶ್ರವಾಗಿವೆಯೋ ಅವರನ್ನೂ ಒಸ ಬಹುದು. ಕೇವಲ ಧರ್ಮಿಷ್ಟರನ್ನು ಜಯಿಸುವುದು ದೇವರಿಗೆ ಅಸಾಧ್ಯ: ಮೆಂಟರು ಮನುಷ್ಯ ಮಾತ್ರನೆಂದು ತಿಳಿದುಕೊಂಡೆ. ನೀನು ಕೊಟ್ಟ ಅಭಯವು ನಿಷ್ಪಲವಾಗು ವದು, ಟೆಲಿಮಾಕಸ್ಸನನ್ನು ನಿನ್ನ ಸಹಾಯವಿಲ್ಲದೇಲೆ, ಕೆಲವೃಳು ಸ್ವಾಧೀನ ಮಾಡಿ ಕೊಳ್ಳ ಬಲ್ಲಳು. ನೀನೂ, ನಾನೂ ಇಬ್ಬರೂ ಸಹಾಯ ಮಾಡಿದಾಗ್ಯೂ, ಅವಳು ಮೆಂಟರನನ್ನು ಜಯಿಸಲಾರಳು. ಮೆಂಟರನ ಸಾನ್ನಿಧ್ಯದಿಂದ ನಮ್ಮೆಲ್ಲರ ಬಾಣಗಳೂ