ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ದಿಂದಲಗಿ ರಾಜ್ಯಭಾರ ಮಾಡತಕ್ಕವನೇ ಶ್ರೇಷ್ಠ ನೆಂಬದಾಗಿಯೂ ಮತ್ತೆ ಕೆಲ ವರು ಹೇಳಿದರು, ಕೊನೆಗೆ ನನ್ನ ಸರದಿಯು ಬಂದಿತು, ನಾನು ಹೇಳಿದ್ದೆ ನೆಂದರೆ :- “ ಸಮಾಧಾನದ ಕಾಲದಲ್ಲಿ ಚನ್ನಾಗಿ ರಾಜ್ಯಭಾರ ಮಾಡುವುದೂ, ಯುದ್ಧ ಬಂದರೆ, ದೈನ್ಯದಿಂದ ಶತ್ರುಗಳನ್ನು ನಿಗ್ರಹಿಸುವುದೂ ಇವೆರಡು ಗುಣಗಳೂ ಯಾರಿಗಿರುತ್ತವೋ ಅವನು ಪೂರ್ಣ ಪ್ರಭುವು, ಒಂದೇ ಗುಣವಿದ್ದರೆ, ಅವನು ಅಧರ್ಮಪ್ರಭುವು, ಬರೀ ಯುದ್ದದಲ್ಲಿ ಶೂರನಾಗಿದ್ದರೆ, ಅವನು ಪ್ರಭುವಾಗು ಇದಕ್ಕೆ ತಕ್ಕ ಅರ್ಹತೆಯುಳ್ಳವನಾಗುವುದಿಲ್ಲ, ಸಮಾಧಾನ ಕಾಲದಲ್ಲಿ ಚೆನ್ನಾಗಿ ರಾಜ್ಯಭಾರ ಮಾಡುವುದು ಒಂದು ಮಾತ್ರ ತಿಳಿದಿದ್ದರೆ, ಯುದ್ಧ ಸಂಘಟನೆಯಾ ದಾಗ ಪರಾಜಿತನಾಗುವ ಸಂಭವವು ಬರುವುದು, ಈ ಎರಡು ಶಕ್ತಿಗಳೂ ಯಾರಿ ಗಿರುವುವೋ ಅವನು ಪ್ರಭುತ್ವಕ್ಕೆ ಅರ್ಹನಾಗುವನು. ಇವೆರಡು ಗುಣಾತಿಶ ಯಗಳೂ ಒಬ್ಬ ನಲ್ಲಿ ಇದ್ದರೆ, ಸಮಾಧಾನದ ಕಾಲದಲ್ಲಿ ನತ್ಯದಿಂದಲ, ಧರ್ವು ದಿ೦ದಲೂ, ನಿಷ್ಪಕ್ಷಪಾತತೆಯಿಂದಲೂ ಯುದ್ಧ ಮಾಡುವ ಶಕ್ತಿಯು ಅವನಿಗೆ ಅದ್ಭವಾಗುವುದು, ಪ್ರಭು ಶಕ್ತಿಯುಳ್ಳವನು ತಾನೇ ಯುದ್ಧಕ್ಕೆ ಹೋಗತಕ್ಕ ಆವಶ್ಯಕವಿಲ್ಲ, ಸಮರ್ಥರಾದ ಯೋಧರನ್ನು ನಿಯಮಿಸಿ, ಅವರಿಂದ ಜಯ ವುಂಟಾಗುವಂತೆ ಮಾಡಿಕೊಳ್ಳುವುದು ಸಾಧ್ಯ, ಯುದ್ಧದಲ್ಲಿ ವಿಶೇಷ ಆಸಕ್ತಿ ಯುಳ್ಳವನು ಪ್ರಭುವಾಗಿದ್ದರೆ, ಯಾವಾಗೂ ಶತ್ರುಗಳನ್ನು ನಿಗ್ರಹಿಸಿ, ಹೊಸ ದೇಶಗಳನ್ನೂ, ಕೀರ್ತಿಯನ್ನೂ ಸಂಪಾದಿಸಬೇಕೆಂಬ ದುರಾಸೆಯು ಅವನಿಗೆ ಹೆಚಾ ಗಿ ಉಂಟಾಗುವುದು ಸಮಾಧಾನದ ಕಾಲದಲ್ಲಿ ಶಾಂತಿಯಿಂದ ರಾಜ್ಯ ಭಾರ ಮಾಡಿ, ಎಲ್ಲರನ್ನೂ ಸುಖವಾಗಿಟ್ಟುಕೊಂಡು, ತಾನೂ ಸುಖವಾಗಿರಬೇ ಕೆಂಬ ಪ್ರಭುವು ಹೀಗೆ ಪ್ರವರ್ತಿಸುವುದಿಲ್ಲ. ಯುದ್ಧಾ ಸಕ್ತಿಯು ಬಹಳ ಅನ ರ್ಥಕ್ಕೆ ಅವಕಾಶ ಉಂಟುಮಾಡುವುದು, ಅನೇಕ ಸಂದರ್ಭಗಳಲ್ಲಿ ಜಯವು ಪರಾಜಯಕ್ಕಿಂತಲೂ ಅನರ್ಥಕಾರಿಯಾಗುವುದು, ಕಕ್ಷಿಗಾರರು ಒಬ್ಬರನ್ನು ಒಬ್ಬರು ಮೂಲೋತ್ಪಾಟನ ಮಾಡಬೇಕೆಂದು ಕೋರ್ಟುಗಳಿಗೆ ಹೋಗಿ ಗುದ್ದಾ ಡುವರು, ಸುಳ್ಳು, ತಟವಟ ಮೊದಲಾದವುಗಳಿಂದ ಗೆಲ್ಲುವ ಪ್ರಯತ್ನವನ್ನು ಮಾಡುವರು. ರುಜುಮಾರ್ಗವನ್ನು ಬಿಟ್ಟು, ಗೆಲ್ಲುವುದಕ್ಕೋಸ್ಕರ ಪ್ರವರ್ತಿಸಿ, ಗೆದ್ದವರೂ ಕೂಡ ಸೋತವರುತೆ ಸಂಕಟ ಪಡುವರು, ಸೋತವರು ಸತ್ತಂತೆ ಸಂಕಟ ಪಡುವರು, ಹಾಗೆಯೇ ಯುದ್ಧದಲ್ಲಿ ಆಗಸ್ಯರಾದ ಪ್ರಭುಗಳ ಗತಿಯು ಹೀಗೆ ಆಗುವುದು. ಆದುದರಿಂದ ಪ್ರಭುಗಳು ಸ್ವಯು ಯುದ್ಧದಲ್ಲಿ ಆಸಕ್ತರಾ ಗುವುದು ಒಳ್ಳೆಯದಲ್ಲ, ಯುದ್ಧವು ಸಂಭವಿಸಿದಾಗ, ಪರಾಕ್ರಮಶಾಲಿಗಳಾದ