ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 * * * * * ಮೋಹವು ನಿನ್ನನ್ನು ಆವರಿಸಿಕೊಂಡಿತು. ಭ್ರಷ್ಟರಿಗೆ ಯಾವ ಗತಿಯೋ ಆ ಗತಿಯು ನಿನಗೆ ಬರುವುದು, ಮಹಾತ್ಮರ ಉದರದಲ್ಲಿ ವಿಶಾಚವು ಜನಿಸಿದಂತಾಯಿತು. ಅಮೇಧ್ಯದ ಬಳಿಯಲ್ಲಿ ಕೂರಬೇಡವೆಂದು ಹೇಳಿದರೆ, ಅದನ್ನೇ ತಿನ್ನುತ್ತೇನೆಂಬುವ ಸ್ಥಿತಿಗೆ ಬಂದಿರುವಿ, ಯೂಲಿಸಸ್ಸನ ವಂಶಕ್ಕೆ ಕಳಂಕನಾಗಿ ಪರಿಣಮಿಸಿರುವಿ. ಅವನ ಮಗನಾಗಿರುವುದಕ್ಕೂ, ನನ್ನ ಶಿಷ್ಯನಾಗಿರುವುದಕ್ಕೂ ನೀನು ಅರ್ಹನಲ್ಲವೆಂದು ಗೊತ್ತಾಯಿತು. ಸದ್ವಂಶಕ್ಕೆ ಕಳಂಕವನ್ನು ತರತಕ್ಕವರು ಪರಿಷರ್ತವ್ಯರು, ಸದ್ದು ರುವಿಗೆ ಕಳಂಕವನ್ನು ತರತಕ್ಕವರು ದಂಡ್ಯರು, ಪೆನಿಲೋಗಳಿಗೂ , ಯಲಿಸಸ್ಸಿಗೂ, ನನಗೂ ನೀನು ದ್ರೋಹವನ್ನು ಮಾಡಿದ್ದೀಯೆ, ಗುರುಹಿರಿಯರ ಮಾತನ್ನು ಉಲ್ಲಂಘಿ ಸಿದ್ದೀಯೆ. ಸತ್ಯವನ್ನೂ, ಧರ್ಮವನ್ನೂ ನಿರಾಕರಿಸಿದ್ದೀಯೆ. “ ಜನನಿಯ ಮಾನ ವಾದರೂ ಹೋಗಲಿ, ಪ್ರಾಣವಾದರೂ ಹೋಗಲಿ, ದುರ್ವಿಷಯಾಸಕ್ತನಾಗಿ ಬದು ಕುವುದೇ ವೆ ಲೆಂದು ನೀನು ನಿಷ್ಕರ್ಷಿಸಿದ್ದೀಯೆ. ಇದು ನಿನಗೆ ಅತ್ಯಂತ ಆ ನುಚಿತ ವಾದ ವ್ಯಾಪಾರ, ಇದು ದೊಡ್ಡ ಅಪರಾಧ, ಮಾತಾಪಿತೃಗಳಿಗೂ, ಗುರುಗ ಳಿಗೂ ಅಪಯಶಸ್ಸನ್ನು ತರತಕ್ಕಮು ಮಹಾಪಾತಕಿಗಳು. ಅ೦ಥಾವರು ಮರಣ ದಂಡನೆಗೆ ಅರ್ಹರು, ನೀನು ಬದುಕಿರುವುದಕ್ಕೆ ಯೋಗ್ಯನಲ್ಲ, ನಿನ್ನನ್ನು ಸಂಹರಿಸು ತೇನೆ. ಈ ಕಿನ್ನರಿಯರನ್ನೂ ಸಂಹರಿಸುತ್ತೇನೆ” ಎಂದು ಕತ್ತಿಯನ್ನು ಹಿರಿದು, ಪ್ರಳಯ ಕಾಲದ ರುದ್ರನಂತೆ ನಿಲ್ಲಲು, ಕೆಲಿಪ್ರೋ ಮೊದಲಾದ ಕಿನ್ನರಿಯರೆಲ್ಲಾ ಭಯ ಭ್ರಾಂತರಾಗಿ ಓಡಿಹೋದರು. ಟೆಲಿಮಾಕಸ್ಸನು ನಡುಗುತ್ತಾ, ಮೆಂಟರನ ಪಾದವನ್ನು ಗಟ್ಟಿಯಾಗಿ ಹಿಡಿದು ಕೂಂಡು ಸರ್ವಾಪರಾಧವಾಯಿತು. ಮೋಹಪರವಶನಾಗಿ ಕೆಟ್ಟೆನು. ಯೂಲಿಸ ಸ್ವನು ದೇಹವನ್ನು ಬಿಟ್ಟಿರುವನು, ಪೆನಿಲೋಗಳಿಗೆ ಮಾನರಕ್ಷಣೆ ಯು ಅಸಾಧ್ಯವಾ ದದ್ದರಿಂದ ದೇಹವನ್ನು ಬಿಟ್ಟಿರುವಳು. ದೇಶವು ಪರಾಧೀನವಾಗಿರುವುದು, ಈ ಕಿನ್ನರಿಯರ ಸಹವಾಸ ಸುಖದಲ್ಲಿ ಪರಾಖಿಖನಾಗಿ, ಮಾತಾಪಿತೃ ಸೇವೆಯನ್ನು ಮಾಡಬೇಕೆಂದು ಪ್ರಯತ್ನ ಮಾಡಿದರೂ, ಆ ಪ್ರಯತ್ನವು ವಿಫಲವಾಗುವುದು. ಶತ್ರುಗಳು ನನ್ನನ್ನು ಸಂಹರಿಸುವರು. ಇಂಥಾ ವಿಪತ್ತಿಗೆ ಒಳಗಾಗುವುದಕ್ಕಿಂತ ಈ ದ್ವೀಪದಲ್ಲಿ ಈ ಕಿನ್ನರಿಯರ ಸಹವಾಸದಲ್ಲಿ ಇರುವುದು ಮೇಲು ಎಂಬ ಮನೋ