ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33) ಮಾಡಲಿಲ್ಲವೇ ? ಒಬ್ಬ ನ್ಯಾಸರುಡೀನನು ವೈರಾಗ್ಯ ಚಕ್ರವರ್ತಿಯಾಗಿದ್ದನು. ಸಾವಿ ರಾರು ಜನ ಔರಂಗಜೇಬರು ಪ್ರಭುತ್ವವನ್ನು ಮಾಡಲಿಲ್ಲವೇ ? ಒಬ್ಬ ಸಾವಿತ್ರಿಯು ಯಮಧರ್ಮರಾಜನನ್ನು ಜಯಿಸಿದಳು. ಲಕ್ಷೇಪಲಕ್ಷ ಸೈರಿಣಿಯರು ಸ್ವಚ್ಛಾ ಪ್ರವರ್ತಕರಾಗಿ, ಈ ಭೂಮಂಡಲವನ್ನೇ ಸ್ವರ್ಗವಾಗಿ ಮಾಡಿಕೊಳ್ಳಲಿಲ್ಲವೇ? ನಿರ್ವಿರರಾದ ವೃದ್ಧರ ಸಲಹೆಯು ನನಗೆ ಬೇಕಾಗಿಲ್ಲ, ನನ್ನ ಪುಷ್ಪಬಾಣ ವು ಬ್ರಹ್ಮಾಸ್ತ್ರಕ್ಕಿಂತಲೂ ಹೆಚ್ಚು ಕೆಲಸವನ್ನು ಮಾಡಬಲ್ಲದು. ನೀನು ಆಡಿದ ಮಾತನ್ನು ತಪ್ಪಬೇಡ, ಟೆಲಿಮಾಕನಿಗೆ ಮೋಹಪಾಶವನ್ನು ನಾನು ಬೀಸುತ್ತೇನೆ. ಅವನು ನನ್ನಲ್ಲಿ ಅನುರಕ್ತನಾಗುವಂತೆ ನೀನು ಮಾಡು, ಮೆಂಟರು ಅವನಲ್ಲಿ ಮೂರ್ತಿಭ ಸಿರುವ ಸತ್ವಗುಣವು ಸುಟ್ಟು, ಬೂದಿ ಮಾಡಲ್ಪಡುವಂತೆ ನಾನು ಮಾಡುವೆನು, ಭಯ ಪಡಬೇಡ ?” ಎಂದು ಹೇಳಿದಳು. ಮನ್ಮಥನಿಗೆ ಜೂಪಿಟರನ ಹಿತೋಪದೇಶದಲ್ಲಿ ತುಂಬಾ ನಂಬಿಕೆಯು ಇತ್ತು. ಆದಾಗ್ಯೂ ತಾನು ಕೊಟ್ಟ ಮಾತಿಗೆ ತಪ್ಪುವುದು ಸರಿಯಲ್ಲವೆಂಬ ಮನೋಭಾವವು ಇವನಿಗೆ ಹುಟ್ಟಿತು, ಅವಳ ಪ್ರತಾಪವೂ, ವಾಗೈತರಿಯ ಇವನಿಗೆ ಮಂಕು ಬದಿಯಂತೆ ಪರಿಣಮಿಸಿತು. ಪರಿಣಾಮ ಫಲವನ್ನು ನೋಡುವ ಶಕ್ತಿಯು ಇವ ನಿಗೆ ತಪ್ಪಿತು, ಇವನು ವಿವೇಕ ಶೂನ್ಯನಾದನು. ಈ ಕಿನ್ನರಿಯು ಹೇಳಿದ್ದು ನಿಜ ವೆಂದು ನಂಬಿದನು. ಇವಳ ಆಜ್ಞೆಗೆ ಅನುಸಾರವಾಗಿ ಟೆಲಮಾಕಸ್ಸನ ಮನಸ್ಸನ್ನು ಪ್ರವೇಶಿಸಿ, ಅವಳಲ್ಲಿ ಅವನಿಗೆ ಅಪ್ರತಿಹತವಾದ ಪ್ರೀತಿಯು ಹುಟ್ಟುವಂತೆ ಮಾಡಿದನು. ಕಾವ ಪರವಶರಾದವರಿಗೆ ಭಯವೂ, ಲಜ್ಜೆಯ ಎರಡೂ ಇರುವುದಿಲ್ಲ. ಟೆಲಿಮಾಕಸ್ಸನ ಮನಸ್ಸಿನಿಂದ ಈ ಎರಡು ಗುಣಗಳೂ ಹೋದವು. ಕೆಲವೃಳಲ್ಲಿ ಟೆಲಿಮಾಕಸ್ಸಿಗೆ ಪ್ರೀತಿಯು ಪರಾಕಾಷ್ಠ ದೆಸೆಯನ್ನು ಹೊಂದಿತು. ಮೆ೦ಟರನಲ್ಲಿದ್ದ ಗುರುಭಕ್ತಿಯು ಹೋಯಿತು. ಮೆಂಟರನ ಸಾನ್ನಿಧ್ಯವನ್ನೇ ಬಿಟ್ಟು, ಕಲಸ್ಥಳ ಸನ್ನಿ ಧಿಯಲ್ಲಿ ಕಾರ್ಲರಣ ಮಾಡುತ್ತಾ, ಮೇಂಟರನ ಬಳಿಗೆ ಹೋಗುವುದನ್ನೇ ಬಿಟ್ಟನು. ಹೇಳಿ ಕಳುಹಿಸಿದಾಗ, ತಪ್ಪಿಸಿ ಕೊಳ್ಳುತ್ತಾ ಬಂದನು. ಕೊನೆಗೆ ಮೆಂಟರಸಿಗೆ ಬಹಳ ಅಸಮಾಧಾನವಾಯಿತು. ತಾನೇ ಬಲಾತ್ಕಾರವಾಗಿ ಟೆಲಮಾಕಸ್ಸನ ಬಳಿಗೆ ಹೋದನು. ಮೆಂಟರನ ಕಣ್ಣಿನಲ್ಲಿ ಕೋಪವು ಪ್ರಜ್ವಲಿಸುತ್ತಿತ್ತು, ಕೆಲಸ್ಥಳೇ ಮೊದಲಾದ ಕಿನ್ನರಿಯ ರೆಲ್ಲಾ ಅವನ ಎದುರಿಗೆ ನಿಲ್ಲುವ ಶಕ್ತಿ ಇಲ್ಲದೆ ಮರೆಯಾದರು, ಟೆಲಿಮಾಕಸ್ಸನನ್ನು ನೋಡಿ, ವೆ:೦ಟರನು ಹೇಳಿದ್ದೇನಂದರೆ:-