ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7 • • • • • • • , , , , , ,

  • * * * * * * * * * * * *

+++ ಆದರೆ, ಅವುಗಳಿಗೆ ಅಧೀನನಾಗಿ, ನಿನ್ನ ಕರ್ತವ್ಯಗಳನ್ನು ಮರೆಯುವ ಸ್ಥಿತಿಗೆ ಬಂದರೆ, ಆಗೈ ಅವುಗಳು ನಿಂದ್ಯವಾಗುವುವು, ಲೋಕಸೇವೆಯನ್ನು ಮಾಡತ ಕದ್ದರಲ್ಲಿ ಬೇಜಾರಾದಾಗ, ವಿಶ್ರಾಂತಿ ರೂಪವಾಗಿ ಸಂಗೀತ-ಸಾಹಿತ್ಯಗಳು ಉಪಾ ದೇಯಗಳು, ಇವುಗಳು ನಿಷಯಸುಖಪರವಶತೆಗೆ ಆಕರ್ಷಣಗಳಾಗಿ ಪರಿಣ ಮಿಸಿದರೆ, ಆಗೈ ನಿಂದ್ಯಗಳಾಗುತ್ತವೆ, ಸಂಗೀತ-ಸಾಹಿತ್ಯಗಳು ನಮ್ಮ ಕರ್ತ ವ್ಯವನ್ನು ನೆರವೇರಿಸುವುದಕ್ಕೆ ಸಾಧಕಗಳಾಗಿಯ, ಪ್ರೋತ್ಸಾಹಕಾರಿಗಳಾಗಿಯ ಮಾಡಲ್ಪಡಬಹುದು. ಈಗ ಅಡೋಮನು ನಿನಗೆ ಲಭ್ಯವಾಗುವಂತೆ ಮಾಡಿದ ಸಂತೋಷಾತಿಶಯಕ್ಕೆ ಕಾರಣವಾದ ಸಂಗೀತ-ಸಾಹಿತ್ಯಗಳು ಎಂದಿಗೂ ನಿಂದ್ಯ ವಾದದ್ದಲ್ಲ, ನಿರ್ಭಯವಾಗಿ ಈ ಸುಖವನ್ನು ಅನುಭವಿಸಬಹುದು. ಈ ಸುಖವು ದುರ್ವಿಷಯಕ್ಕೆ ಸಾಧಕವಾದದ್ದಲ್ಲ. ಬುದ್ದಿಯನ್ನು ದುರ್ವ್ಯಾಪಾರಗಳಿಗೆ ಎಳೆ ಯತಕ್ಕ ಸಂದರ್ಭಗಳು ಇಲ್ಲಿ ಲೇಶವೂ ಇರುವುದಿಲ್ಲ. ಧರ್ಮಕ್ಕೆ ಲೋಪ ಬರುವ ಸಂದರ್ಭವೂ ಇರುವುದಿಲ್ಲ. ಈ ಸಂಗೀತ ಸುಖವನ್ನು ನೀನು ನಿರ್ಭ ಯವಾಗಿ ಅನುಭವಿಸು ' ಎಂದು ಹೇಳಿ, ಅಚಿಟ್‌ಸ್ಕನ ಕೈಯಲ್ಲಿದ್ದ ವೀಣೆ ಯನ್ನು ತೆಗೆದುಕೊಂಡು ಮೆಂಟರನು ನುಡಿಸುವುದಕ್ಕೆ ಉಪಕ್ರಮ ಮಾಡಿದನು. ಅಚಿಟೌಸ್ಯನು ತಾನು ವೈಣಿಕ ಶಿಖಾಮಣಿ ಎಂಬದಾಗಿಯೂ, ತನ್ನ ಮಟ್ಟಿಗೆ ವೀಣೆಯನ್ನು ನುಡಿಸತಕ್ಕವರು ಪ್ರಪಂಚದಲ್ಲಿ ಯಾರೂ ಇರುವುದಿಲ್ಲವೆಂಬದಾ ಗಿಯೂ ತಿಳಿದುಕೊಂಡಿದ್ದನು. ಬಹು ಜನಗಳಿಗೆ ಇದೇ ಅಭಿಪ್ರಾಯವು ಇತ್ತು. ಮೆಂಟರು ವೀಣೆಯನ್ನು ನುಡಿಸುವುದಕ್ಕೆ ಉಪಕ್ರಮಿಸಲು, ಇವನಿಗೆ ಆಶ್ಚಯ್ಯ ವಾಯಿತು, ಇವನ ಕಣ್ಣುಗಳಲ್ಲಿಯೂ, ಮುಖದಲ್ಲಿಯ ತೇಜಸ್ಸು ಕಡಮೆ ಯಾಯಿತು. ಮೆಂಟರನ ವೀಣಾಗಾನವು ಸದರಿ ದರ್ಬಾರಿನಲ್ಲಿದ್ದ ಸಲ್ವರಿಗೂ ಅಸಾ ಧಾರಣವಾದ ಸಂತೋಷಪರವಶತೆಯನ್ನುಂಟುಮಾಡಿತು. ಉಸುರು ಬಿಟ್ಟರೆ, ಈ ಗಾನರಸವು ಎಲ್ಲಿ ಕೆಡುವುದೋ ಎಂದು ಜನಗಳು ಉಸುರನ್ನೂ ಕೂಡ ಬಿಡದೆ ಕೇಳು ತಿದ್ದರು, ಸಲ್ವರಿಗೂ ತಾವು ಭೂಮಿಯ ಮೇಲೆ ಇರುತ್ತೇವೋ, ಸ್ವರ್ಗದಲ್ಲಿ ಇರು ಶ್ರೀವೋ ಎಂಬ ಸಂದೇಹ ಉಂಟಾಯಿತು. ವೀಣೆಯ ಜೊತೆಗೆ ವೆಂಟರನು ಕ್ರಮ ಕ್ರಮವಾಗಿ ತನ್ನ ಗಾನವನ್ನೂ ಸೇರಿಸಿದನು. ಇವನ ಶಾರೀರವು ಇವನ ವೀಣೆಯ | ನದಕ್ಕಿಂತ ಕಡಮೆಯಾದ ಸುಖವನ್ನು ಉಂಟುಮಾಡಲಿಲ್ಲ, ಇವನು ನುಡಿಸಿದ