ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವವು ಹುಟ್ಟಿತು, ಈ ಮನೋಭಾವವು ಉತ್ಕಟಾವಸ್ಥೆಗೆ ಬ೦ದದ್ದರಿಂದ, ನಿನ್ನಲ್ಲಿ ಅನಾದರಣೆ ಉಂಟಾಯಿತು. ಇದಕ್ಕೆ ಏನು ಕಾರಣ ವೋ ನನಗೆ ತಿಳಿಯದು. ನನ್ನ ದುರದೃಷ್ಟವೇ ಕಾರಣವಾಗಿರಬಹುದು, ನಾನು ಬಹಳ ಪಾಪಿನು ನನಗೆ ಬಂದ ಎಸತ್ಸಗಂಪರೆಗಳಲ್ಲೆಲ್ಲಾ ದೇವರು ಸಹಾಯ ಮಾಡಿದನು. ಮು೦ದೆಯ ಸಹಾಯ ಮಾಡುವನೆಂಬದಾಗಿಯೂ, ಮಾತಾಪಿತೃಗಳ ವಿಷಯದಲ್ಲಿಯ, ನಿನ್ನ ವಿಷಯದ ಲ್ಲಿಯ ಹೇಗೆ ನಡೆದುಕೊಳ್ಳಬೇಕೋ ಆ ರೀತಿಯಲ್ಲಿ ನಡೆದುಕೊಳ್ಳುವುದು ನನ್ನ ಕರ್ತವ್ಯವೆಂಬದಾಗಿ ನನಗೆ ತೋರಲಿಲ್ಲ, ನನ್ನನ್ನು ಉಚ್ಚರಿಸುವುದರಲ್ಲಿ ಬದ್ಧಾ ದರನಾದ ನಿನ್ನ ಆಜ್ಞೆಯನ್ನು ಉಲ್ಲಂಘಿಸಿದೆನು, ನನ್ನ ಬುದ್ದಿಯು ದುಸಿ೯ಷಯಗ ಳಲ್ಲಿ ಆಸಕ್ತವಾಯಿತು, ಮೋಹಪರವಶನಾನೆನು, ಕರ್ತವ್ಯ ತಾಮಥನಾದೆನು' ಮಹಾಪಾಪಿಯದೆನು, ಬದುಕಿರುವುದಕ್ಕೆ ನಾನು ಅರ್ಹನಲ್ಲ. ನನ್ನನ್ನು ಶೀಘ್ರ ದಲ್ಲಿಯೇ ಸಂಹಸು, ನಮ್ಮ ತಂದೆ ತಾಯಿಗಳು ಇನ್ನೂ ಬದುಕಿದ್ದರೆ, ಅವರ ಮಾನ ವನ್ನೂ , ಪ್ರಾಣವನ್ನೂ ರಕ್ಷಿಸು. ದುರ್ವಿಷಯದಲ್ಲಿ ಆಸಕ್ತನಾದ ನನ್ನ ವಿಷಯ ದಲ್ಲಿ ಲೇಶವೂ ಕೃಪೆಯನ್ನು ತೋರಿಸಬೇಡ ಕರ್ತವ್ಯಗಳನ್ನು ಮರೆತು, ಸತ್ಯವನ್ನೂ, ಧರ್ಮವನ್ನೂ ಪರಿತ್ಯಾಗ ಮಾಡಿ, ತಮ್ಮನ್ನು ತಾವೇ ವಂಚಿಸಿಕೊಳ್ಳ ತಕ್ಕ ವರು ದಂಡರು. ಈ ದಂಡನೆಯು ನಮ್ಮ ತಂದೆತಾಯಿ ಗಳಿಗೆ, ನಿನಗೂ ಹೇಗೆ ಕರ್ತ ವ್ಯವೋ ಜಗದೀಶ್ವರು ಗೂ ಹಾ. ಅದು ಸಮ್ಮತವಾದದ್ದು, ದುಷ್ಟರಾದವರು ಮಕ್ಕ ಳಾದರೇನು ? ಶಿಷ್ಯರಾದರೇನು ? ಆಸ್ತರಾದರೇನು ? ಅವರು ನಿಗ್ರಹಕ್ಕೆ ಪಾತ್ರರು. ನಾನು ದೊಡ್ಡ ಅಪರಾಧವನ್ನು ಮಾಡಿದೆನು, ಸಾಯುವುದಕ್ಕೆ ಸಿದ್ಧನಾಗಿರುತ್ತೇನೆ. ನನ್ನಲ್ಲಿ ಕೃಪೆ ಯನ್ನು ತೋರಿಸಬೇಡ, ದೇವರ ಸ್ಮರಣೆ ಯನ್ನು ಮಾಡುತ್ತಾ ದೇಹ ವನ್ನು ಬಿಡುವುದಕ್ಕೆ ಸಿದ್ಧನಾಗಿರು -. ಸಿದ« ಕ್ಷೀಣ್ಯದಿಂದ ಸಂಕುಸು. ಈ ರೀತಿಯಲ್ಲಿ ಟೆಲಿಮಾಕಸ್ಸನು ವಿಜ್ಞಾಪಿಸಿದನು ಇವನ ಅನುತಾಪ ವಾಕ್ಯಗಳು ಪ್ರಳಯ ಕಾಲದ ವರ್ಷದಂತೆ ವೆಂಟರನ ಕೋಪಾಗ್ನಿ ಯ ಶಮನಕ್ಕೆ ಸಾಧಕವಾಯಿತು. ಮೆಂಟರಿಗೆ ಅವನಲ್ಲಿ ದಯೆಯು ಹಟ್ಟಿ, ಇವನು ಮಾಡಿದ ಪಾಪಕ್ಕೆ ಇವನಿಗೆ ಉಂಟಾದ ಅನತಾಪವೂ, ವ್ಯಸನವೂ ಪ್ರಾಯಶ್ಚಿತ್ತರೂಪವಾದ ದೆಂದು ಭ ವಿಸಲ್ಪಟ್ಟಿತು. ಕೋಪದಿಂದ ತಾನು ಆಡಿದ ಮಾತುಗಳು ವಜ್ರಾ ಯುಧದ ಏಟುಗಳಿಗಿಂತಲೂ ಹೆಚ್ಚಾದ ಗಂಡನೆಯಾಗಿ ಪರಿಣಮಿಸಿತೆಂದು ಗೊತ್ತಾ