ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 4/sh - * \ A * * “ ಎಲೈ ಅಡೋವನೇ, - ನಾವು ಕ್ರೀಟ್ ದ್ವೀಪದಿಂದ ಹೊರಟು, ಇಥಾಕಾ ದ್ವೀಪಕ್ಕೆ ಹೋಗಬೇಕೆಂದು ಪ್ರಯಾಣ ಮಾಡಿ, ಅನೇಕ ವಿಧವಾದ ವಿಪತ್ತಿಗೆ ಗುರಿ ಯಾದೆವು, ಕೆಲಿನ್ದೀ ಎಂಬ ಕಿನ್ನರಿಯ ದ್ವೀಪ ಸಮಿಾಪದಲ್ಲಿ ನಮ್ಮ ಹಡಗು ಮುಳು ಗಿಹೋಯಿತು, ಹಡಗಿನಲ್ಲಿದ್ದವರೆಲ್ಲರೂ ಸತ್ತರು, ದೈವಯೋಗದಿಂದ ನಾವಿಬ್ಬರು ಮಾತ್ರ ಬದುಕಿಕೊಂಡೆವು. ಬಹಳ ಶ್ರಮಪಟ್ಟು ಈ ದ್ವೀಪದ ತೀರಕ್ಕೆ ಬಂದೆವು. ಕೆಲಿ ಸೃಳೇ ಮೊದಲಾದ ಕಿನ್ನರಿಯರು ನಮ್ಮನ್ನು ಬಹಳ ಆದರದಿಂದ ಕಂಡರು. ಕೆಲಿಪ್ಪಳು ನಮ್ಮ ವೃತ್ತಾಂತವನ್ನು ಕೇಳಿದಳು, ಟೆಲಿಮಾಕಸ್ಸನು ನಮಗೆ ಬಂದ ವಿಪತ್ತುಗ ಳನ್ನೂ, ದೈವಯೋಗದಿಂದ ನಾವು ಹೇಗೆ ತಿ ವಿಪತ್ತುಗಳನ್ನು ಜಯಿಸಿದೆವೋ ಅದರ ವೃತ್ತಾಂತವನ್ನೆಲ್ಲಾ ಶೃತಪಡಿಸಿದನು, ಅವಳು ಇವನಲ್ಲಿ ಅನುರಕ್ತಳಾದಳು. ನಾನಾ ವಿಧವಾದ ಇಂದ್ರಜಾಲ, ಮಹೇಂದ್ರಜಾಲ ವಿದ್ಯೆ ಗಳಿಂದಲೂ, ಅಪ್ರತಿಹತವಾದ ಮೋಹಪಾಶದಿಂದಲೂ ಇವನನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂದು ಪ್ರಯತ್ನ ಮಾಡಿದಳು. ಅದಕ್ಕೆ ಅವಕಾಶವು ನಾನು ಕೊಡಲಿಲ್ಲ. ನನ್ನನ್ನೂ ತನ್ನ ಪಾಶಕ್ಕೆ ಹಾಕಿಕೊಳ್ಳಬೇಕೆಂದು ಪ್ರಯತ್ನ ಮಾಡಿದಳು. ಅದು ಸಾಗಲಿಲ್ಲ ತನ್ನ ಕಿನ್ನರಿ ಯರಲ್ಲಿ ಅನೇಕರನ್ನು ಬಿಟ್ಟು, ನನ್ನನ್ನು ಮರುಳು ಮಾಡುವ ಪ್ರಯತ್ನವನ್ನು ಮಾಡಿ ದಳು. ಆ ಪ್ರಯತ್ನಗಳೆಲ್ಲಾ ನಿಷ್ಪಲವಾದವು ಮನ್ಮಧರ ಸಹಾಯವನ್ನು ಪಡೆದು, ಅವನಿಂದ ದುರ್ವಿಷಯಗಳಿಗೆ ಬೀಳುವಂತೆ ಪು ಸ್ಪಬಾಣಪ್ರಯೋಗವನ್ನು ಮಾಡಿಸಿದಳು. ಆ ಬಾಣಗಳು ನನ್ನಿಂದ ಹಿಂತಿರುಗಿದವು. ಟಿವಿಮಾಕಸ್ಸನ ಮೇಲೆ ಹಾಕಲ್ಪಟ್ಟ ಬಾಣಗಳು ಫಲಕಾರಿಯಾದವು. ಈ ತನು ಅವರ ಮೋಹಪಾಶಕ್ಕೆ ಸಿಕ್ಕಿ ದನು, ಯೂಲಿಸಸ್ಸನು ಸ್ವರ್ಗಸ್ಥನಾದನೆಂಬದಾಗಿಯೂ, ಪೆಲೊಪಳು ದೇಹವನ್ನು ಬಿಟ್ಟಳೆಂಬದಾಗಿಯೂ, ಇಫಾ ಕಾ ಪಟ್ಟಣಕ್ಕೆ ಹೋಗಿ ಮಾಡ ತಕ್ಕ ಕಾರೈಗಳೇನೂ ಇರುವುದಿಲ್ಲವೆಂಬದಾಗಿಯೂ, ತಾನು ಅ ಮತಳೆಂಬದಾಗಿಯೂ, ತನ್ನನ್ನು ವಿವಾಹ ಮಾಡಿಕೊಂಡರೆ, ಅವನಿಗೂ ಅವತತ್ವವು ಬರುವುದೆಂಬದಾಗಿ ಯ, ಆಚಂದ್ರಾರ್ಕ ವಾಗಿ ವಿಷಯ ಸುಖಗಳನ್ನು ಅನುಭವಿಸುತ್ತಲಿರಬಹುದೆಂಬದಾಗಿಯ , ಇಥಾಕಾ ಪಟ್ಟಣದಲ್ಲಿ ಕ್ಷಣಭಂಗುರವಾದ ಮತಣ್ಯಸುಖವನ್ನು ಅನುಭವಿಸುವುದಕ್ಕಿಂತ ತನ್ನೊ ಡನೆ ನಿತ್ಯ ಸುಖವನ್ನು ಅನುಭವಿಸಿಕೊಂಡು, ಆ ದ್ವೀಪದ ಸಾಮ್ರಾಜ್ಯವನ್ನು ಅನುಭವಿ ಸುವುದು ಉತ್ತಮವೆಂಬದಾಗಿಯ, ಅವನಿಗೆ ಹೇಳಿ, ತನ್ನ ಮಾತಿನಲ್ಲಿ ನಂಬಿಕೆ