ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 }. ಬಿ ತು, ದುರ್ವಿಷಯಗಳಲ್ಲಿ ಆಸಕ್ತವಾದ ಲಿನಾ ಕಸ್ಸನ ಮನೋಭಾವವು ಸಂಹ ರಿಸಲ್ಪಟ್ಟಿತು, ಅವನಿಗೆ ನಿಸರ್ಗವಾದ ಸತ್ವ ಗುಣ ಪ್ರಧಾನವಾದ ಸ್ವಭಾವವು ಪುನಃ ಅಭ್ಯವಾಯಿ ತು, ದೌಷ್ಟವು ಕೊಲ್ಲಲ್ಪಟ್ಟಿತು, ಶಸ್ತ್ರವನ್ನು ಉಪಯೋಗಿ ಸುವುದು ಅನಾವಶ್ಯಕವಾಯಿತು, ಇದನ್ನೆಲ್ಲಾ ನೋಡಿ, ಶಾಂತಚಿತ್ತನಾಗಿ, ಪ್ರಸನ್ನತೆಯಿಂದ ವೆ ೦ಟರನು ಟೆಲಿಮಾಕಸ್ಸನನ್ನು ಕುರಿತು ಹೇಳಿದ್ದೇನಂದರೆ:- “ ಶ್ರೇಯಸ್ಸಿಗೆ ಅನೇಕ ವಿಘ್ನಗಳು ಬರುವುವು. ಯೌವನವೂ, ಧನಸಂಸ ಯ, ಪ್ರಭುತ್ವವೂ, ಅವಿವೇಕವೂ ಒಂದೊಂದು ಇದ್ದಾಗ , ಎಷ್ಟೋ ಅನರ್ಥ ಗಳು ಉಂಟಾಗುವುವು ಎಂದು ಪ್ರಾಜ್ಞರು ಹೇಳುತ್ತಾರೆ. ಈ ನಾಲ ಸೇರಿದ ಪಕ್ಷದಲ್ಲಿ, ಗತಿಯೇನು ಎಂಬದಾಗಿಯ ಕೇಳುವರು, ದೈಎಯೋಗದಿಂದ ಈ ನಾಲ್ಕರಲ್ಲಿ ಯವನ ಒಂದು ಮಾತ್ರ ನಿನ್ನಲ್ಲಿ ಪರಿಪೂರ್ಣ ವಾಗಿರುವುದು, ಅವಿವೇ ಕವು ಆಗಾಗ್ಗೆ ನಿನಗೆ ಸಂಘಟನೆಯಾಗುವುದು. ಇದರಿಂದ ಕರ್ತವ್ಯ ತಾಮೌಡ್ಯವು ನಿನ್ನ ನ್ನು ಆವರಿಸುವುದು, ಕುರುಡನಂತೆಯ, ಅಜ್ಞಾನಿಯಂತೆಯ ನೀನು ನಡೆದು ಕೊಳ್ಳುವಿ. ಏನೋ ಒಂದು ವಿಧವಾದ ಜನ್ಮಾಂತರ ಪ್ರಣ್ಯ ಪರಿಪಾಕದಿಂದ ದೇವ ನಿನ್ನಲ್ಲಿ ಪ್ರಸನ್ನನಾಗಿರುವನು. ಅದನ್ನು ತಿಳಿದು ಕೊಳ್ಳುವ ಶಕ್ತಿಯು ನಿನಗಿರು ವದಿಲ್ಲ, ಆಗಾಗ್ಗೆ ಮೋಹಪರವಶನಾಗುತ್ತೀಯೆ ಉನ್ಮ ತಾವಸ್ಥೆಗೆ ಗುರಿಯಾ ಗುತ್ತೀಯೆ. ತಂದೆ ಯು ಸತ್ತಿರಬಹುದೆಂದು ಭಾವಿಸುತ್ತೀಯೆ. ತಾಯಿಯ ದೇಹವನ್ನು ಬಿಟ್ಟಿರಬಹುದೆಂದು ಎಣಿಸುತ್ತಿದೆ, ನಿನ್ನ ಕರ್ತವ್ಯವು ಪೂರೈಸಿತೆಂದು ತಿಳಿದು ಕೊಳ್ಳುತ್ತೀಯೆ. ಈ ಕಿನ್ನರಿಯರ ಸಹವಾಸದಲ್ಲಿರುವುದು ಸ್ವರ್ಗಸುಖವೆಂದು ಭಾವಿಸುತ್ತೀಯೆ. ಈ ಭಾವನೆಯು ಸಾಧುವಾದದ್ದೆಂದು ತೋರಿಸುವುದಕ್ಕೆ ಚಿತ್ರ ವಿಚಿತ್ರವಾದ ಕಾರಣಗಳನ್ನು ಹೇಳುತ್ತೀಯೆ, ನಿಷಿದ್ಧವಾದ ಸುಖಾನುಭವದಲ್ಲಿ ಆಸಕ್ತನಾಗುತ್ತೀಯೆ. ನಿನಗೆ ನೀನೇ ಮೋಸವನ್ನು ಮಾಡಿಕೊಳ್ಳುತ್ತೀಯೆ, ನಿನಗೆ ಬಂದ ವಿಪತ್ತುಗಳನ್ನೆಲ್ಲಾ ದೇವರು ಪರಿಹರಿಸಿರುವನು. ಏತಕ್ಕೋಸ್ಕರ ಹೀಗೆ ಮಾಡಿದನೋ ಅದನ್ನು ನೀನು ಗೊತ್ತು ಮಾಡಿಕೊಳ್ಳಲಿಲ್ಲ, ಸಿಸಲಿ, ಈಜಿಪ್ಟ್, ಟೈರ್‌ ಮೊದಲಾದ ಸ್ಥಳಗಳಲ್ಲಿ ನಿನಗೆ ಉಂಟಾದ ವಿಪತ್ತುಗಳು ಸಾಮಾನ್ಯವಾದವುಗಳೇ ? ದೇವರ ಅನುಗ್ರಹದಿಂದ ಆ ವಿಪತ್ತುಗಳು ನಿನಗೆ ತಪ್ಪಲಿಲ್ಲವೇ ? ಸದರಿ ವಿಪತ್ತುಗ ಇನ್ನು ದೇವರು ಏತಕ್ಕೆ ತಪ್ಪಿಸಿದನು ? ಮುಂದೆ ಮಾಡತಕ್ಕ ಕೆಲಸಗಳೇನಿರುವುವೆಂದು