ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟೆ ಲಿಮಾ ಕಪ್ಪನ ಚರಿತ್ರೆ, =0 ಆರನೆಯ ಅಧ್ಯಾಯ. ಎರಡನೆಯ ಭಾಗ. ಈ ಪರೀಕ್ಷೆಯು ಪೂರೈಸಿದ ಕೂಡಲೆ, ಯೋಗಿಗಳಾದ ಪರೀಕ್ಷಕರಲ್ಲಿ ಒಬ್ಬ ಮುಖಂಡನಾದ ಒಬ್ಬ ಮಹರ್ಷಿಯು ಪರೀಕ್ಷೆಯ ಫಲಿತಾಂಶವನ್ನು ಹೇಳುವುದಕ್ಕೆ ಬಂದನು. ಮಹಾಜನಗಳು ಇವನ ಮಾತುಗಳನ್ನು ಕೇಳುವುದಕ್ಕೆ ಆತುರವುಳ್ಳವ ರಾಗಿದ್ದರು. “ ಈ ತನು ನನ್ನ ಕೈಯ್ಯನ್ನು ಹಿಡಿದುಕೊಂಡು, ಮಹಾಜನಗಳಿಗೆ ನನ್ನ ನ್ನು ತೋರಿಸಿ, ಎಲ್ಲಾ ಪರೀಕ್ಷೆಗಳಲ್ಲಿಯೂ ಹೇಗೋ ಹಾಗೆ ಮೈನಾಸನ ಧರ್ಮ ಗಳನ್ನು ನಿರೂಪಿಸುವುದರಲ್ಲಿಯೂ ಕೂಡ ಇವನು ಅಗ್ರಗಣ್ಯ ನಾಗಿರುವನು. ನಮ್ಮ ಪ್ರಶ್ನೆಗಳಿಗೆ ಇವನು ಕೊಟ್ಟಿರುವ ಉತ್ತರಗಳನ್ನು ನೋಡಿದರೆ ಮೈನಾಸನೇ ಇವನಾಗಿ ಅವತರಿಸಿರಬಹುದೆಂದು ನನಗೆ ತೋರುತ್ತದೆ ಎಂದು ಹೇಳಿದನು, ಈ ರೀತಿಯಲ್ಲಿ ಈ ಮಹಷಿ೯ಯ ಹೇಳಿದ್ದನ್ನು ಕೇಳಿ, « ಸರೈ ರೂ ಆನಂದಪರವಶರಾಗಿ, ಏಕವಾಕ್ಯ ತೆಯಿಂದ ಮಹಾತ್ಮನಾದ ಯಲಿನಸ್ಸಿನ ಮಗನಾಗಿಯ, ಮೈನಾಸನ ಅವತಾರವಾ ಗಿಯೂ, ಈ ದ್ವೀಪ ನಿವಾಸಿಗಳ ಭಾಗ್ಯ ದೇವತೆಯಾಗಿಯೂ, ನನ್ನನ್ನು ರಕ್ಷಿಸುವುದ ಕ್ರೋಸ್ಕರ ದೈವಪ್ರೇರಣೆಯಿಂದ ಬಂದಿರತಕ್ಕೆ ಈ ಟಿಲಿನ ಕಸ್ಸನೇ ನಮ್ಮ ಪ್ರಭು ವಾಗಬೇಕು ' ಎಂದು ಸಲ್ವರೂ ಏಕ ಕಂತೃದಿಂದ ಉದ್ಯೋಷ ಮಾಡಿ, ಪ್ರಭುತ್ವ ವನ್ನು ಸ್ವೀಕರಿಸಬೇಕೆಂದು ನನ್ನನ್ನು ಪ್ರಾರ್ಥಿಸಿದರು, ಆ ಪಟ್ಟಣದ ಸುತ್ತ ಮುತ್ತಲೂ ಇದ್ದ ಪರ್ವತಗಳಿಂದ ಇವರ ಪ್ರಾರ್ಥನೆಯ ಪ್ರತಿಧ್ವನಿಯು ಬಂದ ದ್ದನ್ನು ಕೇಳಿ, ಪುನಃ ಪುನಃ ಇವರು ಪ್ರಾರ್ಧಿಸುವಂತೆ ನನಗೆ ತೋರಿತು. ಸ್ವಲ್ಪ ಹೊತ್ತು ಮೌನವಾಗಿದ್ದು, ನಾನು ಮೆಂಟರನ ವಖವನ್ನು ನೋಡಿದೆನು. ಅವನ ಮನೋಗತವು ನನ್ನ ಮನೋಗತದಂತಯೇ ಇರುವುದೆಂದು ನನಗೆ ತೋರಿತು. ಆದಾಗ್ಯೂ ದುರಾಸೆಯಿಂದ ನನ್ನ ಕರ್ತವ್ಯವನ್ನು ನಾನು ಎಲ್ಲಿ ಮರೆತೇನೋ ಎಂಬ ಭೀತಿಯು ಮೆಂಟರಗೆ ಉಂಟಾಯಿತು.” ಆತನು ಪಿಸುಮಾತಿನಲ್ಲಿ ನನ್ನನ್ನು ಕುರಿತು ಹೇಳಿದ್ದೇನಂದರೆ