ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11

  • * * * * * *

ಆ " , ಯೋಚಿಸುವುದು ನಿನಗೆ ಕರ್ತವ್ಯವಲ್ಲವೇ ? ಈ ವಿಷಯಗಳನ್ನು ಪರಾಲೋಚಿಸದೆ, ಅಗಮ್ಯಾಗಮನಗಳಲ್ಲಿ ಆಸಕ್ತನಾಗಿ, ಇಹಪರಗಳನ್ನು ಕಳೆದುಕೊಂಡು, ಈ ಕಿನ್ನರಿ ಯರ ಬಲೆಗೆ ಬೀಳುವುದು ನಿನಗೆ ಯೋಗ್ಯವೇ ? ನಿನ್ನ ಬದ್ರಿಯು ಒಂದೊಂದು ನಿಮಿಷಕ್ಕೆ ಒಂದೊಂದು ವಿಧವಾಗುತ್ತದೆ. ಗೋಸುಂಬೆಯ ಅವಸ್ಥೆಯನ್ನು ನೀನು ಹೊಂದುತ್ತಲಿದೀಯೆ. ಕೆಲಿಸ್ಸಳ ಮಾತನ್ನು ಕೇಳಿದಾಗ, ತಂದೆತಾಯಿಗಳನ್ನೂ ಮರೆಯುತ್ತೀಯೆ. ಗುರುಹಿರಿಯರನ್ನೂ ಮರೆಯುತ್ತೀಯೆ. ದೇವರನ್ನೂ ಮರೆ ಯುತ್ತೀಯೆ. ನಾನು ಎದುರಿಗಿರುವಾಗ, ಯೂಲಿಸಸ್ಸನ ಮಗನಂತೆ ನಡೆಯುತ್ತೀಯೆ. ತಪ್ಪುಗಳನ್ನು ಒಪ್ಪಿಕೊಳ್ಳುತ್ತೀಯೆ. ಜಿತೇಂದ್ರಿಯನಂತೆ ಅಭಿನಯಿಸುತ್ತೀಯೆ. ವಿವೇ ಕಿಯಂತೆ ನಡೆಯುತ್ತಿದೆ, ಸಾಮಾನ್ಯ ಜನಗಳು ಈ ರೀತಿಯಲ್ಲಿ ನಡೆಯುವುದು ಸಹಜ, ನೀನು ಸಾಮಾನ್ಯನೇ ? ನಿನ್ನ ತಂದೆತಾಯಿಗಳು ಸಾಮಾನ್ಯರೇ ? ನಿನಗೆ ಮಾಡಲ್ಪಟ್ಟ ಹಿತೋಪದೇಶಗಳು ಸಾಮಾನ್ಯವಾದವುಗಳೇ ? ಇವುಗಳೆಲ್ಲಾ ನಿನಗೆ ಅಧೀನವಾಗಿದ್ದಾಗ್ಯೂ, ಹೀಗೆ ಮೋಹಪರವಶನಾಗಿ, ತಿರಸ್ಟಂತುವಿನ ಅವಸ್ಥೆಗೆ ನೀನು ಬರಬಹುದೇ ? ಮಹಾತ್ಮರಿಗೆ ಸತ್ಸಂಕಲ್ಪವು ಹುಟ್ಟುವುದು, ಅದರಂತೆ ನಡೆಯುವ ಶಕ್ತಿಯು ದೈವಯೋಗದಿಂದ ಕೋಟಿಯಲ್ಲಿ ಒಬ್ಬೊಬ್ಬರಿಗೆ ಬರುವುದು, ಬುದ್ದಿ ಯನ್ನು ಕೆಡಿಸುವ ದುರ್ವಿಷಯಗಳು ಆವರಿಸಿಕೊಂಡಿದ್ದಾಗ್ಯೂ, ಅಂಥಾ ವಿಷಯಗ ಳಿಗೆ ಅವರ ದೃಷ್ಟಿಯು ಬೀಳುವುದಿಲ್ಲ, ಅವರು ಕೇವಲ ಅಂತರು ಬಿಗಳಾಗಿರು ವರು, ನಿನಗೆ ಈ ಯೋಗ್ಯತೆಯು ಇರುವುದಿಲ್ಲ. ಈ ದ್ವೀಪವು ನಿನ್ನ ವಾಸಕ್ಕೆ ಯೋಗ್ಯವಾದದ್ದಲ್ಲ. ಈ ಕಿನ್ನರಿಯರ ಸಹವಾಸವು ನಿನಗೆ ತಕ್ಕದ್ದಲ್ಲ, ಇವ ರಿಂದ ಸುತ್ತುವರಿಯಲ್ಪಟ್ಟಿದ್ದಾಗ, ಸತ್ಸಂಕಲ್ಪಗಳೆಲ್ಲಾ ಉತ್ತರಕ್ರಿಯೆಗಳಾಗುವಂತೆ ನೀನು ಮಾಡಿಕೊಳ್ಳುತ್ತೀಯೆ. ನನ್ನಲ್ಲಿ ಗುರುಭಕ್ತಿ ಇದ್ದಾಗ್ಯೂ, ಇವರ ಮಹಿಮೆ ಯಿಂದ ಅದನ್ನೂ ದೂರಮಾಡುತ್ತೀಯೆ. ಈ ದ್ವೀಪವಾಸವೇ ನಿನ್ನ ಶ್ರೇಯಸ್ಸಿಗೆ ಪ್ರತಿಬಂಧಕವಾಗಿರುವುದು, ಇವರ ಸಹವಾಸವು ನಿನ್ನ ಇಹಪರಗಳನ್ನು ನಾಶಮಾ ಡುವುದಕ್ಕೆ ಸಾಧಕವಾಗಿರುವುದು, ಈ ದ್ವೀಪವನ್ನು ಬಿಡುವುದು ಶ್ರೇಯಸ್ಕರವಾ ದದ್ದು, ಒಂದು ನಿಮಿಷವೂ ಸಾವಕಾಶ ಮಾಡದೆ, ಈ ದ್ವೀಪವನ್ನು ಬಿಟ್ಟು ಹೋಗ ಬೇಕು. ಇದಕ್ಕೆ ನೀನು ಒಪ್ಪಿದರೆ ಸರಿ, ಹಾಗಿಲ್ಲದಿದ್ದರೆ ನೀನು ಬದುಕಿ ಪ್ರಯೋ ಜನವಿಲ್ಲ, ನಿನ್ನನ್ನೂ, ಈ ಕಿನ್ನರಿಯರನ್ನೂ ಸಂಹರಿಸುವುದೇ ನನಗೆ ಕರ್ತವ್ಯವಾಗು