ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತದೆ. ಅವರ ಯೋಗಕ್ಷೇಮವು ನನಗೆ ಬೇಕಾಗಿಲ್ಲ, ನಿನ್ನನ್ನು ಸಂಯುಸಿದರೆ, ಅವ ರನ್ನು ಸಂಹರಿಸಿದಂತೆಯೇ ಆಗುವುದು, ಈ ದ್ವೀಪವನ್ನೂ , ಈ ಕಿನ್ನರಿಯರನ್ನೂ ಬಿಟ್ಟು ಹೋಗುವುದು ಉತ್ತಮ. ನೀನು ಈ ದ್ವೀಪವನ್ನು ಬಿಟ್ಟು ಹೊರಡುವುದಕ್ಕೆ ಸಿದ್ದನಾದರೆ, ನಿನ್ನ ಅಪರಾಧಗಳನ್ನೆಲ್ಲಾ ಮನ್ನಿ ಸುವೆನು. ಹಾಗಿಲ್ಲದಿದ್ದರೆ, ನಿನ್ನನ್ನು ಸಂಹರಿಸಿ, ಹೊರಟು ಹೋಗುವೆನು, ಪೆನಿಲೋಗಳಿಗೂ, ಯೂಲಿಸಸ್ಸಿಗೂ ನಾನೇ ಸ್ವೀಕೃತ ಪುತ್ರನಾಗಿ, ಅವರಿಗೆ ಬಂದಿರತಕ್ಕ ಕಷ್ಟಗಳನ್ನು ತಪ್ಪಿಸುವೆನು, ನಿನ್ನ ಅಭಿಪ್ರಾಯವನ್ನು ತಿಳಿಸು ' ಎಂದು ಹೇಳಿದನು. - ಮೆಂಟರನ ಮಾತುಗಳು ಹೃದಯಶಲ್ಯ ಗಳಾಗಿ ಪರಿಣಮಿಸಿದವು. ವ್ಯಸನವೂ, ನಾಚಿಕೆಯ, ಭಯವೂ ಇವನನ್ನು ಜೀವಶ್ಯ ವವನ್ನಾಗಿ ಮಾಡಿದವು. ಅದುವರೆಗೆ ಅವನಿಗೆ ಸಂಭವಿಸಿದ ಕಷ್ಟಗಳನ್ನು ಮೆ೦ಟರನು ಹೇಗೆ ತಪ್ಪಿಸಿದನೋ ಅವೆಲ್ಲಾ ಒಂದಾಗುತ್ತಲೂ ಒಂದು ಟೆಲಿಮಾಕಸ್ಸನ ಸ್ಮೃತಿಪಥಕ್ಕೆ ಬಂದವು. ಆದಾಗ್ಯೂ, ಕಲಿಸೃಳನ್ನು ಬಿಟ್ಟು ಹೋಗುವುದು ಇವನಿಗೆ ಕಷ್ಟವಾಯಿತು. (ಅಂತರ್ಗತ) ಬಹಳ ಕಷ್ಟ ಕಾಲವು ಬಂದಿತು, ಇವನು ನನ್ನನ್ನು ಸಂಹರಿಸುವುದಕ್ಕೆ ಸಿದ್ದವಾಗಿ ಇದಾನೆ. ಈ ದ್ವೀಪವನ್ನೂ ಬಿಡಬೇಕೆಂದು ಹೇಳು ತಾನೆ. ಕೆಲಿಸ್ಕಳನ್ನು ಪರಿತ್ಯಾಗಮಾಡಬೇಕೆಂದು ಹೇಳುತ್ತಾನೆ. ಅವಳನ್ನೂ ಸಂ ಹರಿಸುವನೆಂದೂ ಹೇಳುತ್ತಾನೆ, ಇದೆಲ್ಲಾ ಇವನಿಗೆ ಸಾಧ್ಯವೇ ? ಇವನಿಗೆ ಪ್ರತಿಭಟಿಸಿ ದರೆ, ನಾನು ಗೆಲ್ಲಲಾರೆನೇ? ಇವನು ವೃದ್ದನು, ನಾನು ಪ್ರಾಯಸ್ಸನು, ಇವನಿಗೆ ಯಾರ ಸಹಾಯವೂ ಇಲ್ಲ ನನಗೆ ಕೆಲಿಸ್ಸಳೇ ಮೊದಲಾದ ಎಲ್ಲಾ ಕಿನ್ನರಿಯರ ಸಹಾಯವೂ ಇರುವುದ , ಈತನ ಮಾತಿಗೆ ಒಪ್ಪುವುದಿಲ್ಲವೆಂದು ನಾನು ಏತಕ್ಕೆ ಹೇಳಕೂಡದು ? ಇವನು ನನ್ನನ್ನು ದಂಡಿಸುವುದಕ್ಕೆ ಪ್ರಯತ್ನ ಮಾಡಿದ್ದಕ್ಕೆ: ನಾನೂ ಅವನನ್ನು ಏತಕ್ಕೆ ಸಂಹರಿಸಕೂಡದು ? ನಮ್ಮ ತಂದೆತಾಯಿಗಳು ಬದುಕಿದ್ದರೆ, ಅವರ ಯೋಗಕ್ಷೇಮಚಿಂತೆಯನ್ನು ಅವರು ಮಾಡಿಕೊಳ್ಳಲಿ. ಅಪ್ರಾರ್ಥಿತವಾಗಿ ನನಗೆ ಲಭ್ಯವಾಗಿರುವ ಈ ಕೆಲಿಸ್ಸಳ ಸಹವಾಸ ಸುಖವನ್ನು ನಾನು ಏತಕ್ಕೆ ಕಳೆದುಕೊಳ್ಳ ಬೇಕು ? ಈ ರೀತಿಯಲ್ಲಿ ಪರಾಲೋಚಿಸಿ, (ಪ್ರಕಾಶ) ' ಎಲೈ ಮೆಂಟರನೇ, ನೀನು ಹೇಳಿದ್ದೆಲ್ಲಾ ನಿಜ, ನನ್ನ ತಂದೆತಾಯಿಗಳು ಬದುಕಿರುವುದಿಲ್ಲ, ಅವರು ದೇಹವನ್ನು ಬಿಟ್ಟಿರುವರು, ಇಸಾಕಾ