ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(1) “ ನೀನು ಯೂಲಿಸಿಸ್ಸನ ಮಗನೆಂಬದಾಗಿಯ, ಜಿತೇಂದ್ರಿಯನೆಂಬದಾ ಗಿಯೂ ನಾನು ತಿಳಿದುಕೊಂಡಿದ್ದೆನು, ನಿನ್ನ ತಂದೆಯ ಗುಣಾತಿಶಯಗಳೆಲ್ಲಾ ಮೂರ್ತಿಭವಿಸಿರುವುವೆಂಬದಾಗಿಯ, ವಯೋಧರ್ಮದಿಂದ ಆಗಾಗ್ಗೆ ದೌರ್ಬಲ್ಯ ವನ್ನು ತೋರಿಸಿದಾಗ್ಯೂ, ಪರಿಣಾಮದಲ್ಲಿ ನೀನು ಗುರುಹಿರಿಯರ ಮಾತನ್ನು ಉಲ್ಲಂಘಿಸತಕ್ಕವನಲ್ಲವೆಂಬದಾಗಿ ಖ ನಾನು ತಿಳಿದು ಕೊಂಡಿದ್ದೆನು, ನೀನು ಮಾಡಿದ ಪ್ರತಿಜ್ಞೆಗಳೆಲ್ಲಾ ಕೇಳಿ, ನಿನ್ನ ಗುಣಾತಿಶಯಗಳಿಂದ ನಿನ್ನ ತಂದೆಗೂ ಸರಾ ಭವವನ್ನು ಮಾಡುತ್ತೀ ಎಂಬದಾಗಿ ನಾನು ನಂಬಿದ್ದೆನು, ನಿನ್ನ ತಂದೆಯಲ್ಲಿ ? ನೀನೆಲ್ಲಿ ? ದೇವಗೂ, ಪಿಶಾಚಕ್ಕೂ ಇರತಕ್ಕೆ ಅಂತರವು ನಿಮ್ಮಿಬ್ಬರಿಗೂ ಇರು ವುದು, ನಿನ್ನ ವಿಷಯದಲ್ಲಿ ನಾನು ವಂಚಿತನಾದೆ. ಅಯೋಗ್ಯನನ್ನು ನಾನು ಯೋಗ್ಯವೆಂದು ತಿಳಿದುಕೊಂಡೆನು, ಅಪಾತ್ರದಲ್ಲಿ ನಾನು ಹಿತೋಪದೇಶವನ್ನು ಮಾಡಿ ದೆನು, ಸೆನಿಲೋಗಳು ನೀನು ರಕ್ಷಕನಾಗುವಿ ಎಂದು ಆಶೆಯನ್ನಿಟ್ಟು ಕೊಂಡಿರು ವಳು. ನಿನ್ನ ದೌರಾತ್ಮದಿಂದ ಅವಳು ಭಗ್ನನ ನೋಂಧಳಾಗುವ ಅವಸ್ಥೆಯು ಬಂದಿತು. ನೀವ ರಕ್ಷಕನಾಗಿರುತ್ತೀ ಎಂದು ಯಲಿಸ್ಸನು ಧೈರವಾಗಿ ದೇಶಾ ಟನವನ್ನು ಮಾಡುತ್ತಲಿರುವನು. ಅವನ ನಂಬಿಕೆಗೂ ನೀನು ಅರ್ಹನಲ್ಲವೆಂದು ತೋರಿಸಿಕೊ೦'ತಿರುವಿ, ಅನೇಕ ಕಷ್ಟಗಳಲ್ಲಿ ಧರ್ಮವನ್ನು ಪರಿತ್ಯಾಗ ಮಾಡಗೆ, ನೀನು ನಡೆದು ಕೊಳ್ಳುವಂತೆ ನಾನು ಉಪದೇಶ ಮಾಡಿದೆನು, ನನ್ನ ಮೆಹನತ್ತೆಲ್ಲಾ ಬೂದಿ ಯಲ್ಲಿ ಮಾಡಿದ ಹೋಮದಂತಾಯಿತು. ಇ೦ದ್ರಿಯಗ್ರಾಮಗಳು ಅಪ್ರತಿಹತವಾದ ವುಗಳೆಂಬದಾಗಿಯೂ, ಅದರಿಂದ ಆಕರ್ಷಿಸಲ್ಪಡದೆ ಇರತಕ್ಕ ವನು ದೇವರಿಗೆ ಸಮಾನ ನಾಗುವನೆಂಬದಾಗಿಯೂ ನಾನು ಉಪದೇಶ ಮಾಡಿದಾಗಲೆಲ್ಲಾ ಇ೦ದ್ರಿಯಪರವಶ ನಾಗುವ ಸ್ಪಿತಿಯು ಬಂದರೆ, ದೇಹವನ್ನಾದರೂ ಬಿಡು ವೆನು, ಇ೦ದ್ರಿಯಪರವಶನಾ ಗುವುದಿಲ್ಲವೆಂದು ನೀನು ವಿಜೃಂಭಿಸುತ್ತಿದ್ದೆ, ಆ ವಿಜೃಂರ್ಭಣೆಗಳಲ್ಲಾ ಈಗ ಏನಾ ದವು ? ನಾನು ಹೇ ಕಳುಹಿಸಿದಾಗ್ಯೂ, ನೀನು ಬರಲಿಲ್ಲ. ನಿನ್ನ ಯಶಸ್ಸನ್ನೂ , ಕೀರ್ತಿಯನ್ನೂ ಸುಟ್ಟು ೭೧ದಿ ಮಾಡುವುದರಲ್ಲಿ ಉದ್ಯುಕ್ತಳಾಗಿರುವ ಈ ದ.ರಾ ತ್ಮಳ ಸಂಭಾಷಣವೂ, ಇವಳ ಸಹವಾಸವೂ ನಿನಗೆ ಹಿತವಾಯಿತು. ನನ್ನ ಸಹವಾ ಸವೂ, ನನ್ನ ಹಿತೋಪದೇಶವೂ ನಿನಗೆ ಅಹಿತವಾಯಿತು, ನೀನು ಶುದ್ಧ ಅಯೋ ಗ್ಯನು, ಸತ್ಯವೂ, ಧರ್ಮವೂ, ಕರ್ತವ್ಯ ಜ್ಞಾನವೂ ನಿನ್ನನ್ನು ತಿರಸ್ಕರಿಸಿಬಿಟ್ಟವು.