ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯನ್ನು ಹುಟ್ಟಿಸಿದಳು. ಆ ರಳು ಹೇಳಿದ ಮಾತುಗಳು ಸತ್ಯವಲ್ಲವೆಂಬದಾಗಿಯೂ, ಯೂಲಿಪಸ್ಸನೂ, ಸೆಸಿಲೋಪಲೂ ಬದುಕಿರುವರೆಂಬದಾಗಿಯೂ, ಅವನ ಕರ್ತವ್ಯವು ಪೂರೈಸಲಿಲ್ಲವೆಂಬದಾಗಿ.., ಇ೦ದ್ರಿಯಪರವಶನಾಗಿ, ಮಾತಾಪಿತೃಗಳ ಸೇವೆಯಲ್ಲಿ ಪರಾ ಖನಾಗುವುದು ತಸ್ಸೆಂಬದಾಗಿಯೂ ನಾನು ಎಷ್ಟೋ ಹೇಳಿದೆನು. ಇವೆಲ್ಲಾ ಪುರಾಣ ವೈರಾಗ್ಯವನ್ನು ಕಲ್ಪಿಸಿದವೇ ಹೊರತು, ಇವನ ಅನುಷ್ಟಾನಕ್ಕೆ ಬರಲಿಲ್ಲ' ಕೆಲಿಸ್ಸಳ ಮಾತಿನಲ್ಲಿ ಇವನಿಗೆ ಪದ್ಧವು ಉಂಟಾಯಿ ತೇ ಹೊರತು, ನನ್ನ ಮಾತಿನಲ್ಲಿ ನಂಬಿಕೆಯು ಉಂಟಾಗಲಿಲ್ಲ. ನನ್ನ ಆಜ್ಞೆಗಳನ್ನು ಉಲ್ಲಂಘಿಸಿದನು. ಈ ಮೋಹ ಮಹಿಮೆಯಿಂದ ನನ್ನಲ್ಲಿದ್ದ ಪ್ರೀತಿಯ ಹೋಯಿತು, ಸರ್ವ ಪ್ರಯತ್ನದಿಂದಲೂ ನನ್ನನ್ನು ಸದರಿ ದ್ವೀಪದಿಂದ ಹೊರಡಿಸಿ, ತಾನು ಕೆಲಿಸ್ಥಳ ಸೇವಕನಾಗಿರಬೇಕೆಂದು ಇವನು ನಿಷ್ಕ ರ್ಮಿಸಿದನು. ದೈವಯೋಗದಿಂದ ಯೂಕಲಕ್ ಎಂಬ ಕಿನ್ನರಿಯು ಇವನಲ್ಲಿ ಆಸಕ್ತಳಾದಳು. ಅವಳಲ್ಲಿ ಟಿಕಸ್ಸನು ಅನುರಕ್ತನಾದನು. ಇದ ರಿಂದ ಈ ಇಬ್ಬರು ಕಿನ್ನರಿಯರಿಗೂ ಪರಸ್ಪರ ದ್ವೇಷವು ಹುಟ್ಟಿ ತು. ಅವರಿಂದ ಇವನನ್ನು ರಕ್ಷಿಸುವುದಕ್ಕೆ ಈ ಪರಸ್ಪರ ದ್ವೇಷವು ಸ್ವಲ್ಪ ಸಹಾಯ ಮಾಡಿತು, ಇವ ನನ್ನು ಕರೆದುಕೊಂಡು ಹೋಗಬೇಕೆಂದು ಬಹಳ ಕಷ್ಟ ಪಟ್ಟು, ನಾನು ಒಂದು ಹಡ ಗನ್ನು ಕಟ್ಟಿದೆನು. ಅದಕ್ಕೆ ಈ ಕಿನ್ನರಿಯು ಬೆಂಕಿಯನ್ನು ಹಾಕಿಸಿದಳು, ಯಕ ರಿಸ್ಸಳಲ್ಲಿ ಟೆಲಿಮಾಕಸ್ಸನು ಅನುರಕ್ತನಾಗಿದ್ದದ್ದನ್ನು ನೋಡಿ, ಕೆಲಬ್ಬಳು ಟೆಲಿಮಾಕ ಸೃನನ್ನು ಕರೆದುಕೊಂಡು ಹೋಗು ಎಂಬದಾಗಿ ನನಗೆ ಆಜ್ಞೆಯನ್ನು ಮಾಡಿ, ಏಕಾಂತವಾಗಿ ನನಗೆ ಒಂದು ದೋಣಿಯನ್ನೂ ಕೂಡ ಕೊಟ್ಟಳು. ಅನೇಕ ಹಿತೋ। ಪದೇಶಗಳನ್ನು ಮಾಡಿ, ಟೆಲಿಮಾಕಸ್ಸನನ್ನು ಕರೆದು ಕೊಂಡು ಹೋಗುವ ಪ್ರಯತ್ನ ವನ್ನು ಮಾಡಿದೆನು. ಅವನು ಹತೋಟಿಗೆ ಬರಲಿಲ್ಲ, ಆಗ ನನಗೆ ಅಭೂತಪೂರ್ವ ವಾದ ಕೋಪವು ಬಂದಿತು. ಅವನನ್ನು ಸಂಹರಿಸುವುದೇ ಸರಿಯೆಂದು ರೌದ್ರಾವ ತಾರವನ್ನು ವಹಿಸಿದೆನು, ಬಹು ಕಾಲದಿಂದ ಇವನನ್ನು ಪುತ್ರನಿರ್ವಿಶೇಷವಾಗಿ ನೋಡುತ್ತಿದ್ದೆನು. ಅದ್ಭುತವಾದ ಕೋಪವನ್ನು ವಹಿಸಿ, ಇವನನ್ನು ಸಂಹರಿಸುವು ದಕ್ಕೆ ಕತ್ತಿಯನ್ನು ಹಿರಿಯಲು, ಭಯಭ್ರಾಂತನಾಗಿ ಅವನು ಮರ್ಥೆಯಿಂದ ಕೆಳಗೆ ಬಿದ್ದನು, ಕಿನ್ನರಿಯರೆಲ್ಲರೂ ಮೂರ್ಛಿತರಾದರು. ತಕ್ಷಣದಲ್ಲಿಯೇ ಟೆಲಿಮಾಕ ಸೃನನ್ನು ಎತ್ತಿಕೊಂಡು ಬಂದು, ಕಲಿಳಿ೦ದ ಕೊಡಲ್ಪಟ್ಟಿದ್ದ ದೋಣಿಗೆ ಹಾಕಿ, ದಿ |