ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಕೂಡ ಹಿಂತಿರುಗುವುವ ಈ ಪ್ರಯತ್ನ ವನ್ನು ಒಡ , ಕೆಲಿಸ್ಕಳ ಮನೋರಥವು ನಡೆಯುವುದಿಲ್ಲ, ಮಾತಾಪಿತೃಕಾರಾಸಕ್ತನಾಗಿರತಕ್ಕೆ ಟೆಲಿಮಾಕ ನೃನನ್ನು ವಶಪ ಡಿಸಿಕೊಳ್ಳು ವುದಕ್ಕೆ ಇದು ಕಾಲವೂ ಅಲ್ಲ, ಅವನಲ್ಲಿ ಕೆಲಿಸ್ಸಳು ಅನುರಕ್ತಳಾಗಿದ್ದರೆ, ಅವನು ಇಥಾಕಾ ದ್ವೀಪಕ್ಕೆ ಹೋಗಿ, ಶತ್ರುಗಳನ್ನು ನಿಗ್ರಹಿಸುವುದಕ್ಕೆ ಸಹಾಯ ಮಾಡಲ್ಪಡಲಿ, ಪೆನಿಲೋಪಳ ಪ್ರೀತಿಗೂ, ಯಲಿಸಸ್ಸನ ಪ್ರಸನ್ನ ತೆಗೂ ಅವಳು ಪಾತ್ರಳಾಗಲಿ, ಧರ್ಮದಿಂದ ಟಿಲಿಮಾಕಸ್ಥನು ವರಿಸಲ್ಪಡಲಿ, ಆಗ ದೈವಾನುಗ್ರಹ ದಿಂದ ಇವಳ ಇಪ್ಪಾರ್ಥಸಿದ್ಧಿಯು ಆಗುವುದು, ಈ ವಿಷಯವನ್ನು ಹೇಳಿ, ಧರ್ಮ ಮಾರ್ಗದರ್ಶನವನ್ನು ಮಾಡು. ಹಾಗಿಲ್ಲದಿದ್ದರೆ, ನಿನ್ನ ಪ್ರಯತ್ನ ವೂ, ಅವಳ ಪ್ರಯ ತೃ ವೂ ಎರಡೂ ವಿಫಲವಾಗುವುದರಲ್ಲಿ ಸಂದೇಹವಿಲ್ಲ. ಈ ಭಾಗದಲ್ಲಿ ಮೆಂಟರಿಗೆ ದೈವಸಾಯವು ದೊರೆಯುವದು. ನಿಮಗೆಂದಿಗೂ ದೊರೆಯುವುದಿಲ್ಲ.' ಈ ರೀತಿಯಲ್ಲಿ ಜೂಪಿಟರನು ಹೇಳಿ ದನು. ಭಗ್ನ ಮನೋರಧನಾಗಿ, ಬಹಳ ವ್ಯಸನದಿಂದ ತಾನು ಕೊಟ್ಟ ಮಾತಿಗೆ ಭಂಗ ಬಂತಲ್ಲಾ ಎಂದು ಚಿಂತಾಕ್ರಾಂತ ನಾಗಿ, ಮನ್ಮಥನು ಕೆಲಿಪ್ಪಳ ಒಳಿಗೆ ಒಂದನು. ಇವನ ಮುಖವನ್ನು ನೋಡಿದ ಕೂಡಲೆ, ಅವನ ಮನೋಗತವನ್ನು ಅವಳು ತಿಳಿದುಕೊಂಡಳು. ಜೂಪಿಟರು ಮಾಡಿದ ಹಿತೋ। ಪದೇಶಗಳನ್ನು ಮನ್ಮಥನು ಶೃತಪಡಿಸಿ, ಅವನ ಸಲಹೆಯಂತೆ ನಡೆಯುವುದು ಉತ್ತಮ ವೆಂದು ಕೇಳಿದನು, ಮೋಹಪರವಶರಾದವರಿಗೆ ಯುಕ್ತಾಯುಕ್ತ ವಿವೇಚನೆಯು ಇರು ವುದಿಲ್ಲ, ಮನ್ಮಥನನ್ನು ಕುರಿತು ಕೆಲಿಪ್ಪಳು ಹೇಳಿದ್ದೇನಂದರೆ:- 6 ಜೂಪಿಟರನ ಸಲಹೆಯು ಯುಕ್ತಿಯುಕ್ತವಾಗಿಲ್ಲ, ಮೆಂಟರನಲ್ಲಿ ಸತ್ವ ಗುಣವು ಮ .ರ್ತಿಭವಿಸಿರಬಹುದು. ರಜೋಗುಣ, ತಮೋಗುಣಗಳು ಇಲ್ಲದೆ ಇರ ಬಹುಗು, ಸತ್ವಗುಣಕ್ಕೇ ಜಯವಾಗುವುದೆಂಬದಾಗಿಯ, ತಮೋಗುಣಕ್ಕೆ ಪರಾ ಜಯವೆಂಬದಾಗಿಯೂ ಹೇಳಿದರೆ, ಯಾರು ತಾನೇ ನಂಬುವರು, ಪ್ರಪಂಚದ ಚರಿ ತ್ರೆಯನ್ನು ಪರಿಶೀಲಿಸಿ ನೋಡು, ಮನೋವಾಕ್ಕರ್ಮಗಳಲ್ಲಿ ಪರಿಶುದ್ಧರಾದವರು ಎಷ್ಟು ಜನ ನಾಶವಾಗಿಲ್ಲ ? ಮನಸ್ಸಿನಲ್ಲಿ ಒಂದು ವಿಧವಾಗಿಯ, ವಾಚಾ ಒಂದು ವಿಧವಾಗಿಯ, ಕಾತ್ಯತಃ ಒಂದು ವಿಧವಾಗಿಯೂ ಇರತಕ್ಕ ವರು ಎಷ್ಟು ಜನ ಅಖಂಡ ಸಾಮ್ರಾಜ್ಯವನ್ನು ಅನುಭವಿಸಿಲ್ಲ ? ಶ್ರೀ ರಾಮನೇ ಮೊದಲಾದವರು ಧಮ್ಮ ದಿಂದ ರಾಜ್ಯಭಾರ ಮಾಡಿದರು. ರಾವಣನೇ ಮೊದಲಾದವರು ರಾಜ್ಯಭಾರವನ್ನು